ಇನ್ಮೇಲೆ ಆಗಬೇಕು ಆತ್ಮಾವಲೋಕನ, ಅಭಿವೃದ್ದಿಪರ ಚಿಂತನೆ

0
39

ಕಳೆದ ನಾಲ್ಕೈದು ತಿಂಗಳುಳಿಂದ ಕಾವೇರಿದ ರಾಜಕೀಂುು ರಂಗ ಈಗ ಶಾಂತವಾಗುತ್ತಿದೆ. ದಿನೇ ಇನೇ ಹೆಚ್ಚಾಗುತ್ತಿದ್ದ ಆತುರ, ಕಾತರ,ನೀರೀಕ್ಷೆ, ಸಮೀಕ್ಷೆ ಘೋಷಣೆಂುುಾದ ಫಲಿತಾಂಶದೊಂದಿಗೆ ಪರಿಸಮಾಪ್ತಿಂುುಾಗಿದೆ. ಕೆಲವರು ಗೆದ್ದು ವಿಜಂುುದ ಉನ್ಮಾದದಲ್ಲಿದ್ದರೆ, ಇನ್ನು ಕೆಲವರು ಸೋಲಿನ ಬಿಸಿಗೆ ಕಂಗಾಲಾಗಿದ್ದಾರೆ. ಕ್ಷಣಕ್ಷಣವೂ ಎಡೆಬಿಡದೆ ಚುನಾವಣಾ ಕಣದ ಬಗ್ಗೆ ಮಾಹಿತಿಂುುನ್ನು ಬಿತ್ತರಿಸುತ್ತಾ ದಿನದ ಇಪ್ಪತ್ತನಾಲ್ಕು ಗಂಟೆಂುೂ ಅದರಲ್ಲೇ ತೊಡಗಿದ್ದ ಮಾದ್ಯಮಗಳು ಈಗ ನಿಧಾನವಾಗಿ ಬೇರೆಡೆಮುಖ ಮಾಡಲು ಪ್ರಾರಂಬಿಸಿವೆ. ಗೆದ್ದ ಕಾಂಗ್ರೆಸ್ ಪಕ್ಷಮುಖ್ಯಮಂತ್ರಿಂುುಾಗಿ ಸಿದ್ದರಾಮಂು್ಯುರನ್ನು ಆಂುೆ್ಕು ಮಾಡಿದೆ. ಮಂತ್ರಿಮಂಡಲ ರಚನೆಂುುಾಗಿ, ಪಟ್ಟದ ಗೊಂದಲಗಳು, ಅಸಹನೆ ನಿಧಾನವಾಗಿ ಕಡಿಮೆಂುುಾಗಿ ಕನುಾರ್ಟಕದಲ್ಲಿ ನೂತನ ಸರಕಾರ ವ್ಯವಸ್ಥಿತ ಕಾಂುುಾರ್ಚರಣೆಗೆ ಅಣಿಂುುಾಗಿದೆ.ಈ ಚುನಾವಣೆಂುುಲ್ಲಿ ಗೆದ್ದವರು ಗದ್ದುಗೆ ಏರಿದರೆ, ಸೋತವರು ಕೈ ಕೈ ಹಿಚಕುತ್ತಾ ಸೋಲಿನ ಕಾರಣವನ್ನು ಹುಡುಕತೊಡಗಿದ್ದಾರೆ. ಈ ಪರ್ವಕಾಲದಲ್ಲಿ ಸೋಲು ಗೆಲುವಿನ ಲೆಕ್ಕಾಚಾರವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ತಮ್ಮ ಆತ್ಮಾವಲೋಕನವನ್ನು ಮಾಡಬೇಕಿದೆ.

ರಾಜ್ಯದ ಸರ್ವಾಂಗೀಣ ಅಭಿವೃದ್ದಿಗಾಗಿ ಪಕ್ಷಭೇದ ಮರೆತು ಒಂದಾಗಬೇಕಿದೆ. ಜನರು ತಮ್ಮಲ್ಲಿ ವಿಶ್ವಾಸವಿರಿಸಿ ಅಧಿಕಾರದ ಚುಕ್ಕಾಣೆ ನೀಡಿದ್ದಾರೆ ಎಂದು ಆಡಳಿತ ಪಕ್ಷದವರು ಭಾವಿಸಬೇಕಿದೆ. ಅದೇ ರೀತಿ ವಿರೋಧ ಪಕ್ಷದವರು ಆಡಳಿತ ಪಕ್ಷಕ್ಕೆ ನೈತಿಕ ಬೆಂಲ ಮತ್ತು ಕಾಂುುರ್ವೈಖರಿಂುುಲ್ಲಿ ಸಲಹೆ ಸೂಚನೆ ನೀಡಬೇಕಿದೆ.ಇಂದು ಮತದಾರ ಜಾಗೃತನಾಗಿದ್ದಾನೆ. ರಾಜಕೀಂುು ವಿದ್ಯಮಾನಗಳ ಬಗ್ಗೆ ಕಣ್ಣಿಟ್ಟು ನಿರಂತರವಾಗಿ ಗಮನಿಸುತ್ತಾ ಇರುತ್ತಾನೆ. ಇಂದು ಮತದಾರ ಅಜ್ಞಾನಿಂುುಾಗಿ ಅಥವಾ ಹಿಂದಿನಂತೆ ಹೇಳಿದ್ದಕ್ಕೆಲ್ಲಾ ತಲೆಂುುಾಡಿ ಸುತ್ತಾ, ತೋರಿಸಿದ್ದಕ್ಕೆಲ್ಲಾ ಓಟು ಒತ್ತುತ್ತಾ ನಿರ್ಲಿಪ್ತ ಮನೋಭಾವದವನಾಗಿ ಉಳಿ ದಿಲ್ಲ. ಇವತ್ತು ಆತ ತನ್ನ ಮತದ ಮೌಲ್ಯವನ್ನು, ಪ್ರಜಾಪ್ರಭುತ್ವದಲ್ಲಿನ ತನ್ನ ಸ್ಥಾನವನ್ನು ಅರಿತುಕೊಂಡಿದ್ದಾನೆ. ರಾಜ ಕಾರಣಿಗಳು ನಾವು ಗೆದ್ದಿದ್ದೇವೆ, ಇನ್ನು ಐದು ವರ್ಷದವರೆಗೆ ಏನೂ ತೊಂದರೆ ಇಲ್ಲ ಎಂದು ಮಂತ್ರಿ ಪದವಿಗಾಗಿ ಕಚ್ಚಾಟ, ಲಾಭಕೋರತನ, ಲಂಚಕೋರತನ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣ ಇತ್ಯಾದಿ ಚಟುವಟಿಕೆಂುುಲ್ಲಿ ತೊಡಗಿಕೊಂಡರೆ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಅದೇ ಒಳ್ಳೆಂುು ಆಡಳಿತ ನೀಡುತ್ತಾ, ಜನರ ಆಶೋತ್ತರಗಳಿಗೆ ಸ್ಪಂದಿಸಿದಾಗ ನಮ್ಮ ಸರಕಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇಂದು ಜನರು ನೆಮ್ಮದಿಂುುನ್ನು ಬಂುುಸುತ್ತಾರೆ. ಸುಭದ್ರ ಸರಕಾರವನ್ನು ನೀರೀಕ್ಷಿಸುತ್ತಾರೆ. ಅಧಿಕಾರಕ್ಕಾಗಿ ಸದಾ ಕಿತ್ತಾಡುತ್ತಾ, ಅಬಿವೃದ್ದಿ ಕಾಂುುರ್ಗಳ ಬಗ್ಗೆ ಉಪೇಕ್ಷೆ ತೋರುವವರನ್ನು ಅವರು ತಿರಸ್ಕರಿಸುತ್ತಾರೆ. ಇಂದಿನ ಂುುುವಜನತೆ ರಾಜಕೀಂುುದಿಂದ ಹಿಂಜರಿಂುುುವುದನ್ನು ಗಮನಿಸಿದಾಗ ನಮ್ಮ ರಾಜಕಾರಣಿಗಳು ಭವಿಷ್ಯದ ನಾಂುುಕರ ರೂಪುಗೊಳ್ಳುವಿಕೆಂುು ಮೇಲೆ ಂುುಾವ ರೀತಿಂುು ಪ್ರಬಾವ ಬೀರಿದ್ದಾರೆ ಎಂದು ತಿಳಿಂುುಬಹುದು. ಕೋಟ್ಯಂತರ ನುಂಗಿ ಲಿನಾನೇನು ಮಾಡದ್ದನ್ನು ಮಾಡಿಲ್ಲ! ರಾಜಕೀಂುು ದಲ್ಲಿ ಇದೆಲ್ಲಾ ಸಾಮಾನ್ಯ, ನನಗಾಗದವರಾರೋ ನನ್ನ ಮೇಲಿನ ಸೇಡಿಗೆ ಈ ರೀತಿ ಮಾಡಿದ್ದಾರೆಳಿ ಎಂಬ ಹೇಳಿಕೆಗಳಿಗೆ ಇನ್ನು ಜನರು ಸೊಪ್ಪು ಹಾಕುವುದಿಲ್ಲ.ಜನಸಾಮಾನ್ಯರ ಜೀವನ ಇಂದು ದುರ್ಭರವಾಗಿದೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಸಾಮಾನ್ಯ ಜನರು ದಿನವೀಡೀ ದುಡಿದರೂ ನೆಮ್ಮದಿಯಿಂದ ಬಾಳ್ವೆ ಮಾಡಲಾಗದಷ್ಟು ಪರಿಸ್ಥಿತಿ ಕೈಮೀರಿ ಹೋಗಿದೆ. ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ ನಿರಂತರವಾಗಿ ಜನರನ್ನು ಕಾಡುತ್ತಿದೆ. ಸರಕಾರದ ಸೌಲಭ್ಯಗಳು ಜನರ ಕೈಗೆಟಕದೆ ಗಗನ ಕುಸುಮ ವಾಗಿವೆ. ರಾಜಕೀಂುುದಲ್ಲಿ, ಆಡಳಿತದಲ್ಲಿ ಭ್ರಷ್ಟಾಚಾರ, ನಿದಾನದ್ರೌಹ ಹೆಚ್ಚುತ್ತಿದೆ. ಅತ್ಯಾಚಾರ ಪ್ರಕರಣಗಳು, ಕೊಲೆ, ದರೋಡೆಗಳು ಹೆಚ್ಚಿ ಸಮಾಜದಲ್ಲಿ ನೈತಿಕ ಅಧಃಪತನವಾಗುತ್ತಿದೆ. ಅನೇಕ ಜನಪ್ರತಿನಿದಿಗಳು ನೀಚ, ಹೀನ, ಅಮಾನವೀಂುು ಕೃತ್ಯಗಳಲ್ಲಿ ತೊಡಗಿ ತಮ್ಮ ಮಾನವನ್ನು ಹರಾಜಿಗಿಟ್ಟಿದ್ದಾರೆ.

ಮೂಲಸವಲತ್ತುಗಳ ಕೊರತೆಯಿಂದ ಜನರು ಬಳಲುತ್ತಿದ್ದಾರೆ. ಆಹಾರ, ಶಿಕ್ಷಣ, ಆರೋಗ್ಯ, ವಸತಿ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಕನ್ನಡ ಶಾಲೆಗಳನ್ನು ಬಲವಂತಕ್ಕೆಮುಚ್ಚದಿದ್ದರೂ, ಅವು ತೆರೆದಿದ್ದರೂಮುಚ್ಚಿದಂತೆಂುೆು ಕಾಂುುರ್ ನಿರ್ವಹಿಸುತ್ತಿವೆ. ಅವುಗಳ ಗುಣಮಟ್ಟವಂತೂ ವರ್ಣಿಸಲು ಅಸಾಧ್ಯವಾಗಿವೆ. ಖಾಸಗಿ ಶಾಲೆಗಳ ಪೈಪೋಟಿ, ಡೊನೇಶನ್ ಹಾವಳಿಯಿಂದ ಸಾಮಾನ್ಯ ಜನರಿಗೆ ತಮ್ಮ ಮಕ್ಕಳಿಗೆ ಒಳ್ಳೆಂುು ಶಿಕ್ಷಣ ನೀಡಬೇಕೆಂಬ ಕನಸು ಕನಸಾಗಿಂುೆು ಉಳಿದಿದೆ. ಸರಕಾರದ ಇಲಾಖೆಗಳು, ಅಧಿಕಾರಿ ಗಳು ಭ್ರಷ್ಟಾಚಾರದಲ್ಲಿಮುಳುಗಿ, ದುಷ್ಟ ರಾಜಕಾರಣದ ಗುಲಾಮರಾಗಿದ್ದಾರೆ.

ಈ ಎಲ್ಲ ವಿಚಾರಗಳನ್ನು ಪ್ರಜ್ಞಾವಂತ ಜನರು ಗಮನಿಸುತ್ತಿದ್ದಾರೆ. ಈಗ ರಚನೆಂುುಾದ ಸರಕಾರ ದೊಡ್ಡ ದೊಡ್ಡ ಂುೋಜನೆಗಳನ್ನು ಮಾಡದಿದ್ದರೂ ಸಾಮಾನ್ಯ ಜನರು ನೆಮ್ಮದಿಯಿಂದ ಬದುಕುವ ಬಗ್ಗೆ ಂುೋಚನೆ ಮಾಡಬೇಕೆಂದು ಬಂುುಸು ತ್ತಾರೆ. ಸರಕಾರ ತನ್ನ ಆಡಳಿತಾವದಿಂುುಲ್ಲಿ ಜನರ ಸುಖ ದುಃಖಗಳಿಗೆ ಸ್ಪಂದಿಸಿ ಅವರಿಂದ ವಸೂಲಾದ ತೆರಿಗೆ ಹಣವನ್ನು ಅವರಿಗಾಗಿಂುೆು ವಿನಿಂುೋಗ ಮಾಡಿ ಈಗ ಇರುವ ಸೌಲಭ್ಯ ಗಳನ್ನೇ ಸರಿಂುುಾದ ರೀತಿಂುುಲ್ಲಿ ದೊರೆಂುುು ವಂತೆ ಮಾಡಿದರೆ ಜನತೆ ನಿಟ್ಟುಸಿರು ಬಿಡುತ್ತಾರೆ.

ಇಂದು ಜನರಿಗೆ ಬರವಸೆಗಳ ಮೇಲೆ ನಂಬಿಕೆ ಹೊರಟುಹೋಗಿದೆ. ಭರವಸೆಗಳಿಂದ ಬದುಕಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ತಮ್ಮ ಬರವಸೆಗಳ ಈಡೇರಿಕೆಂುು ಕಡೆಗೆ ಚಿಂತನೆ ನಡೆಸಬೇಕಿದೆ. ಒಂದು ಒಳ್ಳೆಂುು ಂುೋಜನೆ ಂುುನ್ನು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಅನುಮೋದಿಸಬೇಕಿದೆ. ಪರಸ್ಪರ ಧೂಷಣೆ ಂುುಲ್ಲಿಂುೆು ಕಾಲ ಕಳೆದರೆ ಐದು ವರ್ಷಗಳ ನಂತರ ಮತ್ತೆ ಜನರ ಮನೆಬಾಗಿಲಿಗೆ ಬಂದಾಗ ಅವರು ತಕ್ಕ ಉತ್ತರ ನೀಡುತ್ತಾರೆ.

ಆಡಳಿತ ಪಕ್ಷದ ತಪ್ಪನ್ನು ಎತ್ತಿ ತೋರಿಸುವ ವಿರೋಧ ಪಕ್ಷದವರು ಪ್ರತಿಂುೊಂದು ವಿಚಾರಕ್ಕೂ ರಾಜೀನಾಮೆ ಕೊಟ್ಟು ನಿರ್ಗಮಿಸಿ ಎಂದು ಬೆದರಿಸುವ ಬದಲು ನೈತಿಕ ಬೆಂಬಲ ನೀಡ ಬೇಕಿದೆ. ತೆರೆಂುು ಹಿಂದೆ ವಿವಿಧ ಆಮಿಷ ಗಳನ್ನೊಡ್ಡಿ ಪಕ್ಷಾಂತರದ ಆಪರೇಷನ್ಗಳನ್ನು ಮಾಡಿ ಸರಕಾರವನ್ನು ಅಭದ್ರಗೊಳಿಸುವ ಪ್ರಂುುತ್ನ ನಿಲ್ಲಬೇಕಿದೆ. ಆಡಳಿತ ಪಕ್ಷದವರು ಸ್ವಲಾಭದಲ್ಲಿ, ವಿರೋಧ ಪಕ್ಷದವರು ಹೇಗಾದರೂ ಮಾಡಿ ಆಡಳಿತ ಪಕ್ಷದ ಹೆಸರನ್ನು ಕೆಡಿಸುವ ಪ್ರಂುುತ್ನ ದಲ್ಲೇ ಸದಾ ತೊಡಗಿದ್ದರೆ ಸರಕಾರ ಇದ್ದೂ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ.ಆಡಳಿತ ಪಕ್ಷದಲ್ಲಿ ಒಣರಾಜಕೀಂುು ನಿಲ್ಲ ಬೇಕಿದೆ. ಪ್ರಭಾವಿ ರಾಜಕಾರಣಿಗಳ ಕಟ್ಟಾ ಅನುಂುುಾಯಿಗಳಾದ ಜನಪ್ರತಿನಿಧಿಗಳು ಪಕ್ಷನಿಷ್ಠೆ ಬಿಟ್ಟು ತಮ್ಮದೇ ಒಂದು ಶಕ್ತಿಬಣದ ನಿರ್ಮಾಣ ಮಾಡಿ ತಮ್ಮ ಇಚ್ಛೆಗಳ ಈಡೇರಿಕೆ ಒತ್ತಡ ತಂತ್ರವನ್ನು ಉಪಂುೋಗಿಸಿದಾಗ ಸರಕಾರ ಅಸ್ಥಿರವಾಗುತ್ತದೆ. ಜನರನ್ನು ಬದಿಗಿಟ್ಟು ಸರಕಾರವನ್ನು ಉಳಿಸುವುದಕ್ಕಾಗಿಂುೆು ಎಲ್ಲ ಪ್ರಂುುತ್ನಗಳು ನಡೆಂುುುತ್ತವೆ. ಸರಕಾರ ಬಿದ್ದರೆ ಎಲ್ಲಿ ತಾವು ಅಧಿಕಾರವನ್ನು ಕಳೆದುಕೊಳ್ಳು ತ್ತೇವೋ ಎಂಬ ಭಂುುದಿಂದ ಉಳಿದ ಸಮಂುು ದಲ್ಲಿ ಭರ್ಜರಿ ಸಂಪಾದನೆ ಮಾಡಬೇಕೆಂಬ ಅತಿಂುುಾಸೆ ಜನಪ್ರತಿನಿಧಿಗಳಲ್ಲಿ ಹುಟ್ಟಿ ಕೊಳ್ಳುತ್ತದೆ.

ಚುನಾವಣೆಂುುಲ್ಲಿ ಪರಸ್ಪರ ವಿರೋಧಿ ಗಳಾಗಿದ್ದವರು ಆಡಳಿತದಲ್ಲಿ ಪರಸ್ಪರ ಸಹಕಾರ ನೀಡಬೇಕಿದೆ. ಆಂುೆ್ಕುಂುುಾದವರು ತಾವು ಎಲ್ಲ ಜನರ ಪ್ರತಿನಿದಿ ಎಂದು ಮನದಟ್ಟು ಮಾಡಿಕೊಳ್ಳಬೇಕಿದೆ. ತಮ್ಮ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಅವರು ಗಮನಹರಿಸಿದರೆ ಸಾಕು ರಾಜ್ಯ ಸುಭಿಕ್ಷವಾಗುತ್ತದೆ. ತಮ್ಮ ಕ್ಷೇತ್ರದಲ್ಲಿರುವ ಪಂಚಾಂುುತ್ ಕಚೇರಿ ಸರಿಂುುಾಗಿ ಕಾಂುುರ್ನಿರ್ವಹಿಸುವಂತೆ ನೋಡಿ ಕೊಂಡರೆ, ಪಡಿತರ ಅಂಗಡಿಂುುಲ್ಲಿ ಅಕ್ಕಿ, ಬೇಳೆ ಕಾಳು, ಮತ್ತಿತರೆ ಅಗತ್ಯ ವಸ್ತುಗಳ ಪೂರೈಕೆ, ವಿತರಣೆ ಬಗ್ಗೆ ಗಮನಹರಿಸಿದರೆ ನಮ್ಮ ರಾಜ್ಯ ಮಾದರಿ ರಾಜ್ಯವಾಗುತ್ತದೆ.ರಾಜ್ಯದಲ್ಲಿ ರಾಜಕಾರಣ ಹದಗೆಟ್ಟಿದೆ ಎಂದು ಬೊಬ್ಬಿಡುವ, ಮಾತು ಮಾತಿಗೂ ಒಂದು ಪಕ್ಷವನ್ನು ಟೀಕಿಸಿ, ಇನ್ನೊಂದನ್ನು ಹೊಗಳುವ, ಸುತ್ತಮುತ್ತ ಕಾಣಬಹುದು. ಅವರಿಗೆ ನನ್ನ ಪ್ರಶ್ನೆ ಹೀಗೆ. ರಾಜ್ಯ ರಾಜಕಾರಣವನ್ನು ಟೀಕಿಸುವ ಮೊದಲು ಪ್ರಜಾಪ್ರಭುತ್ವ ಭ್ರಷ್ಟಾಚಾರ, ಹಣದುಬ್ಬರದ ಬಗ್ಗೆ ಸುದೀರ್ಘ ವಿಶ್ಲೇಷಣೆ ಮಾಡುವ ಎಷ್ಟೌ ಜನರನ್ನು ನಮ್ಮ ವ್ಯವಸ್ಥೆಂುು ತಳಬಾಗದಲ್ಲಿರುವ ತಮ್ಮ ಪಂಚಾಂುುತ್ನ ಬಗ್ಗೆ ಅವರಿಗೆ ಎಷ್ಟು ತಿಳಿದಿದೆ? ಅವರೇ ಸದಸ್ಯ ರಾಗಿರುವ ವಾರ್ಡ ಸಭೆ, ಗ್ರಾಮಸಭೆಗಳಲ್ಲಿ ಅವರು ಂುುಾವ ರೀತಿಂುುಲ್ಲಿ ಪಾಲ್ಗೊಳ್ಳುತ್ತಾರೆ

loading...

LEAVE A REPLY

Please enter your comment!
Please enter your name here