ಇಷ್ಟಲಿಂಗದ ಪರಿಕಲ್ಪನೆ ಬಸವಪೂರ್ವ ಯುಗದಲ್ಲಿತ್ತು: ಡಾ.ವೀರಭದ್ರಯ್ಯ

0
81

ಧಾರವಾಡ : ದೆಹಲಿಯ ಜನಪಥರಸ್ತೆಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇಷ್ಟಲಿಂಗ ಹೋಲುವ ಹಲವಾರು ಮೂರ್ತಿಗಳಿವೆ. ಕ್ರಿಸ್ತಪೂರ್ವ 5016ರಲ್ಲಿ ಲಿಂಗಪೂಜೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಹಲವು ಪುರಾವೆಗಳಿವೆ ಎಂದು ಸಂಶೋಧಕ ಡಾ. ಸಿ. ಎಂ. ವೀರಭದ್ರಯ್ಯ ಅಭಿಪ್ರಾಯಪಟ್ಟರು.
ತತ್ವಾನೇಷಣ ಮಂದಿರದಲ್ಲಿ ವೀರಶೈವ ಜಂಗಮ ಸಂಸ್ಥೆ ಹಮ್ಮಿಕೊಂಡಿದ್ದ ‘ಲಿಂಗದ ಪ್ರಾಚೀನತೆ’ ಎಂಬ ವಿಷಯ ಕುರಿತು ಮಾತನಾಡಿ, ಹರಪ್ಪಾ, ಮಹೆಂಜೋಧಾರೋ ಮತ್ತು ಸಿಂಧೂ ನಾಗರಿಕತೆಯ ಕಾಲದಿಂದಲೂ ಲಿಂಗಪೂಜೆ ಅಸ್ತಿತ್ವದಲ್ಲಿದೆ. ಹಾಗಾಗಿ ಇಷ್ಟಲಿಂಗದ ಪರಿಕಲ್ಪನೆ ಬಸವಪೂರ್ವ ಯುಗಕ್ಕಿಂತಲೂ ಹೆಚ್ಚು ಪ್ರಾಚೀನವಾದದ್ದು. ಎಲ್ಲೋರಾ ಗುಹೆಗಳಲ್ಲಿ ಈಶ್ವರ ಮತ್ತು ಪಾರ್ವತಿ ಲಿಂಗಪೂಜೆ ಮಾಡುವ ವಿಗ್ರಹವಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನ ಶ್ರೀ ಕುಮಾರ ಸ್ವಾಮಿಯ ದೇವಸ್ಥಾನದ ಪಕ್ಕದಲ್ಲಿರುವ ಪಾರ್ವತಿದೇವಿಯ ವಿಗ್ರಹದ ಒಂದು ಕೈಯಲ್ಲಿ ಇಷ್ಟಲಿಂಗದ ಮಾದರಿಯಲ್ಲಿ ಲಿಂಗವಿರುವುದನ್ನು ಕಾಣಬಹುದಾಗಿದೆ. ಸ್ಥಾವರಲಿಂಗ ಮತ್ತು ಚರ(ಇಷ್ಟ)ಲಿಂಗಗಳಲ್ಲಿ ಚರವೇ ಶ್ರೇಷ್ಠ ಲಿಂಗಪೂಜೆ ಪೌರಾಣಿಕ ಕಾಲದಿಂದಲೇ ಅಸ್ತಿತ್ವದಲ್ಲಿದೆ. ಶ್ರೀರಾಮ, ಶ್ರೀಕೃಷ್ಣ, ಬ್ರಹ್ಮ, ವಿಷ್ಣು ಮತ್ತು ರಾವಣ ಕೂಡಾ ಲಿಂಗ ಪೂಜೆ ಮಾಡಿದ್ದಾರೆಂದರು.
ವೀರಶೈವ ಜಂಗಮ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಬಿ. ಪುರಾಣಿಕ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಎ.ಸಿ.ಪಿ. ಜಿ. ಆರ್ ಹಿರೇಮಠ, ಪಂಪಾಪತಿ ಹಿರೇಮಠ, ಸಿ. ಎಸ್. ಪಾಟೀಲಕುಲಕರ್ಣಿ, ವಿ. ಎಸ್. ಅರಳಲೇಮಠ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here