ಇಂದು ಸಾಧನೆಯ ಹಿಂದಿನ ಸ್ತ್ತ್ರೀ ಶಕ್ತಿ ಅಭಿನಂದನ ಮಾಲೆ

0
37

ಧಾರವಾಡ, ಮಾ,16 : ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ವತಿಯಿಂದ ಅಂತರಾಷ್ಟ್ತ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಿಮಿತ್ಯ ಸಾಧನೆಯ ಹಿಂದಿನ ಸ್ತ್ತ್ರೀ ಶಕ್ತಿ ಅಭಿನಂದನ ಮಾಲೆ ಸಮಾರಂಭವನ್ನು ಮಾರ್ಚ 16 ರ ಸಂಜೆ 5.30ಕ್ಕೆ ಕ.ವಿ.ವ ಸಂಘದಲ್ಲಿ ಏರ್ಪಡಿಸಿದೆ ಎಂದು ಮಹಿಳಾ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ, ಸಾಧನೆಯು ವ್ಯಕ್ತಿಯನ್ನು ಗೌರವಿಸುತ್ತದೆ ಹಾಗೂ ಅವರಿದ್ದ ಸಮಾಜವೂ ಗೌರವಕ್ಕೆ ಪಾತ್ರವಾಗುತ್ತದೆ ಸಾಧಕನಿಗೆ ತನ್ನ ಆತ್ಮಪ್ರೇರಣೆಯೊಂದೆ ಸಾಲದು ಅವರು ಆಪ್ತರು ಅವರಿದ್ದ ಪರಿಸರಗಳೂ ಪ್ರೇರಣೆ ನೀಡುತ್ತವೆ. ಸಾಧಕನ ಹಿಂದಿನ ಸ್ತ್ತ್ರೀ ಶಕ್ತಿ ಇಲ್ಲದೆ ಅವನಾಗಲಿ ಅವಳಾಗಲಿ ಏನನ್ನೂ ಸಾಧಿಸಲು ಸಾದ್ಯವಾಗದು ಸಾಧನೆಯ ಯಶಸ್ಸಿನ ಕಿರಿಟವನ್ನು ಸಾಧಕನಿಗೆ ಮಾತ್ರ ತೊಡಿಸಿ ಅವನ ಹಿಂದಿನ ಸ್ತ್ತ್ರೀ ಶಕ್ತಿಯನ್ನು ಅವಗಣಿಸಲಾಗುತ್ತದೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಸಂಬಂಧಿಸಿದಂತೆ ಸಾಧಕರ ಬಾಳಸಂಗಾತಿಗಳನ್ನು ಕರೆದು ಅಭಿನಂದಿಸಿ ಅವರ ಸಾಧಕರ ಸಾಧನೆಯ ಹಾದಿಯಲ್ಲಿ ಹೂ-ಮುಳ್ಳುಗಳ, ಸುಖ-ದುಃಖಗಳ ಅನುಭವ ಹೇಳಬೇಕು.ಅದರಲ್ಲಿಇವರ ಪಾಲೆಷ್ಟಿದೆಅನ್ನುವ ಪ್ರಾಮಾಣಿಕವಾದ ಮಾತುಗಳನ್ನು ಸಾಧಕರಿಂದ ಕೇಳುವದರ ಜೊತೆಗೆಅವರ ಮನದಾಳದ ಮಾತನ್ನು ಕೇಳುವ ಉದ್ದೇಶ ಹೊಂದಿದೆ. ತಾಯಿಯಾಗಿ, ಸಹೋದರಿಯಾಗಿ, ಗುರುಮಾತೆಯಾಗಿ, ಹೆಂಡತಿಯಾಗಿ ಹಾಗೂ ಮಗಳಾಗಿ ಅವರು ತೋರಿದ ನಿಷ್ಠೆ ಸೇವೆ, ಪ್ರೀತಿ ತ್ಯಾಗ ಸಾಧಕನಿಗೆ ಬಹಳ ಅಮೂಲ್ಯವಾದವು. ಈ ನಿಟ್ಟಿನಲ್ಲಿ ಕನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಒಂದು ಮಹತ್ವದ ಯೋಜನೆ ಹಾಕಿಕೊಂಡಿದ್ದು ಇದನ್ನು ಮುಂಬರುವ ದಿನದಲ್ಲಿ ರಾಜ್ಯವ್ಯಾಪಿಯಾಗಿ ಕಾರ್ಯ ಮಾಡಲಾಗುವುದು ಎಂದರು.

ಈ ನಿಟ್ಟಿನಲ್ಲಿ ಸಾಹಿತ್ಯ, ಸಂಗೀತ, ನಾಟಕ, ರಾಜಕೀಯ ಸಾಮಾಜಿಕ ಸೇವೆ, ವಿಜ್ಞಾನ, ಶಿಕ್ಷಣ, ವಾಣಿಜ್ಯ, ಪ್ರಕಾಶನ, ವಿಮರ್ಶೆ ಹೀಗೆ ಎಲ್ಲ ಕ್ಷೇತ್ರಗಳ ಸಾಧಕರ ಬಾಳಸಂಗಾತಿಗಳನ್ನು ಕರೆದುಗೌರವಿಸುವ ಉದ್ದೇಶ, ಅಲ್ಲದೆ ಅತ್ಯಂತ ಕುತೂಹಲಕಾರಿಯಾದ ನೋವಿನ, ಹಾಸ್ಯದ ಮುಂತಾದ ಘಟನೆಗಳನ್ನು ಕೇಳುವ ತಿಳಿಯುವ ಎಲ್ಲರ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಉದ್ದೇಶ. ಬರೀ ಪುರುಷರ ಹಿಂದಿನ ಸ್ತ್ತ್ರೀಯರನ್ನು ಅಷ್ಟೇ ಅಲ್ಲ ಸಾಧನೆಯ ಹಿಂದಿನ ಸ್ತ್ತ್ರೀಯರನ್ನು ಗೌರವಿಸೋ ಉದ್ದೇಶ ಹೊಂದಿದೆ ಎಂದರು.

ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಸಾಧನೆಯ ಹಿಂದಿನ ಸ್ತ್ತ್ರೀ ಶಕ್ತಿ ಇಂದುಮತಿ ಪುಟ್ಟಪ್ಪ ಅವರನ್ನು ಈ ಅಭಿನಂದನ ಮಾಲೆಯ ಮೊದಲ ಮಹಿಳೆಯಾಗಿ ಆಯ್ಕೆ ಮಾಡಲಾಗಿದ್ದು ಅಭಿನಂದನ ಮಾಲೆ ಸಮಾರಂಭವನ್ನು ಡಾ.ಲೀಲಾವತಿ ಆರ್.ಪ್ರಸಾದ ಉದ್ಘಾಟಿಸಲಿದ್ದು ಡಾ.ಶಾಂತಾ ಇಮ್ರಾಪೂರ ಅಬಿನಂದನೆ ಸಲ್ಲಿಸಲಿದ್ದಾರೆ. ಶ್ರೀಮತಿ ಇಂದುಮತಿ ಪಾಟೀಲ ಪುಟ್ಟಪ್ಪ ಮನದೊಳಗಿನ ಮಾತು ಹಾಗೂ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಾಧಕರ ಮಾತುಗಳನ್ನಾಡಲಿದ್ದಾರೆ. ಪ್ರೊ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆವಹಿಸಲಿದ್ದು ಸಮಾರಂಭದ ನಂತರ ಶಾರದಾ ಭಜನಾ ಮಂಡಳ ಹಾಗೂ ಪರಮೇಶ್ವರಿ ಮಹಿಳಾ ಮಂಡಳಗಳಿಂದ ಸಾಂಸ್ಕ್ಕತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಮೋಹನ ನಾಗಮ್ಮನವರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here