ಆರ್‌ಸಿಯು ಅವಾಂತರ: ೧೦೦ ಅಂಕಕ್ಕೆ ೧೦೧ ಅಂಕ…!

0
156

ಕನ್ನಡಮ್ಮ ಸುದ್ದಿ-ಬೆಳಗಾವಿ: ಸದಾ ಒಂದಿಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿರುವ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಈಗ ಮತ್ತೆ ಸುದ್ದಿಯಲ್ಲಿದೆ. ವಿದ್ಯಾರ್ಥಿನಿಯೊಬ್ಬರಿಗೆ ೧೦೦ಕ್ಕೆ ೧೦೧ ಅಂಕ ನೀಡುವ ಮೂಲಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಡವಟ್ಟು ಮಾಡಿಕೊಂಡಿದೆ.
ಜಿಲ್ಲೆಯ ಅಥಣಿ ಪಟ್ಟಣದ ಬಿ.ಕಾಂ ೬ನೇ ಸೆಮಿಸ್ಟರ್ ವಿದ್ಯಾರ್ಥಿನಿ ಶೈಲಶ್ರಿÃ ಸಾಂವಗಾಂವ ಅವರಿಗೆ ಮಾಡರ್ನ್ ಆಡಿಟಿಂಗ್ ಆ್ಯಂಡ್ ಪ್ರಾಕ್ಟಿÃಸಸ್ ವಿಷಯದಲ್ಲಿ ೧೦೦ ಕ್ಕೆ ೧೦೧ ಅಂಕ ನೀಡಿರುವುದು ಕಾಲೇಜಿನ ಆಡಳಿತ ಮಂಡಳಿಗೆ, ವಿದ್ಯಾರ್ಥಿನಿ ಹಾಗೂ ಪಾಲಕರ ಅಚ್ಚರಿಗೆ ಕಾರಣವಾಗಿದೆ. ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಈ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದ ನಂತರ ವಿದ್ಯಾರ್ಥಿನಿಯ ರಿಸಲ್ಟ್ ಶೀಟ್ ಅಳಿಸಿ ಹಾಕಲಾಗಿದೆ. ಸದ್ಯ ವಿದ್ಯಾರ್ಥಿನಿ ವೆಬ್‌ಸೈಟ್‌ನಲ್ಲಿ ಫಲಿತಾಂಶಕ್ಕಾಗಿ ತನ್ನ ರಿಜಿಸ್ಟರ್ ನಂಬರ್ ಹಾಕಿದರೆ ಇನ್ ವ್ಯಾಲಿಡ್ ರಿಜಿಸ್ಟರ್ ನಂಬರ್ ಎಂದು ಬರುತ್ತಿದೆ. ಹೀಗಾಗಿ ತಾನು ಎಷ್ಟು ಅಂಕ ಗಳಿಸಿದ್ದೆÃನೆ ಎಂದು ತಿಳಿಯದೇ ವಿದ್ಯಾರ್ಥಿನಿ ಗೊಂದಲಕ್ಕೆ ಒಳಗಾಗಿದ್ದಾರೆ.

loading...