ಆರ್‌ಸಿಯು ಏಳ್ಗೆಗೆ ಶ್ರಮಿಸಿದವರು ಪ್ರೊ. ಅನಂತನ್

0
109

ಆರ್‌ಸಿಯು ಏಳ್ಗೆಗೆ ಶ್ರಮಿಸಿದವರು ಪ್ರೊ. ಅನಂತನ್
ಬೆಳಗಾವಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾಗಿದ್ದ ಪ್ರೊ. ಬಿ. ಆರ್.ಅನಂತನ್ ಅವರು ಆರಂಭದ ದಿಸೆಯಲ್ಲಿ ವಿಶ್ವವಿದ್ಯಾಲಯದ ಏಳ್ಗೆಗೆ ಸತತ ಶ್ರಮಿಸಿರುವರು.
ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲಾಭಿವೃದ್ಧಿಯಲ್ಲಿ ಅಮೋಘವಾದ ಕೊಡುಗೆಯನ್ನು ನೀಡಿರುವರು ಅವರು ಹಾಕಿಕೊಟ್ಟ ಯೋಜನೆಗಳು ಇಂದು ನಮಗೆ ಆದರ್ಶಪ್ರಾಯವಾಗಿವೆ.
ನೇರನುಡಿಯ ಸಜ್ಜನಿಕೆಯ ವ್ಯಕ್ತಿತ್ವಅವರದ್ದಾಗಿತ್ತು. ಅವರಿಂದು ಭೌತಿಕವಾಗಿ ನಮ್ಮೊಂದಿಗಿರಲಿಕ್ಕಿಲ್ಲ ಆದರೆ ಅವರ ಆಲೋಚನೆಗಳು ವಿಶ್ವವಿದ್ಯಾಲಯದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ ಎಂದು ಕುಲಪತಿಗಳಾದ ಪ್ರೊ.ಎಂ.ರಾಮಚAದ್ರಗೌಡ ಅವರು ತಿಳಿಸಿದರು.
ರಾಣಿಚನ್ನಮ್ಮ ವಿಶ್ವವಿದ್ಯಾಲಯದವು ಆಯೋಜಿಸಿದ್ದ ಪ್ರೊ. ಬಿ. ಆರ್.ಅನಂತನ್ ಅವರ ಪುಣ್ಯಸ್ಮರಣೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ವಿ.ಟಿ.ಯು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು (ಮೌಲ್ಯಮಾಪನ)ರಾದಪ್ರೊ. ಎಸ್. ಎಮ್. ಹುರಕಡ್ಲಿ, ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್. ಪಾಟೀಲ, ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಪುಣ್ಯಸ್ಮರಣೆಯ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ರಕ್ತದಾನಶಿಬಿರ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

೦೨

loading...