ಆರು ಜನ ಸಾಧಕರಿಗೆ ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ ಘೋಷಣೆ

0
50

ವಿಜಯಪುರ17ಜ.16: ಕರ್ನಾಟಕ ಸರ್ಕಾರದ ವಿಜಯಪುರ ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರತಿ ವರ್ಷ ಮೂರು ಜನ ಸಾಧಕರಿಗೆ ಪ್ರಶಸ್ತಿ ನೀಡುವ ಯೋಜನೆಯಡಿ 2013 ಮತ್ತು 14ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ 6 ಜನರನ್ನು ಆಯ್ಕೆ ಮಾಡಿದೆ.
2013ನೇ ಸಾಲಿನ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಪ್ರಶಸ್ತಿಗೆ ಡಾ: ವಿದ್ಯಾಶಂಕರ, ಡಾ: ಧರಣಿದೇವಿ ಮಾಲಗತ್ತಿ, ಡಾ: ಅಮೃತ ಸೋಮೇಶ್ವರ ಇವರನ್ನು ಆಯ್ಕೆ ಮಾಡಲಾಗಿದೆ.
2014ನೇ ಸಾಲಿನ ಪ್ರಶಸ್ತಿಗೆ ಡಾ:ಎನ್.ಎಸ್.ತಾರಾನಾಥ, ಡಾ:ಆರ್.ಸಿ.ಮುದ್ದೇಬಿಹಾಳ, ಡಾ: ವೀರಣ್ಣ ದಂಡೆ ಇವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 51ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರನ್ನೊಳಗೊಂಡಿದೆ. ಹಲಸಂಗಿ ಗೆಳೆಯರಲ್ಲಿ ಓರ್ವರಾದ ಡಾ: ಸಿಂಪಿ ಲಿಂಗಣ್ಣನವರ ಜನ್ಮ ದಿನವಾದ ಫೆ.11ರಂದು ಪ್ರಶಸ್ತಿ ಪ್ರಧಾನಸಮಾರಂಭವನ್ನು ಆಯೋಜಿಸಲಾಗುವುದು ಎಂದು ಹಲಸಂಗಿ ಗೆಳೆಯರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here