ಉಚಿತ ಗ್ಯಾಸ್ ವಿತರಣೆಯಲ್ಲಿ ಮೋಸ: ಆರೋಪ

0
16

 

ಕನ್ನಡಮ್ಮ ಸುದ್ದಿ-ಕುಮಟಾ: ರಾಷ್ಟ್ರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಉಚಿತ ಗ್ಯಾಸ್ ವಿತರಣೆ ಮಾಡುತ್ತೇವೆ ಎಂದು ಜನರಿಗೆ ಮೋಸ ಮಾಡಿ ಹಗಲು ದರೋಡೆ ಮಾಡುತ್ತಾ ಬರುತ್ತಿದೆ. ಇದರಲ್ಲಿ ಫಲಾನುಭವಿಗಳು ಉಚಿತ ಗ್ಯಾಸ ಎಂದು ತೆಗೆದುಕೊಂಡಿದ್ದರು. ಆದರೆ ಇದು ಸಾರ್ವಜನಿಕರಿಗೆ ಉಚಿತವಾಗಿ ದೊರಕುತ್ತಿಲ್ಲ. ತಿಂಗಳಿಗೆ ಸಬ್ಸಿಡಿ ಹಣ ಗ್ರಾಹಕರ ಖಾತೆಗೆ ಜಮಾ ಆಗುತ್ತಿಲ್ಲ. ಈ ರೀತಿ ಜನರಿಗೆ ಸುಳ್ಳು ಮಾಹಿತಿ ರವಾನಿಸುವುದರ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದೆ. ಕೇಂದ್ರ ಸರ್ಕಾರ ಇದೇ ರೀತಿ ಬಡ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆಯುವುದನ್ನು ಮುಂದುವರಿಸಿದರೆ ನಮ್ಮ ಪಕ್ಷದ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು ಎಂದು ಆಮ್‍ಆದ್ಮಿ ಪಕ್ಷದ ಕಾರ್ಯಕರ್ತರು ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಈ ರೀತಿಯ ಯೋಜನೆಗಳು ನೆಲ ಕಚ್ಚುತ್ತಾ ಬಂದಿದೆ. ಈ ಕಣ್ಣುಮುಚ್ಚಾಲೆ ಆಟ ಎಷ್ಟು ದಿನದ ತನಕ? ಕಳೆದ ನಾಲ್ಕುವರೆ ವರ್ಷದ ಹಿಂದೆ ಯಾವ ರೀತಿ ಗ್ಯಾಸ ವಿತರಣೆ ಆಗುತ್ತಿತ್ತೋ ಅದೇ ರೀತಿಯಲ್ಲಿ ಸಮರ್ಪಕವಾಗಿ ಜನರಿಗೆ ತಲುಪಬೇಕು ಹಾಗೂ ನಾಲ್ಕು ನೂರು ರೂಪಾಯಿಂದ ಐದುನೂರು ರೂಪಾಯಿಗೆ ದರ ಸೀಮಿತವಾಗಿರಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇದೇ ರೀತಿ ಬಡ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆಯುವುದನ್ನು ಮುಂದುವರಿಸಿದರೆ ನಮ್ಮ ಪಕ್ಷದ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು ಮತ್ತು ಈ ಹೋರಾಟವನ್ನು ರಾಷ್ಟ್ರವ್ಯಾಪಿ ನಡೆಸಲಾಗುವುದು. ಈ ಹೋರಾಟ ತೀವೃ ಸ್ವರೂಪ ಪಡೆದರೆ, ಅಹಿತಕರ ಘಟನೆ ನಡೆದರೆ, ಆಸ್ತಿಪಾಸ್ತಿಗೆ ಹಾನಿಯಾದರೆ ಅದಕ್ಕೆ ಕೇಂದ್ರ ಸರ್ಕಾರವೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಆಮ್‍ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ನಾಗರಾಜ ಶೇಟ, ಪ್ರಮುಖ ಲಕ್ಷ್ಮಣ ಅಂಬಿಗ, ದೀಪಕ ಗೌಡ, ಕುಪ್ಪು ಗೌಡ, ದೇವು ಇದ್ದರು.

loading...