ಆಯುಧ ಪೂಜೆಯಂದು ಬೆಳಗಾವಿ ನಗರದಲ್ಲಿ ಭೀಕರ ಕೊಲೆ

0
19

 

 

ಬೆಳಗಾವಿ

ಕೆಲವು ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ನಗರದ ಶೇಖ್ ಆಸ್ಪತ್ರೆಯ ಬಳಿ ನಡೆದಿದೆ.

ಹತ್ಯೆಯಾದ ಯುವಕನನ್ನು ಶೆಹಬಾಜ್ ರೌಡಿ ಎಂದು ಗೊತ್ತಾಗಿದೆ ಆದ್ರೆ ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ

ದುಷ್ಕರ್ಮಿಗಳು ಶೇಖ್ ಆಸ್ಪತ್ರೆಯ ಬಳಿ ಶೇಹಬಾಜ್ ಮೇಲೆ ಅಟ್ಯಾಕ್ ಮಾಡಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶೆಹಬಾಜ್ ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ.

ಶೆಹಬಾಜ್ ಸಾವಿನ ಸುದ್ಧಿ ಹರಡುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಯ ಬಳಿ ನೂರಾರು ಯುವಕರು ಸೇರಿದ್ದರು ,ಪೋಲೀಸರು ಯುವಕರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಬಳಿ ಬಿಗಿ ಪೋಲೀಸ್ ಬಂದೋಬಸ್ತಿ ನಿಯೋಜಿಸಲಾಗಿದ್ದು ಹಿರಿಯ ಪೋಲೀಸ್ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿ ಕೊಲೆಗೈದ ಆರೋಪಿಗಳ ಶೋಧಕ್ಕೆ ಪೊಲೋಸರು ಬಲೆ ಬಿಸಿದ್ದಾರೆ.

loading...