ಈ ಸಮಯದಲ್ಲಿ ಮಾಸ್ಕ್ ಧರಿಸುವುದಿಲ್ಲ; ಟ್ರಂಪ್

0
13

ವಾಷಿಂಗ್ಟನ್:- ಕೊರೊನಾ ವೈರಸ್ (ಕೋವಿಡ್ -೧೯) ಜಗತ್ತಿನ ಎಲ್ಲ ದೇಶಗಳಲ್ಲೂ ರುದ್ರ ನರ್ತನ ಮಾಡುತ್ತಿದೆ. ಚೈನಾದಲ್ಲಿ ಹುಟ್ಟಿದ ಈ ವೈರಸ್, ಈಗ ಅಗ್ರ ರಾಷ್ಟ್ರ ಅಮೇರಿಕಾದಲ್ಲಿ ತನ್ನ ಉಗ್ರ ಪ್ರತಾಪ ಪ್ರದರ್ಶಿಸುತ್ತಿದೆ. ಕೊರೊನಾ ಸಾವಿನ ಸಂಖ್ಯೆ ಇತರ ದೇಶಗಳಿಗಿಂತ ಅಮೆರಿಕಾದಲ್ಲಿ ಹೆಚ್ಚು ವರದಿಯಾಗುತ್ತಿವೆ. ವಿಶ್ವದೆಲ್ಲೆಡೆ ಈವರೆಗೆ ೧೦ ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಅಮೆರಿಕಾದಲ್ಲಿ ಈ ಸಂಖ್ಯೆ ೨ ಲಕ್ಷ ೭೭ ಸಾವಿರಕ್ಕೂ ಮೀರಿದೆ. ವಿಶ್ವಾದ್ಯಂತ ಈವರೆಗೆ ಸುಮಾರು ೬೦,೦೦೦ ಮೃತಪಟ್ಟಿದ್ದು, ಅಮೆರಿಕಾದಲ್ಲಿ ೭,೪೦೦ ಮಂದಿ ಸಾವನ್ನಪ್ಪಿದ್ದಾರೆ.
ಈ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಕರೋನಾ ಸಾಂಕ್ರಾಮಿಕ ರೋಗದ ವಿರುದ್ದ ಸಮರ ಸಾರಲು ದೇಶದ ಜನರು ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ. ಅದೇ ರೀತಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟಲು ಜನರು ವೈದ್ಯಕೀಯ ಮುಖಗವುಸುಗಳ ಬದಲು ಕರವಸ್ತ್ರಗಳನ್ನು ಮುಖಕ್ಕೆ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅದೇ ರೀತಿ ಎನ್ -೯೫ ಮುಖಗವುಸು, ವ್ಯಕ್ತಿಗತ ಆರೋಗ್ಯ ರಕ್ಷಣಾ ಸಾಧನಗಳನ್ನು ಇತರ ದೇಶಗಳಿಗೆ ರಫ್ತು ಮಾಡುವುದನ್ನು ಕೂಡಲೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಮೆರಿಕದ ಜನರು ಮುಖಗವುಸು ಧರಿಸಬೇಕು ಎಂದು ಸೂಚಿಸಿರುವ ಟ್ರಂಪ್ .. ತಾವು ಮಾತ್ರ ಈ ಸಮಯದಲ್ಲಿ ಮುಖ ಗವುಸು ಹಾಕಿಕೊಳ್ಳುವುದಿಲ್ಲ ಎಂದು ಹೇಳಿರುವುದು ಗಮನಾರ್ಹವಾಗಿದೆ.

loading...