ಉತ್ತಮ ಬದುಕಿಗೆ ಸ್ವಚ್ಛತೆ ಅವಶ್ಯ: ಸಿದ್ದೇಶ್ವರ ಶ್ರೀಗಳು  

0
42

ಲೋಕಾಪುರ : ಮನುಷ್ಯನ ಬದುಕು, ಹಸನಾಗಲು ಹಾಗೂ ಅರಳಲು ವಚನಗಳು ಬೇಕೇ ಬೇಕು, ಉತ್ತಮ ಬದುಕು ಸಾಗಿಸಲು ಸ್ವಚ್ಛತೆ ಅವಶ್ಯ, ಜೀವನವನ್ನು ಸದಾ ಸಂತೋಷದಿಂದ ನಡೆಸುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ಸಂಪತ್ತು ಹಾಗೂ ನಮ್ಮ ಜೀವ ನಶ್ವರ ಎನ್ನುವುದನ್ನು ಮನಗಾಣಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಜಿ ತಿಳಿಸಿದರು.    ಲೋಕಾಪುರ ಸಮೀಪದ ಮಲ್ಲಾಪುರ ಪಿ.ಎಲ್‌. ಗ್ರಾಮದಲ್ಲಿ ಶಿವಾನಂದ ಮಠದಲ್ಲಿ ಗುರು ಪಾದಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮನೆ, ಸಂಪತ್ತು ಗಳಿಸಿ ಇಟ್ಟರೆ ಜೀವನದಲ್ಲಿ ನೆಮ್ಮದಿ, ಶಾಂತಿ ಲಭಿಸುವುದಿಲ್ಲ. ಮನುಷ್ಯ ಸದಾ ದು:ಖಿಯಾಗಿ ಬದುಕಬಾರದು. ದೇವರು ನಮ್ಮನ್ನು ಕರೆಯಬೇಕೇ ವಿನಾ ನಾವು ದೇವರನ್ನು ಕರೆಯಬಾರದು. ಸಂಪತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಮಾನಿನಂತೆ. ಇರುವುದನ್ನು ಒಪ್ಪಿಕೊಳ್ಳುವುದೇ ಜೀವನ.    ಲಕ್ಷಾನಟ್ಟಿ ಶಿವಾನಂದ ಮಹಾಸ್ವಾಮಿಗಳು, ದಾದನಟ್ಟಿಯ ನಿಜಾನಂದ ಮಹಾಸ್ವಾಮಿಗಳು, ರಾಮದುರ್ಗದ ಜಗದಾತಾನಂದ ಮಹಾಸ್ವಾಮಿಗಳು, ಮಲ್ಲಾಪು ಪಿ.ಎಲ್‌.ದ ಸದಾನಂದ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು.   ಸಿದ್ಧೇಶ್ವರ ಶ್ರೀಗಳನ್ನು ಶಾಲಾ ವಿದ್ಯಾರ್ಥಿಗಳು ದಾರಿಯುದ್ದಕ್ಕು ಚಪ್ಪಾಳೆ ತಟ್ಟುವುದರ ಮೂಲಕ ಬರಮಾಡಿಕೊಂಡರು ಶಿವಾನಂದ ಮಠದಿಂದ ಶ್ರೀಗಳನ್ನು ಸನ್ಮಾನಿಸಿದರು. ಸ್ಥಳೀಯರಾದ ಮಲ್ಲಪ್ಪ ಶಿರೂರ, ಹಣಮಂತ ಶಿರೂರ, ನಾರಾಯಣಪ್ಪ ಪರಪ್ಪನವರ, ಕೃಷ್ಣಾ ಸಂಶಿ, ವೆಂಕಪ್ಪ ಸಂಶಿ, ರವಿ ಪಾಟೀಲ, ಫಕೀರಪ್ಪ ಬೂದಿಹಾಳ, ರಾಮನಗೌಡ ಪಾಟೀಲ, ಶ್ರೀಕಾಂತ ಪೂಜೇರ, ವಿಷ್ಣು ಪಡೆಪ್ಪನವರ, ಸುರೇಶ ನಜರದ, ವೆಂಕಪ್ಪ ಬೂದಿಹಾಳ, ಶ್ರೀಕಾಂ ಗೊಸಬಾಳ, ಲೋಕಣ್ಣ ಕೊಪ್ಪದ, ಭೀಮಪ್ಪ ಕೆಂಚರಡ್ಡಿ, ಉಮೇಶ ಪುರವಾರ, ಹಣಮಂತ ದುರ್ಗನ್ನವರ ಮಂಜುನಾಥ ಪಾಟೀಲ, ಎಸ್‌.ಟಿ.ತಿರಕನ್ನವರ, ದಾದನಟ್ಟಿ, ಕನಸಗೇರಿ, ಮಲ್ಲಾಪೂರ, ಹೊಸಕೊಟಿ, ಲಕ್ಷಾನಟ್ಟಿ ಗ್ರಾಮದ ಅನೇಕ ಭಕ್ತರು ಆಗಮಿಸಿದ್ದರು.

loading...