ಇದು ಪ್ರತೀಕಾರ ತೀರಿಸಿಕೊಳ್ಳುವ ಸರಣಿಯಲ್ಲ : ಧೋನಿ ಸ್ಪಷ್ಟನೆ

0
24

ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದಾಗ ಭಾರತವು ಏಕದಿನ , ಟೆಸ್ಟ್ ಮತ್ತು ಟ್ವೆಂಟಿ20 ಎಲ್ಲ ಪಂದ್ಯಗಳಕ್ಕಿಯೂ ಹೀನಾಯ ಸೋಲನುಭವಿಸಿದ ನಂತರ ಈಗ ಭಾರತದಲ್ಲಿ ನಡೆಯುತ್ತಿರುವ ಸರಣಿಯನ್ನು ಪ್ರತೀಕಾರದ ಸರಣಿ ಎಂದು ಕರೆಯುತ್ತಿರುವುದನ್ನು ಒಪ್ಪಿಕೊಳ್ಳಲು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸಿದ್ಧರಿಲ್ಲ. ಕ್ರೀಡೆಯಲ್ಲಿ ಪ್ರತೀಕಾರವೆನ್ನುವುದು ತುಂಬಾ ಕಟುವಾದ ಶಬ್ದ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡೆಯಲ್ಲಿ ಪ್ರತೀಕಾರ ಎಂದು ಬಂದಾಗ ಅದು ತುಂಬ ಕಟು ಶಬ್ದವಾಗುತ್ತದೆ. ಕ್ರೀಡೆಯಲ್ಲಿ ಅದನ್ನು ಬಳಸಬಹುದೆಂದು ನನಗನಿಸುತ್ತಿಲ್ಲ. ಒಂದು ಕಡೆ ನಾವು ಕ್ರೀಡಾಸ್ಪೂರ್ತಿ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಪ್ರತೀಕಾರದ ಬಗ್ಗೆ ಮಾತನಾಡುತ್ತೇವೆ ಎಂದು ಧೋನಿ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಹಳ ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಆಟಗಾರರ ಗೈರು ಹಾಜರಾತಿಯಿದ್ದರೂ ಮೂರು ಪಂದ್ಯಗಳಲ್ಲಿ ನಮ್ಮ ಯುವ ತಂಡವು ಕಠಿಣ ಪರಿಶ್ರಮದ ಮೂಲಕ ಪ್ರಬಲ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನವನ್ನು ತೋರಿಸಿದೆ ಎಂದು ಧೋನಿ ಶ್ಲಾಘಿಸಿದ್ದಾರೆ.

ಅಲ್ಲದೆ ಇನ್ನುಳಿದಿರುವ ಪಂದ್ಯಗಳು ಭಾರತಕ್ಕೆ ಕೇವಲ ಓಪಚಾರಿಕವಾಗಿದ್ದರೂ ಆ ಎರಡು ಪಂದ್ಯಗಳ ಬಗ್ಗೆ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಧೋನಿ ಸಲಹೆಯನ್ನೂ ನೀಡಿದ್ದಾರೆ. ನಿಮ್ಮ ಎದುರಾಳಿ ತಂಡದೊಂದಿಗೆ ನಯ ವಿನಯದಿಂದಿರುವುದು ತುಂಬಾ ಮುಖ್ಯ. ಯಾವಾಗ ನೀವು ಒತ್ತಡದಲ್ಲಿರುತ್ತಿರೋ ಆಗ ಖಂಡಿತವಾಗಿಯೂ ತಪ್ಪು ಮಾಡುತ್ತೀರಿ. ಇಂಗ್ಲೆಂಡ್ನಲ್ಲಿ ಐವರು ಪರಿಣಿತ ಬೌಲರ್ಗಳಿದ್ದಾರೆ. ಪ್ರತಿಭೆ ಬಗ್ಗೆ ಹೇಳುವುದಾದರೆ ಅವರದು ಅತ್ಯುತ್ತಮ ತಂಡ. ಆದರೆ ಮುಂದಿನ ಪಂದ್ಯಗಳಲ್ಲಿ ಒಗ್ಗಟ್ಟಿನಿಂದ ಆಡುವುದು ಅವಶ್ಯಕ ಎಂದು ಭಾರತದ ವಿಕೆಟ್ ಕೀಪರ್ ಧೋನಿ ಹೇಳಿದರು.

loading...

LEAVE A REPLY

Please enter your comment!
Please enter your name here