ಆ ದಿನಗಳ ನೆನೆದರೆ ಮನಸ್ಸಿಗೆ ಖುಷಿ

0
25

ನನ್ನ ಪಿಯುಸಿ ಶಿಕ್ಷಣ ಬೆಳಗಾವಿಯಲ್ಲಿ ಮುಗಿಸಿ ಧಾರವಾಡಕ್ಕೆ ಪದವಿ ಶಿಕ್ಷಣ ಪಡೆಯಲು ಹೋದ ಕ್ಷಣವದು. ಸುವರ್ಣ ಪದವಿ ಕಾಲೇಜಿನಲ್ಲಿ ಬಿಎ ಮಾಡಲು ಅಂತೂ ಇಂತು ಸೀಟು ಸಿಕ್ಕಿತು. ಕಾಲೇಜಿನ ಮೂದಲ ದಿನ ತುಂಬಾ ಭಯ ಏನೋ ಆತಂಕ ನನ್ನಲ್ಲಿ ಮನೆ ಮಾಡಿತ್ತು.
ನಂತರ ಪರಿಚಯವಾದವಳು ಗೆಳತಿ ಶ್ರಿÃನಿಧಿ. ದಿನ ಕಳಿಯುತ್ತಿದ್ದಂತೆ ನಮ್ಮಿಬ್ಬರ ಪರಿಚಯ ಗಾಢವಾಗಿ ಆತ್ಮಿÃಯ ಗೆಳತಿಯರಾದೇವು. ಈ ಗುಂಪಿಗೆ ಮತ್ತೊಬ್ಬಳು ಸೇರಿಕೊಂಡಳು. ಅವಳೆ ಋತು.
ನಾವು ಮೂವರು ಸೇರಿದರೆ ತುಂಬಾ ಹರಟೆ ಹೊಡೆಯೋರು. ಕಾಲೇಜಿನಲ್ಲಿ ಪಾಠ ಕೇಳುವುದಕ್ಕಿಂತ ಕ್ಯಂಪಸ್‌ನಲ್ಲಿದ್ದುಕೊಂಡು ಹರಟೆ ಹೊಡೆದದ್ದೆÃ ಹೆಚ್ಚು.
ಕ್ಲಾಸ್‌ನಲ್ಲಿ ಲಕ್ರ‍್ಸ್ಗಳಿಗೂ ಕೂಡಾ ತುಂಬಾ ತೊಂದರೆ ಕೊಡುತ್ತಿದ್ದೆÃವು. ಕಾಲೇಜಿನಲ್ಲಿ ಸಮಯ ಕಳೆದದ್ದೆÃ ಗೊತ್ತಾಗುತ್ತಿರಲಿಲ್ಲ. ನಮಗೆ ಮನೆಗೆ ಹೋಗಲು ಬೆಜಾರಾಗುತಿತ್ತು. ಮತ್ತೆÃ ಮರುದಿನ ಕಾಲೇಜಿಗೆ ಹೋಗಿ ಫ್ರೆÃಂಡ್ಸ ಮುಖ ನೋಡುವ ತನಕ ಸಮಾಧಾನವಾಗುತ್ತಿರಲಿಲ್ಲ. ಒಂದಿನ ಕ್ಲಾಸ್ ಪ್ರಾರಂಭವಾಗಿತ್ತು. ಪಾಠ ಮಾಡಬೇಕಾದರೆ ನಮ್ಮ ತಿಂಡಿ ಬಾಕ್ಸ್ನ್ನು ತೆಗೆದು ತಿನ್ನಲು ಶುರುಮಾಡಿದೇವು. ಈ ವಿಷಯ ತಿಳಿದ ಲಕ್ಚರರ್ ಕಡೆಗೆ ಬೈಸಿಕೊಂಡು ಕ್ಲಾಸಿಂದ ಹೊರಹೋಗಿದ್ದು ಉಂಟು.
ಪತ್ರಿಕೋದ್ಯಮ ವಿಷಯ ಬಿಟ್ಟರ ಮತ್ಯಾವ ಕ್ಲಾಸಿಗೂ ನಾವು ಕೂಡುತ್ತಿರಲಿಲ್ಲ. ಈ ತರಗತಿ ಅಂದರೆ ನಮಗೆ ಎಲ್ಲಿಲ್ಲದ ಸಂತೋಷ. ಸರ್ ಮಾತ್ರ ಬೋರಾಗದಂತೆ ಪಾಠ ಮಾಓರು. ಮದ್ಯದಲ್ಲಿ ಎಲ್ಲರನ್ನು ನಗಿಸೋರು. ಪಾಠ ಮುಗಿದದ್ದೆÃ ಗೊತ್ತಾಗುತ್ತಿರಲಿಲ್ಲ. ಅಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರು. ಎಲ್ಲರೂ ಇವರ ಹಾಗೇ ಪಾಠ ಮಾಡಿದರೆ ಎಷ್ಟು ಚೆನ್ನಾಗಿರುತ್ತದಲ್ಲವೇ.
ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮ ಇದ್ದರು ನಾನು, ಋತು, ಶ್ರಿÃನಿಧಿ ಸಂತೋಷ, ಸುನೀಲ್ ಪ್ರವಿಣ್, ಭಾಗವಹಿಸುತ್ತಿದ್ದೆÃವು. ನಾವಿಲ್ಲದಿದ್ದರೆ ಆ ಕಾರ್ಯಕ್ರಮ ಅಪೂರ್ಣವಾಗಿರುತ್ತಿತ್ತು (ನಾವು ಅಷ್ಟೆ ತಿಳಿದುಕೊಂಡದ್ದು ಮತ್ತೆ) ಅಂತ ಅನ್ನಿಸಿದ್ದು ಸಾಕಷ್ಟು ಬಾರಿ.ಪರೀಕ್ಷೆ ಸಮಯದಲ್ಲೂ ನಮ್ಮ ತರಲೆ ನಿಲ್ಲುತ್ತಿರಲಿಲ್ಲ. ಗಂಭೀರವಾಗಿ ಪರೀಕ್ಷೆ ಬರೆದ ಇತಿಹಾಸವೇ ಇಲ್ಲ. ಆದರೂ ನಾವು ಪಾಸಾಗುತ್ತಿದ್ದೆÃವು. ಶಿಕ್ಷಣದ ಪರೀಕ್ಷೆಯಲ್ಲಿ ಪಾಸಾದೇವು. ಆದರೆ, ಜೀವನದ ಪರೀಕ್ಷೆಯನ್ನು ಹೇಗೆ ಎದುರಿಸುತ್ತೆವೆಯೋ ಎಂಬುದು ಮಾತ್ರ ಇನ್ನು ತಿಳಿದಿಲ್ಲ. ಆದರೆ ಉತ್ತಮ ಗೆಳತಿಯರನ್ನು ಕೊಟ್ಟ ಆ ಕಾಲೇಜಿಗೆ ತುಂಬು ಹೃದಯದ ಧನ್ಯವಾದ.ಈಗ ನನ್ನ ಆ ಗೆಳತಿಯರು ನನ್ನೊಂದಿಗಿಲ್ಲ ಎನ್ನುವುದನ್ನು ನೆನಪಿಸಿಕೊಂಡರೆ ಮನಸ್ಸಿನಲ್ಲಿ ಬಿರುಗಾಳಿ ಎದ್ದಂತೆ ಭಾಸವಾಗುತ್ತದೆ. ನಿಮ್ಮನ್ನ ತುಂಬಾ ಮಿಸ್ ಮಾಡ್ಕೊಳ್ತಿನಿ ಡಿರ‍್ಸ್. ಆದರೂ ಅವರನ್ನು ನೆನಪಿಸಿಕೊಳ್ಳುವುದೆಂದರೆ ಮನಸ್ಸಿಗೆ ನೆಮ್ಮದಿ. ಕಾಲೇಜಿನ ದಿನಗಳು ನೆನಪಿಗೆ ಬಂದರೆ ಏನೋ ಒಂತರ ಖುಷಿ ಅಲ್ವಾ…?

loading...