ಇಟಾಲಿಯನ್ ಓಪನ್ ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

0
1

ರೋಮ್ಅ :-ಮೆರಿಕದ ಮಹಿಳಾ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್, ಮೊಣಕಾಲು ನೋವಿನಿಂದ ಬಳಲುತ್ತಿದ್ದು, ಇಲ್ಲಿ ನಡೆಯುತ್ತಿರುವ ಇಟಾಲಿಯನ್ ಓಪನ್ ನಿಂದ ಹೊರಗುಳಿದಿದ್ದಾರೆ.
ಮೊಣಕಾಲಿನ ತೀವ್ರ ನೋವಿನ ಹಿನ್ನೆಲೆಯಲ್ಲಿ, ತನ್ನ ಸಹೋದರಿ ವಿನಿಸ್ ವಿಲಿಯಮ್ಸ್ ವಿರುದ್ಧದ ಎರಡನೇ ಸುತ್ತಿನ ಪಂದ್ಯಕ್ಕೂ ಮೊದಲೇ ಟೂರ್ನಿಯಿಂದ ಸೆರೆನಾ ಹಿಂದೆ ಸರಿದಿದ್ದಾರೆ.
“ಮೊಣಕಾಲು ನೋವಿನಿಂದ ಇಟಾಲಿಯನ್ ಓಪನ್ ನಿಂದ ನಾನು ಹಿಂದೆ ಸರಿಯುತ್ತಿದ್ದೇನೆ” ಎಂದು ಸೆರೆನಾ ವಿಲಿಯಮ್ಸ್ ಮಂಗಳವಾರ ಪ್ರಕಟಿಸಿದ್ದಾರೆ.
“ನನ್ನ ನೆಚ್ಚಿನ ಟೂರ್ನಾಮೆಂಟ್ ನಲ್ಲಿ ಒಂದಾದ ಸ್ಪರ್ಧೆ ಹಾಗೂ ಅಭಿಮಾನಿಗಳಿಂದ ವಂಚಿತಳಾಗುತ್ತಿದ್ದೇನೆ. ನಾನು ಮೊಣಕಾಲು ನೋವು ಗುಣಮುಖಳಾಗಿ ಮುಂದಿನ ವರ್ಷ ನಡೆಯುವ ಫ್ರೆಂಚ್ ಹಾಗೂ ರೋಮ್ ಸ್ಪರ್ಧೆಗಳಲ್ಲಿ ನಿಮ್ಮನ್ನು ಕಾಣಲು ಉತ್ಸುಕಳಾಗಿದ್ದೇನೆ” ಎಂದು ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ.
ಸ್ಪರ್ಧೆಯಿಂದ ಸೆರೆನಾ ಹಿಂದೆ ಸರಿದಿದ್ದರಿಂದ ಅವರ ಸಹೋದರಿ ವಿನಸ್ ವಿಲಿಯಮ್ಸ್, ವಾಕ್ ಓವರ್ ಪದ್ಧತಿ ಮೂಲಕ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 37 ವರ್ಷದ ಸೆರೆನಾ, ದೈಹಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸತತ ಮೂರನೇ ಟೂರ್ನಾಮೆಂಟ್ ನಿಂದ ಹೊರಗುಳಿದ್ದಾರೆ.
ನಾಲ್ಕು ಬಾರಿ ಇಟಾಲಿಯನ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್, 2019ರ ರೋಮ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸ್ವೀಡನ್ ದೇಶದ ರೆಬೆಕಾ ಪೀಟರ್ಸನ್ ವಿರುದ್ಧ 6-4, 6-2ರಿಂದ ಗೆಲುವು ಸಾಧಿಸಿದ್ದರು.
ಮೇ 26ರಂದು ರೊಲ್ಯಾಂಡ್ ಗ್ಯಾರೊಸ್ ನಲ್ಲಿ ನಡೆಯಲಿರುವ ಟೂರ್ನಾಮೆಂಟ್ ನಲ್ಲಿ ಸೆರೆನಾ ಆಡಬೇಕಿದೆ.

loading...