ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಎಲ್‍ಪಿಜಿ ಗ್ಯಾಸ್ ವಿತರಣೆ

0
73

ಶಿರಹಟ್ಟಿ: ಕೇಂದ್ರ ಸರರ್ಕಾರ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಉಜ್ವಲ್ ಯೋಜನೆ ಅಡಿಯಲ್ಲಿ ಅಡುಗೆ ಮನೆಯು ಹೊಗೆ ಮುಕ್ತಗೊಳ್ಳಬೇಕಲು ಉಚಿತವಾಗಿ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಇತ್ತೀಚೆಗೆ ತಾಲೂಕಿನ ವಡವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡವಿ-ಹೊಸೂರ ಹಾಗೂ ಅಲಗಿಲವಾಡ ಗ್ರಾಮಗಳ ಫಲಾನುಭವಿಗಳಿಗೆ ಎಲ್‍ಪಿಜಿ ಗ್ಯಾಸ್ ಸಿಲಿಂಡರಗಳ ವಿತರಿಸಿ ಮಾತನಾಡಿದ ಅವರು.
ಹೊಗೆ ಸೇವಿಸುವುದರಿಂದ ಭಾರತ ದೇಶದಲ್ಲಿ ಬಹಳಷ್ಟು ಮಹಿಳೆಯರು ಅಸ್ತಮಾದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ಇದರಿಂದ ಮಹಿಳೆಯರನ್ನು ಮುಕ್ತಿಗೊಳಿಸಿ ಅವರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದಲೇ ಬಡವರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಬಿಪಿಎಲ್ ಪಡಿತರ ಚೀಟಿ ಹೊಂದಿದ ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಣ್ಣಗಂಗವ್ವ ಭಾವಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತಿ ಸದಸ್ಯ ಈಶ್ವರಪ್ಪ ಹುಲ್ಲಲ್ಲಿ, ನೂರಹಮ್ಮದ ಗೋಕಾವಿ, ಮಲ್ಲೇಶಪ್ಪ ಲಮಾಣಿ, ಪರಸುರಾಮ ಇಮ್ಮಡಿ, ಮಂಜುನಾಥ ಜೋಗಿ, ಅಶೋಕ ಪಲ್ಲೇದ, ರಾಮಣ್ಣ ಲಮಾಣಿ, ಶಿವನಗೌಡ ಕಂಠಿಗೌಡ್ರ, ತಿಮ್ಮರಡ್ಡಿ ಅಳವಂಡಿ, ಮಂಜುನಾಥ ಶಂಕಿನದಾಸರ, ಜಾನು ಲಮಾಣಿ, ಶಂಕರ ಮರಾಠೆ, ಯಲ್ಲಪ್ಪ ಇಂಗಳಗಿ, ಶರೀಫಸಾಬ ಛಬ್ಬಿ, ಪ್ರವೀಣಗೌಡ ಪಾಟೀಲ, ಲಲಿತಾ ಬಾಲೇಹೊಸೂರ, ನಿರ್ಮಲಾ ಚನ್ನದಾಸರ, ದೇವಕ್ಕ ಹರಿಜನ, ಸುರೇಶ ಡಬಾಲಿ, ಎಫ್ ಜಿ. ಪಾಟೀಲ, ಎಮ್ ಎನ್. ಜಲ್ಲಿಗೇರಿ, ಮಲ್ಲಪ್ಪ ಹುಲ್ಲೂರ, ಶಿವಪ್ಪ ಭಾವಿ, ನಿಂಗಪ್ಪ ಪೂಜಾರ, ವಿ ಜಿ. ಪಾಟೀಲ, ಶಿವಪ್ಪ ಹಾರೋಗೇರಿ, ಅಬ್ದುಲ್ ಲಂಗೋಟಿ, ಇಮಾಮಸಾಬ ಕನಕವಾಡ ಹಾಗೂ ಇನ್ನು ಅನೇಕ ಗಣ್ಯವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...