ಇದು ರಾಜಕೀಯ ಷಡ್ಯಂತ್ರ ಎಂದ ಸಾಹುಕಾರ್: ಮಾಧ್ಯಮದ ಮುಂದೆ ಉತ್ತರ ಕೊಡುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ‌ಸ್ಪಷ್ಟನೆ

0
109

 

ಬೆಳಗಾವಿ

ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಸುದ್ದಿಯನ್ನು ನೋಡಿದ್ದೇನೆ. ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಇದು ಒಂದು ರಾಜಕೀಯ ಷಡ್ಯಂತ್ರದ ಭಾಗ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಾಟ್ಸಪ್ ಗ್ರೂಪನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾನೇ ನೇರವಾಗಿ ಮಾಧ್ಯಮಗಳ ಮುಂದೆ ಬಂದು ಎಲ್ಲಾ ಸಂದೇಹಗಳಿಗೂ ಉತ್ತರಿಸಲಿದ್ದೇನೆ. ಸಂತ್ರಸ್ತೆ ಅನ್ನುವವರು ದೂರು ಕೊಡದೇ ಯಾರೋ ಮೂರನೇ ವ್ಯಕ್ತಿ ದೂರು ನೀಡಿರುವುದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿಯೇ ಆಗಿದೆ. ದಯವಿಟ್ಟು ಮಾಧ್ಯಮಗಳ ಸನ್ಮಿತ್ರರು ಸಹಕರಿಸಿ.
– ರಮೇಶ್ ಜಾರಕಿಹೊಳಿ‌, ಜಲಸಂಪನ್ಮೂಲ ಸಚಿವರು

loading...