ಇಂಡಿಯನ್ ಜಿಪಿ : ಸುಪ್ರೀಂಕೋರ್ಟ್ನಲ್ಲಿ ತೆರಿಗೆ ವಿನಾಯಿತಿ ವಿಚಾರಣೆ

0
40

ನವದೆಹಲಿ,21-ಫಾರ್ಮುಲಾ ಒನ್ ಕಾರ್ ರೇಸಿಗಾಗಿ ಆಯೋಜಕ ಕಂಪೆನಿಗೆ ಉತ್ತರಪ್ರದೇಶ ಸರಕಾರ ನೀಡಿರುವ ತೆರಿಗೆ ವಿನಾಯಿತಿಯನ್ನು ಪ್ರಶ್ನಿಸಿ ಸರ್ವಜನಿಕ ಹಿತಾಸಕ್ತಿ ದೂರನ್ನು ಸುಪ್ರೀಂಕೋರ್ಟ್ನಲ್ಲಿ ದಾಖಲಿಸಲಾಗಿದೆ.

ಬುದ್ದ ಇಂಟರ್ನ್ಯಾಷನಲ್ ಸರ್ಕ್ಯುಟ್ನಲ್ಲಿ ನಡೆಯಲಿರುವ ಫಾರ್ಮುಲಾ ಒನ್ ಕಾರ್ ರೇಸ್ಗಾಗಿ ತೆರಿಗೆ ವಿನಾಯಿತಿ ನೀಡಿರುವ ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸುಪ್ರೀಂಕೋರ್ಟ್ನ ನ್ಯಯಮೂರ್ತಿ ಡಿ.ಕೆ.ಜೈನ್ ನೇತೃತ್ವದ ನ್ಯಾಯಪೀಠ ಕಾರ ರೇಸ್ ಆಯೋಜಕ ಕಂಪೆನಿಯಾದ ಜೆಪಿ ಗ್ರೂಪ್ಗೆ ನೋಟಿಸ್ ಜಾರಿ ಮಾಡಿದ್ದು, ಕಾರ್ ರೇಸ್ಗೆ ತೆರಿಗೆ ವಿನಾಯಿತಿ ಯಾಕೆ ನೀಡಲಾಯಿತು ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಫಾರ್ಮುಲಾ ಒನ್ ಕಾರ್ರೇಸ್ ರಾಜಧಾನಿಗೆ ಹತ್ತಿರವಿರುವ ಗ್ರೇಟರ್ ನೊಯ್ಡಾದಲ್ಲಿ ಅಕ್ಟೌಬರ್ 30ರಿಂದ ಆರಂಭವಾಗಲಿದೆ.

 

 

loading...

LEAVE A REPLY

Please enter your comment!
Please enter your name here