ಇದಾ ಬೆಳಗಾವಿ ಸ್ಮಾಟ್೯ಸಿಟಿ ???

0
7

ಬೆಳಗಾವಿ

ಬೆಳಗಾವಿ ನಗರ ಸ್ಮಾಟ್೯ಸಿಟಿಯತ್ತ ಎಡರು ತೋಡರುಗಳಲ್ಲಿ ಸ್ಮಾರ್ಟ್ ಸಿಟಿ ಯಾಗ ಹೊರಡಿದೆ. ಕೆಲವೆಡೆ ಪ್ರದೇಶಗಳನ್ನು ನೋಡಿದರೆ ನಿಜವಾಗಿಯೂ ಬೆಳಗಾವಿ ಸ್ಮಾರ್ಟ್ಸಿಟಿಯಾಗುತ್ತಿದೆ ಎನ್ನುವ ವಿಶ್ವಾಸ ಸಾರ್ವಜನಿಕರಲ್ಲಿ ಹುಟ್ಟಿಸುತ್ತಿದೆ.
ನಗರದ ಬಹುತೇಕಡೆಗಳಲ್ಲಿ ಸ್ಮಾರ್ಟ್ ಸಿಟಿ ನೆನಸಿಕೊಂಡರೆ ಅದರ ಗತಿ ನೋಡಿದರೆ ಇದೇನು ಕೋಳಗೇರಿ ಪ್ರದೇಶಗಳೋ ಎನ್ನುವ ಅಚ್ಚರಿ ಮೂಡಿಸುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಳಗಾವಿ ನಗರದ ಸಾಕಷ್ಟು ಬೀದಿ, ಬಡಾವಣೆಗಳು ಒಂದಿಲ್ಲದೊಂದು ಸಮಸ್ಯೆಯಲ್ಲಿವೆ.
ರಸ್ತೆ ಇದ್ದರೆ ಚರಂಡಿ ಇಲ್ಲ. ಚರಂಡಿ ಇದ್ದರೆ ಒಳಚರಂಡಿ ವ್ಯವಸ್ಥೆ ಇಲ್ಲ. ಅಸಮರ್ಪಕ ಕುಡಿಯುವ ನೀರು ಪೂರೈಕೆ ಬೆಳಕು ಕತ್ತಲೆಯಲ್ಲಿ ದಾರಿ ದೀಪಗಳು. ಸ್ವಚ್ಚತೆಯ ಹೆಸರು ಉಳಿಸಬೇಕೆನ್ನುವ ಪ್ರಯತ್ನ ಇರುವ ಕಸ ಇರುವಲ್ಲಿ ಅದನ್ನು ಸಾಗಿಸಬೇಕೆನ್ನುವ ಪ್ರಯತ್ನವಿಲ್ಲ. ಬಹುತೇಕ ಕಡೆಗಳಲ್ಲಿ ಹುದುಗಿಹೋದ ಚರಂಡಿಗಳು ಹಲವೆಡೆ ಕೊಳೆ ಸಾಗದ ಚರಂಡಿಗಳು ಎಲ್ಲ ನಾಟಕೀಯ ಪ್ರಗತಿ ಎನ್ನುವಂತೆ ಸ್ಮಾರ್ಟ್ ಸಿಟಿ ಕಾಮಗಾರಿ ಭರವಾಗಿಯೇ ಸಾಗಿಕೊಂಡಿದೆ.
ಶಟ್ಟಿಗಲ್ಲಿ ಸೇರಿದಂತೆ ಅಕ್ಕಪಕ್ಕದ ಬೀದಿಯ ಹಾಗೂ ಇಲ್ಲಿ ಸಂಚರಿಸುವವರ ನಿತ್ಯದ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ನಗರದ ಬೀದಿಗಳನ್ನು ಸ್ಮಾಟ್೯ಸಿಟಿಗೊಳಿಸಬೇಕು ಎಂಬುದು ಸಾರ್ವಜನಿಕರು ಆಶಯವಾಗಿದೆ.

loading...