ಆಹಾರ ಪದ್ಧತಿ: ಅಮೇರಿಕದ ವಿದ್ಯಾರ್ಥಿಗಳಿಂದ ಅಧ್ಯಯನ

0
14

ವಿಜಾಪುರ 13, ಭಾರತದಲ್ಲಿನ ಆಹಾರ ಪದ್ಧತಿ ಬದಲಾಗುತ್ತಿದೆಯೇ? ಇದು ಕೇವಲ ನಮ್ಮನ್ನು ಮಾತ್ರ ಕಾಡುವ ಸಮಸ್ಯೆ ಅಲ್ಲ. ಅಮೇರಿಕಾದ ವಿಜ್ಞಾನಿಗಳಿಗೂ ಸಹ ಈ ಸಮಸ್ಯೆ ಕಾಡುತ್ತಿದೆ. ಇದಕ್ಕಾಗಿಯೇ ಅಮೇರಿಕಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ವಿಜಾಪುರದಲ್ಲಿ ಬೀಡುಬಿಟ್ಟು ಇಲ್ಲಿನ ಪ್ರೌಢ ಮಕ್ಕಳ ಆಹಾರ ಪದ್ಧತಿ ಹಾಗೂ ಅದರ ಪರಿಣಾಮಗಳ ಕುರಿತು ಅಭ್ಯಾಸ ನಡೆಸಿದ್ದಾರೆ.

ಬಿ.ಎಲ್.ಡಿ.ಇ.ವಿಶ್ವವಿದ್ಯಾಲಯ ಮತ್ತು ಅಮೇರಿಕಾದ ಯೆಮೋರಿ ವಿಶ್ವವಿದ್ಯಾಲಯಗಳು ಮಾಡಿಕೊಂಡ ಪರಸ್ಪರ ಶೈಕ್ಷಣಿಕ ವಿನಿಮಯ ಒಪ್ಪಂದದಂತೆ ಯೆಮೋರಿ ವಿಶ್ವವಿದ್ಯಾಲಯ ಗ್ಲೌಬಲ್ ಹೆಲ್ತ್ ಇನ್ಸಟ್ಯೂಟ್ 5 ಪಿಎಚ್.ಡಿ ವಿದ್ಯಾರ್ಥಿಗಳು ವಿಜಾಪುರದಲ್ಲಿ ಎರಡು ತಿಂಗಳ ಕಾಲ ವಾಸ್ತವ್ಯವಿದ್ದು, ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ, ಬೊಜ್ಜುತನ, ಸ್ಥೂಲತೆ ಮತ್ತು ಅದರ ಆರೋಗ್ಯ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಬಿ.ಎಲ್.ಡಿ.ಇ.ವಿಶ್ವವಿದ್ಯಾಲಯದ ಡಾ.ಶೈಲಜಾ ಪಾಟೀಲ, ಅಮೇರಿಕಾ ಯೆಮೋರಿ ವಿಶ್ವವಿದ್ಯಾಲಯದ ಡಾ.ಸೋಲ್ವಿತ್ ಕನಿಂಗ್ಹ್ಯಾಂ ಮತ್ತು ಡಾ. ವೆಂಕಟನಾರಾಯಣರವರ ಭಾರತದಲ್ಲಿನ ಶಾಲಾ ಮಕ್ಕಳಲ್ಲಿ ಕಾಣುತ್ತಿರುವ ಬೊಜ್ಜುತನ, ಸ್ಥೂಲತ್ವ ಹಾಗೂ ಅಪೌಷ್ಠಿಕತೆ ಕುರಿತ ವರದಿಗೆ ಅಮೇರಿಕಾದ ನ್ಯಾಷನಲ್ ಇನ್ಸಟ್ಯೂಟ್ ಆಫ್ ಹೆಲ್ತ್ ಸೈನ್ಸ್ನಿಂದ ಅನುದಾನ ದೊರೆತಿದೆ. ಭಾರತದ ಬೆರಳೆಣಿಕೆಯ ಸಂಸ್ಥೆಗಳಿಗೆ ಮಾತ್ರ ಈ ಅನುದಾನ ದೊರೆತ್ತಿದ್ದು, ವಿಜಾಪುರದ ಬಿ.ಎಲ್.ಡಿ.ಇ.ಸಂಸ್ಥೆಗೆ ಈ ಅನುದಾನ ದೊರೆತಿರುವುದು ವಿಶೇಷ. ಅದರಡಿಯಲ್ಲಿ ಯೆಮೋರಿ ವಿಶ್ವವಿದ್ಯಾಲಯದ ಅಮಂದಾ, ಸೂಗ್ಲೂರ, ಜೆಮಿಪೋರ್ಟ್ಸ್, ಸಾರಾಥೋರಪೆ ಮತ್ತು ಅಲೇಕ್ಸ್ ಎಂಬ ವಿದ್ಯಾರ್ಥಿಗಳು ಕಳೆದ ವರ್ಷ ಇಲ್ಲಿಗೆ ಆಗಮಿಸಿ ವಿಜಾಪುರ ನಗರ ಹಾಗೂ ಸುತ್ತಲಿನ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಅಭ್ಯಾಸ ನಡೆಸಿದ್ದು, ಅದರ ಮುಂದುವರೆದ ಭಾಗವಾಗಿ ಒಂದು ವರ್ಷದ ನಂತರ ಆಗಿರುವ ಬದಲಾವಣೆಗಳ ಕುರಿತು ಪುನಃ ಮರಳಿ ಅಧ್ಯಯನ ನಡೆಸಲು ಆಗಮಿಸಿದ್ದಾರೆ.

ಅಧ್ಯಯನ ತಂಡಕ್ಕೆ ಬಿ.ಎಲ್.ಡಿ.ಇ.ವಿವಿ ಉಪಕುಲಪತಿ ಡಾ.ಬಿ.ಜಿ.ಮೂಲಿಮನಿ, ರಿಜಿಸಾ್ತ್ರರ್ ಡಾ.ಜೆ.ಜಿ.ಅಂಬೇಕರ, ಪ್ರಾಚಾರ್ಯ ಡಾ.ಎಂ.ಎಸ್.ಬಿರಾದಾರ, ಉಪಪ್ರಾಚಾರ್ಯೆ ಡಾ.ತೇಜಶ್ವಿನಿ, ಡಾ.ಶೈಲಜಾ ಪಾಟೀಲ ಸ್ವಾಗತ ಕೋರಿದರು.

loading...

LEAVE A REPLY

Please enter your comment!
Please enter your name here