ಆಶ್ರಯ ಮನೆ ಮಂಜೂರ ಮಾಡುವಂತೆ ಮನವಿ

0
42

ಕನ್ನಡಮ್ಮ ಸುದ್ದಿ-ಬೆಳಗಾವಿ: ನಿರಾಶ್ರಿತರಿಗೆ ಆಶ್ರಯ ಮನೆಗಳನ್ನು ಮಂಜೂರ ಮಾಡಬೇಕೆಂದು ಆಗ್ರಹಿಸಿ ಸವದತ್ತಿಯ ಹಲವು ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸವದತ್ತಿ ತಾಲೂಕಿನ ಶಾಂತಿನಗರದಲ್ಲಿ ವಾಸವಾಗಿರುವ ನಿವಾಸಿಗಳು ಕಡು ಬಡ ಕುಟುಂಬಗಳಿದ್ದು, ಹಲವಾರು ವರ್ಷಗಳಿಂದ ಅಲ್ಲಿಯೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೆವೆ.
ಮನೆಗಳಿಗೊಸ್ಕರ ಪುರಸಭೆಗೆ ಹಲವಾರು ಬಾರಿ ಮನೆಗಳಿಗೆ ಅರ್ಜಿ ಸಲ್ಲಿಸಿದರು, ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಹಾಗೂ ಪದೇ ಪದೇ ಮನೆ ಮಂಜೂರು ಆದ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಆದ್ದರಿಂದ ತಾವು ನಮಗೆ ಇರಲು ಸರ್ಕಾರಿ ಜಾಗವನ್ನು ನೀಡಿದರೆ ಗುಡಿಸಲುಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತೆವೆ. ಬಡಕುಟುಂಬಗಳಿಗೆ ಜಾಗ ನೀಡಿ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಾದ ಮಿನಾಕ್ಷೀ ವಾಡೇಕರ,ಶೋಭಾ ವಾಡೇಕರ, ಸುನಂದಾ ವಾಡೇಕರ,ಸಾವಿತ್ರಿ ಶಿಖ್ರೆ,ಬಸವ್ವಾ ಕಿತ್ತೂರ, ನಿಂಬೇವ್ವಾ ಬೀಳಗಿ,ಸಲೀಮಾ ನಧಾಪ್, ಜ್ಯೋತಿ ಈಳಗೇಕರ, ಸೌಮ್ಯಾ ಸಣ್ಣಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.

loading...