ಇಂಡಿಯನ್‌ ವೆಲ್ಸ್‌ ಓಪನ್‌ನಿಂದ ಹೊರಗುಳಿದ ಶರಪೋವಾ

0
4

ಲಾಸ್ ಎಂಜಲೀಸ್:- ಭುಜದ ಗಾಯದಿಂದ ಇನ್ನೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮರಿಯಾ ಶರಪೋವಾ ಅವರು ಮುಂದಿನ ತಿಂಗಳು ಆರಂಭವಾಗುವ ಡಬ್ಲ್ಯುಟಿಎ ಇಂಡಿಯನ್‌ ವೆಲ್ಸ್‌ ಓಪನ್‌ನಿಂದ ಹಿಂದೆ ಸರಿದಿದ್ದಾರೆ.
31ರ ಪ್ರಾಯದ ರಷ್ಯಾದ ಆಟಗಾರ್ತಿ, ತಮ್ಮ ಬಲ ಭುಜದ ಗಾಯದಿಂದ ಬಳಲುತ್ತಿದ್ದು, ಸೈಂಟ್‌ ಪೀಟರ್ಸ್‌ಬರ್ಗ್‌ ಟೂರ್ನಿಯಲ್ಲೂ ಆಡಿರಲಿಲ್ಲ. ಇದೀಗ ಬಿಎನ್‌ಪಿ ಪರಿಬಾಸ್‌ ಓಪನ್‌ ನಿಂದಲೂ ಹೊರಗುಳಿದಿದ್ದಾರೆ ಎಂದು ಟೂರ್ನಿ ಆಯೋಜಕರು ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ಅಗ್ರ ಆಟಗಾರ್ತಿ ಶರಪೋವಾ ಸೋತು ಹೊರ ನಡೆದಿದ್ದರು. 2017ರಲ್ಲಿ ಡೋಪಿಂಗ್‌ಗೆ ಸಿಲುಕಿ ಅಮಾನತುಗೊಂಡಿದ್ದ ಶರಪೋವಾ, ಅಲ್ಲಿಂದ ಇಲ್ಲಿಯತನಕ ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಟೂರ್ನಿ ಮಾ. 4 ರಿಂದ 17ರವರೆಗೆ ನಡೆಯಲಿದೆ.

loading...