ಉತಾರವನ್ನು ಪಡೆಯಲು ಪರದಾಟ:

0
50

ರೋಣ: ಬೆಳೆ ವಿಮೆಯನ್ನು ತುಂಬುವ ಸಲುವಾಗಿಪಟ್ಟಣದ ಹಳೇ ತಹಸೀಲ್ದಾರ ಕಛೇರಿಯ ಕೊಠಡಿಯಲ್ಲಿ ಕೊಡಲ್ಪಡುವ ಉತಾರವನ್ನು ಪಡೆಯಲು ಸಾಲು ಸಾಲಾಗಿ ನೇರೆದಿದ್ದ ಜನಸ್ತೋಮ. ರೋಣ ಪಟ್ಟಣದ ಹಳೇ ತಹಸೀಲ್ದಾರ ಕಛೇರಿಯ ಕೊಠಡಿಯಲ್ಲಿ ಕೊಡಲ್ಪಡುವ ಉತಾರವನ್ನು ಬೆಳೆ ವಿಮೆಯನ್ನು ತುಂಬುವ ಸಲುವಾಗಿ ರೈತರು ಹರಸಾಹಸವನ್ನೆ ಮಾಡುವಂತಾಗಿದೆ. ಸುತ್ತಮುತ್ತಲಿನ ಗ್ರಾಮದ ರೈತರು ಬೆಳಗ್ಗೆಯಿಂದಲೆ ಪಾಳೆಯದಲ್ಲಿ ನಿಂತು ಉತಾರವನ್ನು ಪಡೆದುಕೊಂಡರು.ಇಲ್ಲವಾದರೆ ಉತಾರ ದೊರೆಯುವದಿಲ್ಲ,ಎಂಬುದು ರೈತರ ಆತಂಕ.ಯಾಕೆಂದರೆ ಮಳೆರಾಯ ಅವಶ್ಯವಿದ್ದ ವೇಳೆಯಲ್ಲಿ ಕೈ ಕೊಟ್ಟಿದ್ದರ ಫಲದಿಂದಾಗಿ,ಉಳಿದಂತಹ ಬೆಳೆಗಳಿಗೆ ವಿಮೆಯನ್ನು ಮಾಡಿಸಿದರೆ ಅಲ್ಪಸ್ವಲ್ಪವಾದರೂ ದೊರೆಯಬಹುದು ಎಂಬ ಉದ್ದೇಶದಿಂದ ಉತಾರವನ್ನು ಸಾಲು ಸಾಲಾಗಿ ನಿಂತು ಉತಾರವನ್ನು ಪಡೆಯುವಲ್ಲಿ ಯಶಸ್ವಿಯಾದರು. ರೋಣ ತಾಲೂಕಿನ ಹಿರೇಮಣ್ಣೂರಿನಿಂದ, ಉತಾರವನ್ನು ಪಡೆಯಲು ಬಂದಂತಹ ರೈತರೂಬ್ಬರು ನೋಡ್ರಿ ಸರ್,ನಾನು ಬೆಳಗ್ಗೆ 8ಗಂಟೆಗೆ ಉತಾರ ತಗೊಳ್ಳಾಕ ಬಂದಿನ್ರಿ,ಇಲ್ಲೆ ನೋಡಿದ್ರ ಆವಾಗಲೇ ಪಾಳೆ ಹಚ್ಚಾರೀ.ಈಗ ವೇಳೆಮಧ್ಯಾಹ್ನ 3ಗಂಟೆ ಅಗೈತ್ರಿ ಇನ್ನೂ ಉತಾರ ಸಿಕ್ಕಿಲ್ಲರಿ ಎಂದು ಈ ಸಂದರ್ಭದಲ್ಲಿ ತಮ್ಮ ಅಳಲನ್ನು ತೊಡಿಕೊಂಡರು.ಅಷ್ಟೇ ಅಲ್ಲದೆ ಈ ಉತಾರವನ್ನು ಪಡೆಯಲು ಮಹಿಳೆಯರೂ ಕೊಡ ಬೆಳಗ್ಗೆಯಿಂದಲೇ ಸಾಲಿನಲ್ಲಿ ಉತಾರವನ್ನು ಪಡೆಯಲು ಆಗಮಿಸಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here