ಇಂದೂರಿನ ಶ್ರಿÃ ಕಲ್ಮೆÃಶ್ವರನ ಮಹಾರಥೋತ್ಸವ

0
5

 

ಮುಂಡಗೋಡ: ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಇಂದೂರಿನ ಶ್ರಿÃ ಕಲ್ಮೆÃಶ್ವರನ (ದೇವರ) ಮಹಾರಥೋತ್ಸವ ಬುಧವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ರಥೋತ್ಸವ ಅಂಗವಾಗಿ ಕಲ್ಮೆÃಶ್ವರ (ದೇವರ) ಮೂರ್ತಿಗೆ ಬೆಳಿಗ್ಗೆ ವಿಶೇಷ ಅಲಂಕಾರ ಪೂಜೆ ನಡೆಯಿತು. ನಂತರ ಗ್ರಾಮದ ಆರಾಧ್ಯ ದೇವರಾದ ಹುಬ್ಬಳ್ಳಿ ಎರಡೆತ್ತಿನ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಮಂಟೂರ ಅಡವಿಸಿದ್ದೆÃಶ್ವರಮಠದ ಮ.ನಿ.ಪ್ರ.ಸ್ವ. ಶಿವಲಿಂಗೇಶ್ವರ ಮಹಾಸ್ವಾಮಿಗಳು, ಹಾಗೂ ವಿರಕ್ತಮಠ ಬಮ್ಮನಳ್ಳಿ ಮ.ನಿ.ಪ್ರ.ಸ್ವ. ಶಿವಯೋಗೇಶ್ವರ ಮಹಾಸ್ವಾಮಿಗಳು, ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನ ಆವರಣದಿಂದ ಆರಂಭವಾದ ಮಹಾರಥೋತ್ಸವದ ಮೆರವಣಿಗೆ ಡೊಳ್ಳು ಕುಣಿತ, ಸೇರಿದಂತೆ ಗ್ರಾಮದ ಪ್ರಮುಖ ಬೀದಿಯಿಂದ ಬಸವೇಶ್ವರ ದೇವಸ್ಥಾನದವರಗೆ ಸಂಚರಿಸಿತು. ಮಹಿಳೆಯರು, ಮಕ್ಕಳು ಮನೆ ಮುಂದಿನ ಅಂಗಳದಲ್ಲಿ ಬಣ್ಣ-ಬಣ್ಣದ ರಂಗೋಲಿ ಹಾಕುವುದರ ಮೂಲಕ ರಥೋತ್ಸವ ಮೆರವಳಿಗೆಯನ್ನು ಸ್ವಾಗತಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವಕ್ಕೆ ಬಾಳೆ ಹಣ್ಣು ಉತ್ತತ್ತಿ ಎಸದು ದೇವರ ಕೃಪೆಗೆ ಪಾತ್ರರಾದರು. ಸಾಯಂಕಾಲ ೬ ಘಂಟೆಗೆ ಕಡುಬಿನ ಕಾಳಗ ಹಾಗೂ ಓಕುಳಿ ಕಾರ್ಯಕ್ರಮ ನಡೆಯಿತು. ಒಂದು ವಾರದಿಂದÀ ಕಲ್ಮೆÃಶ್ವರಗೆ ವಿಶೇಷ ಪೂಜೆ, ಪುರಾಣ ಪ್ರವಚನ, ಅನ್ನದಾಸೋಹ, ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆದವು. ಕಲ್ಮೆÃಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮೇ ೨ ರಂದು ಇಂದಿನಿಂದ ಮೂರುದಿನಗಳ ಕಾಲ ಜಂಗ್ಗಿ ಕುಸ್ತಿ ಪಂದ್ಯಗಳು ನಡೆಯಲಿದೆ.

loading...