ಆಮ್ಲ ಮಳೆ, ಓಝೋನ ಪದರು ನಾಶ ಜಾಗತಿಕ ಸಮಸ್ಯೆ

0
73

ಕನ್ನಡಮ್ಮ ಸುದ್ದಿ, ಧಾರವಾಡ: ಆಮ್ಲಮಳೆ ಪ್ರಕೃತಿಯ ಮೇಲೆ ಮಾನವ ಹೂಡಿದ ಸಮರ, ಅದು ಸರ್ವನಾಶದ ಹೊಳೆ ಎಂದು ರಾಜ್ಯ ಪರಿಸರ ಸಂರಕ್ಷಣಾ ಜಾಗೃತಿ ವೇದಿಕೆ ಕಾರ್ಯದರ್ಶಿ ವೀರಣ್ಣ ಒಡ್ಡಿÃನ ಹೇಳಿದರು.
ತಾಲೂಕಿನ ವೀರಾಪೂರ ಸರಕಾರಿ ಪ್ರೌಢಶಾಲೆಯಲ್ಲಿ “ಸಹ್ಯಾದ್ರಿ ಪರಿಸರ ಸಂಘ’ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ `ಆಮ್ಲಮಳೆ’ ಕುರಿತು ಮಾತನಾಡಿ, ಆಮ್ಲ ಮಳೆಗೆ ಕಾರಣವಾದ ಸಾರಜನಕ, ಗಂಧಕ, ಇಂಗಾಲದ ಆಕ್ಸೆöÊಡಗಳು ವಿಶ್ವದಾದ್ಯಂತ ಅಲ್ಲಲ್ಲಿ ಇರುವ ಸುಂದರ ಶಿಲ್ಪಗಳು, ಕಟ್ಟಡಗಳು ಹಾಳಾಗುತ್ತಿರುವುದು ವಿಷಾದಕರ. ವಿಶ್ವವಿಖ್ಯಾತ ತಾಜಮಹಲ್, ಅಥೆನ್ಸನ ಪಾರ್ಥೆನಾನ್ ದೇವಾಲಯ, ರೋಮ್‌ದ ಕಲೋಸಿಯಂ ಹಾನಿಗೊಳಗಾಗಿರುವುದು ದುರದೃಷ್ಟಕರ ಎಂದರು.
ಅಮೇರಿಕಾ, ಜರ್ಮನ, ಫ್ರಾನ್ಸ್, ಕೆನಡಾ ದೇಶಗಳಲ್ಲಿ ಮಣ್ಣು ನಿಸ್ಸಾರವಾಗಿದ್ದು, ಅರಣ್ಯಗಳು ಬೋಳಾಗಿವೆ. ನ್ಯೂಯಾರ್ಕಿನ ಅಡಿದಾನ್‌ಡಾಕ್ ಪರ್ವತದಲ್ಲಿರುವ ಇನ್ನೊರು ಪರ್ವತಗಳು ಮೀನು ರಹಿತವಾಗಿವೆ. ಈಗಾಗೇ ಮುಂಬೈ, ಕೊಲ್ಕತ್ತಾ, ಚೈನೈ, ಹೈದ್ರಾಬಾದ, ವಿಶಾಖಪಟ್ಟಣಗಳು ಈ ಪಿಡುಗಿಗೆ ಒಳಗಾಗಿದ್ದು ಭಾರತಕ್ಕೂ ಆತಂಕಕಾರಿಯಾಗಿದೆ. ಜಗತ್ತನ್ನು ಈ ಕಂಟಕದಿಂದ ಪಾರು ಮಾಡುವುದು ಅಗತ್ಯವಾಗಿದೆ ಎಂದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ವೀರಣ್ಣ ಮುರಗೋಡ ಮಾತನಾಡಿ, ಆಮ್ಲ ಮಳೆ, ಓಝೋನ ಪದರು ನಾಶಗಳು ಜಾಗತಿಕ ಸಮಸ್ಯೆಗಳಾಗಿದ್ದು ವಾಯುಮಾಲಿನ್ಯ ತಡೆಗಟ್ಟಲೇಬೇಕಾಗಿದೆ. ಪ್ರಕೃತಿಯ ಸಮತೋಲನ ಕಾಪಾಡಲು ಅರಣ್ಯಗಳ ಅಭಿವೃದ್ಧಿಗೆಗಮನ ಹರಿಸಬೇಕಿದೆ ಎಂದರು.
ವಿಜ್ಞಾನ ಶಿಕ್ಷಕಿ ಸ್ಮಿÃತಾ ವಡಗಾಂವಿ ಮಾತನಾಡಿ, ಆಮ್ಲ ಮಳೆಯಂತೆ ಓಝೋನ ನಾಶವೂ ಸಹ ಮನುಕುಲಕ್ಕೆ ಮಾರಕವಾಗಿದ್ದು, ಸಸ್ಯ, ಪ್ರಾಣಿಗಳಿಗೂ ಕಂಟಕಪ್ರಾಯವಾಗಿದೆ. ಸೂರ್ಯನ ಅಪಾಯಕಾರಿಯಾದ ಅತಿನೇರಳೆ ಕಿರಣಗಳು ಭೂಮಿಗೆ ಅಪ್ಪಳಿಸುವುದರಿಂದ ಕ್ಯಾನ್ಸರ್ ರೋಗಕ್ಕೆ ಕಾರಣವಾಗಿ, ಕುರುಡುತನವೂ ಉಂಟಾಗಬಹುದು ಎಂದರು.
ಮುಖ್ಯಾಧ್ಯಾಪಕ ಎಚ್. ಆರ್. ಕುಲಕರ್ಣಿ ಪರಿಸರ ರಕ್ಷಣೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಪ್ರತಿಭಾ ಎಸ್. ಪಾಟೀಲ, ಯು. ಎಸ್. ಪಾಟೀಲ, ಸುರೇಶ ತಂಟಕ್ಕನವರ, ಎಂ. ದೊಡಮನಿ, ಪಿ. ಎಂ. ಭಾಂಗಡೆ ಇದ್ದರು. ಮಿನಾಕ್ಷಿ ಕಳ್ಳಿಬಡ್ಡಿ ನಿರೂಪಿಸಿದರು. ಮಹಾಂತೇಶ ನರೇಗಲ್ಲ ಸ್ವಾಗತಿಸಿದರು. ಅನಿಲ ಮಾಳಗಿ ವಂದಿಸಿದರು.

loading...