ಇನ್ನೆರಡು ಸ್ಥಳದಲ್ಲಿ ಆಧಾರ ಕೇಂದ್ರ ತರೆಯಲು ಬಿಜೆಪಿ ಮನವಿ

0
13

ಗುಳೇದಗುಡ್ಡ: ನಗರದ ಸೇರಿದಂತೆ ತಾಲೂಕಿನ ಗ್ರಾಮಸ್ಥರು ಆಧಾರ ಕಾರ್ಡ್ ತಿದ್ದುಪಡಿಗಾಗಿ ನಗರದ ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿನ ಆಧಾರ ಕೇಂದ್ರಕ್ಕೆ ಬೆಳಗಿನ ೫ ಗಂಟೆಯಿಂದ ಸಾರ್ವಜನಕರಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೇಂದ್ರಲ್ಲಿ ಸರ್ವರ್ ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಆಧಾರ ಕಾರ್ಡ್ ತಿದ್ದುಪಡಿ ಮಾಡಿಸಲಾಗದೇ ವಾಪಸ್ಸು ಹೋಗುವಂತಾಗಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಕೂಡಲೇ ಇನ್ನೆರಡು ಸ್ಥಳಗಳಲ್ಲಿ ಆಧಾರ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಇಲ್ಲಿನ ತಹಶೀಲ್ದಾ ಇಲ್ಲವಾದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಉಪತಹಶೀಲ್ದಾರ ಮಹಾಂತೇಶ ಅಂಗಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನಾದ್ಯಾಂತ ಈಗ ಪಡಿತರ ಚೀಟಿಗೆ ಆಧಾರ ಲಿಂಕ್ ಮಾಡಿಸಲು, ಬೆರಳಚ್ಚು ಪಡೆಯುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಹೀಗಾಗಿ ನಗರವೂ ಸೇರಿದಂತೆ ತಾಲೂಕಿನ ಗ್ರಾಮಸ್ಥರು ಆಧಾರ ಕಾರ್ಡ ತಿದ್ದುಪಡಿಗಾಗಿ ದಿನನಿತ್ಯ ನಗರದ ತಹಶೀಲ್ದಾರ ಕಚೇರಿಯಲ್ಲಿನ ಆಧಾರ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಸಾಲುಗಟ್ಟಿರುತ್ತಾರೆ. ಕೇಂದ್ರದಲ್ಲಿ ಒಂದೇ ಕಂಪ್ಯೂಟರ್ ಇದೆ ಅಲ್ಲದೇ ಸರ್ವರ್ ಸಮಸ್ಯೆ, ವಿದ್ಯುತ್ ಸಮಸ್ಯೆಯಿಂದಾಗಿ ಆಧಾರ ತಿದ್ದುಪಡಿ ನಿಧಾನಗತಿಯಲ್ಲಿದೆ. ಇದರಿಂದಾಗಿ ಗ್ರಾಮಸ್ಥರು ನಿರಾಶೆಯಿಂದ ಮನೆಗೆ ಮರಳುವಂತಾಗಿದೆ. ಪಡಿತರ ಕಾರ್ಡು ಅಪಡೇಟ್ ಮಾಡಲು ಜು.೩೧ ಕೊನೆಯ ದಿನವಾಗಿದ್ದು, ಪಡಿತರ ಚೀಟಿದಾರರು ಆತಂಕ ಪಡುವಂತಾಗಿದೆ. ಕೂಡಲೇ ನಗರದಲ್ಲಿ ಇನ್ನೂ ಎರಡ್ಮೂರು ಆಧಾರ ಕೇಂದ್ರಗಳನ್ನು ಸ್ಥಾಪಿಸಬೇಕು. ಇಲ್ಲವಾದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ನಗರಘಟಕದ ಅಧ್ಯಕ್ಷ ದೀಪಕ ನೇಮದಿ, ಪುರಸಭೆ ಸದಸ್ಯರಾದ ಪ್ರಶಾಂತ ಜವಳಿ, ಕಾಶೀನಾಥ ಕಲಾಲ, ಸಿದ್ದು ಅರಕಾಲಚಿಟ್ಟಿ. ವಸಂತಸಾ ಧೋಂಗಡೆ, ಪ್ರಕಾಶ ಗೌಡರ, ಯೋಗೇಶ ಉಂಕಿ, ಭುವನೇಶ ಪೂಜಾರ, ಸುರೇಶ ಮುರನಾಳ, ರಮೇಶ ಕೋಟೆಗೌಡರ, ಶ್ರಿÃಕಾಂತ ಭಾವಿ ಮತ್ತಿತರರು ಇದ್ದರು.
೧೪ಜಿಎಲ್‌ಡಿ-೧ ಫೋಟೋ: ಗುಳೇದಗುಡ್ಡದಲ್ಲಿ ಇನ್ನೂ ಮೂರು ಆಧಾರ ಕೇಂದ್ರ ತೆರೆಯುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

loading...