ಉತ್ತಮ ಪರಿಸರ ನಿರ್ಮಿಸಿ: ಡಾ. ಹೆಬ್ಬಾಳ

0
28

ಗುಳೇದಗುಡ್ಡ: ಅಧುನಿಕರಣದಿಂದಾಗಿ ಮಾನವ ಗಿಡಮರಗಳನ್ನು ಕಡಿಯುತ್ತಿದ್ದಾನೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಪ್ರಾಕೃತಿಕ ಅವಘಡಗಳು ಉಂಟಾಗುತ್ತಿವೆ. ಪರಿಸರ ವಿನಾಶದಿಂದ ಮಾನವನೂ ಸೇರಿದಂತೆ ಭೂಮಿಯ ಮೇಲಿನ ಜೀವಿಗಳ ಬದುಕು ಕಷ್ಟವಾಗುತ್ತಿದೆ. ನಾವು ಸಸಿಗಳನ್ನು ನೆಟ್ಟು ಅವುಗಳು ಮರವಾಗಿ ಬೆಳೆಸಿ, ಉತ್ತಮ ಪರಿಸರ ನಿರ್ಮಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ಹೆಬ್ಬಾಳ ಹೇಳಿದರು. ಅವರು ವಿಶ್ವಪರಿಸರ ದಿನದ ಅಂಗವಾಗಿ ಸಮೀಪದ ತೋಗುಣಶಿ ಗ್ರಾಮದ ಪ್ರಾಥಮಿ ಆರೋಗ್ಯ ಕೇಂದ್ರದ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು. ಈ ಸಂದರ್ಭದಲ್ಲಿ ಕೋಟಿಕಲ್ಲ ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃಬಾಯಿ ಸೀತಿಮನಿ, ಅಬ್ದುಲ್ ರೆಹಮಾನ ಯಳ್ಳಿಗುತ್ತಿ., ಹುಚ್ಚೆÃಶ ಪೂಜಾರ, ಮುತ್ತ ಸಂಗಳದ, ಆರ್.ಎ. ಕೊನ್ನಳ್ಳಿ, ಎಸ್.ಎಸ. ಕಲಬುರ್ಗಿ, ನಾಗೇಶ ಆರಿ, ಕೆ.ಆರ್. ಮಡಿವಾಳರ, ಬಸಮ್ಮ ಗಂಗೂರ, ಶೋಭಾ ನೀಲನ್ನವರ, ದಿವ್ಯಾ ಕೊನೆಸಾಗರ, ಎಸ್.ಡಿ. ಪೂಜಾರ, ಎಸ್.ಬಿ. ನೋಟಗಾರ, ಪಿ.ಡಿ. ನೇಮದಿ, ನವೀನ ಜುಟ್ಟಲಮಡ್ಡಿ ಮತ್ತಿತರರು ಇದ್ದರು.

loading...