ಎರಡು ದಿನಗಳ ಕಾಲ ಹೊರರೋಗಿಗಳಿಗಿಲ್ಲ ಚಿಕಿತ್ಸೆ

0
17

ರಬಕವಿ-ಬನಹಟ್ಟಿ,- ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಸರ್ಕಾರದ ಗೂಂಡಾ ವರ್ತನೆ, ಎನ್.ಆರ್.ಎಸ್ ಸಂಸ್ಥೆಯ ಹಿರಿಯ ವೈದ್ಯರ ಮೇಲೆ ಹಲ್ಲೆ ಖಂಡಿಸಿ ರಬಕವಿ-ಬನಹಟ್ಟಿ ತಾಲೂಕಿನ ವೈದ್ಯರಿಂದ ಇಂದು ಸೋಮವಾರ ಹಾಗು ಮಂಗಳವಾರ ಎರಡು ದಿನಗಳ ಕಾಲ ಹೊರರೋಗಿಗಳ ಚಿಕಿತ್ಸೆಯಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಗುವದೆಂದು ತೇರದಾಳ ಇಂಡಿಯನ್ ಮೆಡಿಕಲ್ ಅಶೋಶಿಯನ್ ಅಧ್ಯಕ್ಷ ಡಾ. ಪದ್ಮಜೀತ ನಾಡಗೌಡ ತಿಳಿಸಿದ್ದಾರೆ.
ರಬಕವಿಯ ಡಾ. ಚಿತ್ತರಗಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಲ್ಕತ್ತದ ಎನ್‌ಆರ್‌ಎಸ್ ವೈದ್ಯಕೀಯ ಸಂಸ್ಥೆಯ ಹಿರಿಯ ವೈದ್ಯ ಡಾ. ಪರಭಾ ಮುಖರ್ಜಿ ಮೇಲೆ ರೋಗಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧನ ಹಾಗು ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಲಾಗುವದೆಂದು ಡಾ. ನಾಡಗೌಡ ತಿಳಿಸಿದರು.
ಸಂಘದ ಉಪಾಧ್ಯಕ್ಷ ಡಾ. ಸಂಗಮೇಶ ಹತಪಕ್ಕಿ, ಡಾ. ರವಿ ಜಮಖಂಡಿ, ಡಾ. ಪ್ರಭು ಪಾಟೀಲ, ಡಾ. ಬಾಗಲಕೋಟ, ಡಾ. ವಿನೋದ ಮೇತ್ರಿ, ಡಾ. ಸೋಮನಾಥ ಬಡೇಮಿ, ಡಾ. ಬಿ.ಎಸ್. ಪಾಟೀಲ, ಡಾ. ಮಹಾವೀರ ದಾನಿಗೊಂಡ, ಡಾ. ಜಿ.ಎಚ್. ಚಿತ್ತರಗಿ, ಡಾ. ಕೆ.ಡಿ. ಭದ್ರನ್ನವರ, ಡಾ. ಅಭಿನಂದನ ಹಾಜರಿದ್ದರು.

loading...