ಉಚಿತ ಗ್ಯಾಸ್ ವಿತರಣೆ

0
15

ಕೋಳಿಗುಡ್ಡ: ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಗ್ಯಾಸ್ ನೀಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ೪೧ ಜನ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.
ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ಶರಣಪ್ಪಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕುಡಚಿ ಕ್ಷೆÃತ್ರದ ಬಿಜೆಪಿ ಬ್ಲಾಕ್ ಅಧ್ಯಕ್ಷ ಬಸಗೌಡ ಆಸಂಗಿ ವಹಿಸಿಕೊಂಡಿದ್ದರು. ಹಾರೂಗೇರಿಯ ಶಿವಲಿಲಾ ಗ್ಯಾಸ್ ಏಜೆನ್ಸಿ ಮಾಲಿಕರಾದ ಹಾಗೂ ಹಿರಿಯ ಪತ್ರಕರ್ತರಾದ ಬಸವರಾಜ ಅರಕೇರಿ ಅಥಿತಿಗಳಾಗಿ ಆಗಮಿಸಿದ್ದರು, ಅಶೋಕ ಹಾದಿಮನಿ, ಮೃತ್ಯುಂಜಯ ವಸ್ತçದ,ವಿಠ್ಠಲ ಕುಳ್ಳೊÃಳಿ, ದೇವಪ್ಪಾ ಮಂಟೂರ, ಸದಾಶಿವ ಸಂಕ್ರಾವತ, ಶಂಕರ ಕುಳಲಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

loading...