ಇರಾನ್  ಕ್ಷಿಪಣಿ ದಾಳಿ: 11 ಅಮೆರಿಕ ಯೋಧರಿಗೆ ಗಾಯ

0
4

ವಾಷಿಂಗ್ಟನ್:- ಇರಾಕಿನ ಅಮೆರಿಕ ಸೇನಾ  ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ  11  ಸೈನಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ.
ಜನವರಿ 8 ರಂದು, ಇರಾನ್‌ನ ಎರಡು ಮಿಲಿಟರಿ ನೆಲೆಗಳ ವಿರುದ್ಧ  ಕ್ಷಿಪಣಿ ದಾಳಿ ನಡೆಸಿತು, ಇರಾನ್  ಸೇನಾ ಮುಖ್ಯಸ್ಥ ಸೈನ್ಯದ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಅಮೆರಿಕ ಪ್ರತಿಕ್ರಿಯಿಸಿದ್ದರೂ ಈ ಘಟನೆಯಲ್ಲಿ ಅಮೆರಿಕದ ಯಾವುದೇ ಸೈನಿಕರು ಗಾಯಗೊಂಡಿಲ್ಲ ಎಂದು  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪೆಂಟಗನ್ ಸ್ಪಷ್ಟಪಡಿಸಿದ್ದಾರೆ. ಹೇಳಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ  ಗಾಯಗೊಂಡ ಸೈನಿಕರನ್ನು ಜರ್ಮನಿ ಮತ್ತು ಕುವೈತ್‌ನ ಮಿಲಿಟರಿ ಆಸ್ಪತ್ರೆಗಳಿಗೆ ಸೇರಿಸಿ ಅವರಿಗೆ ಆಘಾತಕಾರಿ ಮಿದುಳಿನ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.
ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕ   ಹೊಸ ನಿರ್ಬಂಧಗಳನ್ನು ಘೋಷಿಸಿದೆ.

loading...