ಆಶ್ರಯ ಫಲಾನುಭವಿಗಳಿಂದ ಜೂ. ೨೯ ರಂದು ಧರಣಿ

0
11

ಗುಳೇದಗುಡ್ಡ: ಕಳೆದ ೨೮ ವರ್ಷಗಳ ಹಿಂದೆ ಪುರಸಭೆ ವತಿಯಿಂದ ಮನೆ ಇಲ್ಲದ ಬಡ ಫಲಾನುಭವಿಗಳಿಗೆ ನಗರದ ಮೂಕೇಶ್ವರಿ ಕೊಳ್ಳದಲ್ಲಿ ನೀಡಿರುವ ೩೩೨ ನಿವೇಶನಗಳು ಅವೈಜ್ಞಾನಿಕವಾಗಿವೆ, ಪುರಸಭೆ ವತಿಯಿಂದ ಈ ನಿವೇಶನಗಳಲ್ಲಿ ಕೆಲವು ಮನೆಗಳನ್ನು ನಿರ್ಮಿಸಿದ್ದು, ಅಲ್ಲಿ ಯಾರೂ ವಾಸಿಸದೇ ಇರುವುದರಿಂದ ಆ ಮನೆಗಳು ನಾಶವಾಗಿಹೋಗಿವೆ. ಇಲ್ಲಿನ ಬಡ ಫಲಾನುಭವಿಗಳಿಗೆ ಹೊಸದಾಗಿ ಬೇರೆ ಕಡೆ ನಿವೇಶನ ನೀಡುವಂತೆ ಆಗ್ರಹಿಸಿ, ಆಶ್ರಯ ಫಲಾನುಭವಿಗಳು ಜೂ.೨೯ ರಂದು ಪುರಸಭೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಫಲಾನುಭವಿಗಳು ಗುರುವಾರ ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸರ್ವೇ ನಂ,೧೯೭ ರಲ್ಲಿ ಅವೈಜ್ಞಾನಿಕವಾಗಿ ಹಂಚಲಾಗಿರುವ ನಿವೇಶನಗಳಲ್ಲಿ ಜನರು ವಾಸಮಾಡಲು ಯೋಗ್ಯವಾಗಿಲ್ಲ. ಈ ಬಗ್ಗೆ ಹಿಂದಿನ ಶಾಸಕರಿಗೆ, ಪುರಸಭೆಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಬಡ ನೇಕಾರರು ಹಾಗೂ ಕೂಲಿಕಾರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮನೆ ಬಾಡಿಗೆ ಕಟ್ಟಲು ಪರದಾಡುವಂತಾಗಿದೆ. ನಮಗೆ ಬೇರೆಕಡೆ ನಿವೇಶನ ನೀಡಿ, ಮನೆ ನಿರ್ಮಿಸಿಕೊಡಬೇಕು ಎಂದು ಧರಣಿ ಸತ್ಯಾಗ್ರಹ ಮಾಡುತ್ತಿದ್ದೆÃವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಬಸುಪಟ್ಟದ, ರುಕ್ಮಿÃಣಿ ಗುಂಡಮಿ, ಠಾಕವ್ವ ರಾವಳ, ಲಕ್ಷಿö್ಮÃಬಾಯಿ ಚವ್ಹಾಣ, ಚನ್ನಮ ಶಿರೂರ, ದುಂಡವ್ವ ಮೊರಬದ, ಶಾಂತವ್ವ ರೂಡಗಿ, ಇಂದ್ರವ್ವ ಮುರನಾಳ, ಗೌರವ್ವ ಯಲಬುರ್ಗಿ, ಮಲ್ಲಿಕಾರ್ಜುನ ಚಕ್ಕಡಿ, ಸಾವಿತ್ರಿ ಗೊಗ್ಗಲ ಮತ್ತಿತರರು ಇದ್ದರು.

loading...