ಆರೋಪ ಪ್ರತ್ಯಾರೋಪ ಸಾಕು ಮಾಡಿ

0
11

ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ತಮ್ಮ  ಮನದಾಳದ ಬಯಕೆ ಹೊರ ಹಾಕುವಾಗ  ಶಾಸಕರಿಗೆ ಅವಮಾನ ಆಗುವಂತೆ ಮಾತನಾಡಿದರಂತೆ ಅದಕ್ಕೆ  ಕನ್ನಡ ಮತ್ತು ಸಂಸ್ಕ್ತ್ರತಿ ಸಚಿವರು ಆಕ್ಷೇಪವೆತ್ತಿದ್ದಾರೆ. ಸಾಹಿತಿಗಳು ಸಾಹಿತಿಗಳೇ, ಯಾರ ಹಂಗಿಗೂ ಒಳಗಾಗದವರು. ಕನ್ನಡ ನಾಡು, ಕನ್ನಡ ನುಡಿ , ಕನ್ನಡ ಸಂಸ್ಕ್ಕತಿ  ರಕ್ಷಣೆಗೆ ಸರಕಾರಕ್ಕೆ ಸಲಹೆ ಸೂಚನೆ ಕೊಟ್ಟಾಗ ಅಧಿಕಾರದಲ್ಲಿರುವ  ಸಚಿವರಾಗಲಿ, ಶಾಸಕರಾಗಲಿ ಈ ಬಗ್ಗೆ ಅವರ  ಟೀಕೆ , ಟಿಪ್ಪಣೆ, ತೆಗಳಿಕೆ ಮತ್ತು  ಹೊಗಳಿಕೆಗಳನ್ನು ಸಮಾನತೆಯಿಂದ ಸ್ವೀಕರಿಸುವುದು  ಒಳ್ಳೆಯದು.

ಅದೇ ರೀತಿ ಸಾಹಿತಿಗಳೂ ಕೂಡ ಅದೇ  ಮಾತನ್ನು ಬೈಗಳ ಬದಲು ಬೇರೆ  ಮಾತುಗಳಿಂದ ಎಚ್ಚರಿಸುವದೂ ಕೂಡಾ ಅವಶ್ಯ ಇನ್ನಾದರೂ  ಆರೋಪ ಪ್ರತಾರೋಪಗಳನ್ನು ಬಿಟ್ಟು ಕರ್ನಾಟಕದ ಹಾಗೂ ಕನ್ನಡದ ಹಿತ ಕಾಪಾಡಲಿ.

        ರಾಮಚಂದ್ರ ಢವಳಿ

ಬೆಳಗಾವಿ.

 

 

loading...

LEAVE A REPLY

Please enter your comment!
Please enter your name here