ಇನ್ಮುಂದೆ ಪಡಿತರದಾರರಿಗೆ ರೇಷನ್ ಪ್ರೀ

0
14

೩ ಕೋಟಿ ರೂ. ಚಿಕ್ಕಾಲಗುಡ್ಡ ರಸ್ತೆ ಕಾಮಗಾರಿ ಸಚಿವ ಕತ್ತಿ ಚಾಲನೆ

ಇನ್ಮುಂದೆ ಪಡಿತರದಾರರಿಗೆ ರೇಷನ್ ಪ್ರೀ
ಬೆಳಗಾವಿ: ಏಪ್ರಿಲ್ ೧ ರಿಂದ ಕರ್ನಾಟಕ ರಾಜ್ಯಾದ್ಯಂತ ಪಡಿತರ ಕಾರ್ಡುದಾರರಿಗೆ ಅಕ್ಕಿ ಜತೆ ರಾಗಿ ಮತ್ತು ಜೋಳ ವಿತರಣೆ ಮಾಡಲಾಗುವದು ಎಂದು ಆಹಾರ ಮತ್ತು ನಾಗರಿಕ ಸೌಲಭ್ಯ ಸಚಿವ ಉಮೇಶ ಕತ್ತಿ ಹೇಳಿದರು.
ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ೩ ಕೋಟಿ ರೂಪಾಯಿಗಳ ಪಡಬುದ್ರಿ ಚಿಕ್ಕಾಲಗುಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂಜೆ ಸಲ್ಲಿಸಿ ಗುತ್ತಿಗೆದಾರ ಶಿವಕುಮಾರ ಮಟಗಾರ ರವರಿಂದ ಸತ್ಕಾರ ಸ್ವಿಕರಿಸಿ ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಹೆದ್ದಾರಿಯ ಪಡಬುದ್ರಿ ಚಿಕ್ಕಾಲಗುಡ್ಡ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಈ ಭಾಗದ ಜನರಿಗೆ ಸಂಚಾರಕ್ಕೆ ತೊಂದರೆಯಾಗದAತೆ ಕ್ರಮ ಜರುಗಿಸಲಾಗಿದೆ ಹಾಗೂ ರಾಜ್ಯದಲ್ಲಿ ಏಪ್ರಿಲ್ ೧ ರಿಂದ ಉತ್ತರ ಕರ್ನಾಟಕದ ಬಿಪಿಎಲ್ ಕಾರ್ಡು ದಾರರಿಗೆ ಅಕ್ಕಿ ಜೋತೆಗೆ ಜೋಳವನ್ನು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಅಕ್ಕಿ ಮತ್ತು ರಾಗಿ ಯನ್ನು ಹಂಚಿಕೆ ಮಾಡಲು ಕ್ರಮ ಜರುಗಿಸಲಾಗಿದೆ ಇದರಿಂದ ಬಡಜನರ ಮತ್ತು ಅಕ್ಕಿ, ರಾಗಿ, ಜೋಳ ಬೆಳೆಯುವ ರೈತರ ಹಿತದೃಷ್ಟಿ ಕಾಪಾಡಲಾಗುವದು ಎಂದರು.
ವೇದಿಕೆ ಮೇಲೆ ಬಸವರಾಜ ಮಟಗಾರ, ಆರ್ ಕರುಣಾ, ಕಲ್ಲಪ್ಪ ತಳವಾರ, ಎನ್ ಎಸ್ ಅಜರೇಕರ, ಜಿಲ್ಲಾ ಪಂಚಾಯತ ಸದಸ್ಯ ಅರ್ಜುನ ನಾಯಿಕ, ರಾಜು ಸಂಸುದ್ದಿ, ಶಿವಕುಮಾರ ಮಟಗಾರ, ಬಿ ಜೆ ಪಿ ಬ್ಲಾಕ್ ಅದ್ಯಕ್ಷ ರಾಚಯ್ಯಾ ಮಠಪತಿ, ಹುಕ್ಕೇರಿ ಪುರಸಭೆ ಅದ್ಯಕ್ಷ ಅಣ್ಣಪ್ಪಾ ಪಾಟೀಲ, ಸದಾನಂದ ಮಾಳೆಗೋಳ, ಲೋಕೋಪಯೋಗಿ ಅಭಿಯಂತರಾದ ಎಸ್ ಕೆ ಹುಕ್ಕೇರಿ, ಗುಂಜರಕರ ಪಾಟೀಲ ಉಪಸ್ಥಿತರಿದ್ದರು.
ಮುಖಂಡ ಬಸವರಾಜ ಮಟಗಾರ ಮಾತನಾಡಿ ಸಚಿವ ಉಮೇಶ ಕತ್ತಿ ಯವರು ಹುಕ್ಕೇರಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಮೇಲೆ ರೈತರು ಬೆಳೆದ ರಾಗಿ, ಜೋಳ ಮತ್ತು ಭತ್ತ ಗಳಿಗೆ ಬೆಂಬಲ ಬೇಲೆ ನೀಡುವದರ ಜೋತೆಗೆ ಬಡಜನರಿಗೆ ಅಕ್ಕಿ ಜೋತೆಗೆ ರಾಗಿ,ಜೋಳ ನೀಡುವುದರೊಂದಿಗೆ ಪಡಿತರ ವ್ಯವಸ್ಥೆಯನ್ನು ಉತ್ತಮಗೋಳಿಸಿದ್ದಾರೆ ಎಂದರು
ಹುಕ್ಕೇರಿ ತಾಲೂಕಾ ಪಂಚಾಯತ ಸದಸ್ಯೆ ಲಕ್ಷಿö್ಮ ಪತ್ತೆನ್ನವರ,ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಕಲಗೌಡಾ ಪಾಟೀಲ, ಹೋಸಪೇಟ ಗ್ರಾಮ ಪಂಚಾಯತಿ ಅದ್ಯಕ್ಷೆ ರೇಣುಕಾ ಬೂದಿಹಾಳ, ಉಪಾದ್ಯಕ್ಷರು,ಸದಸ್ಯರು ಹಾಗೂ ಹಿಡಕಲ್ ಡ್ಯಾಂ, ಲೇಬರ್ ಕ್ಯಾಂಪ, ನಿರ್ವಾನಟ್ಟಿ,ಗ್ರಾಮಸ್ಥರು ಉಪಸ್ಥಿತರಿದ್ದರು.

loading...