ಉತ್ತರ ಕರ್ನಾಟಕದ ತಿಲಕ ಡಾ.ಪ್ರಭಾಕರ ಕೋರೆ: ನೇಸರಿ

0
8

ಬೆಳಗಾವಿ: ಡಾ. ಪ್ರಭಾಕರ ಕೋರೆ ಉತ್ತರ ಕರ್ನಾಟಕದ ತಿಲಕ. ಇಂದು ಬೆಳಗಾವಿ ಜಿಲ್ಲೆ ವಿಶ್ವದಾದ್ಯಂತ ಹೆಸರುವಾಸಿಯಾಗಲು ಕೆಎಲ್‌ಇ ಸಂಸ್ಥೆ ಹಾಗೂ ಪ್ರಭಾಕರ ಕೋರೆ ಅವರ ಕೊಡುಗೆ ಅಪಾರವೆಂದು ಡಾ. ಪ್ರಭಾಕರ ಕೋರೆ ಸಹಕಾರಿ ಕೋಆಪರೇಟಿವ ಬ್ಯಾಂಕಿನ ಚೆರಮನ್ನರಾದ ಅಮೃತರಾಜ ನೇಸರಿ ಹೇಳಿದರು.
ಅವರು ಗುರುವಾರ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಸಂಕೇಶ್ಬರ ಪಟ್ಟಣದಲ್ಲಿ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೆÃರಿತ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೆಎಲ್‌ಇ ಸಂಸ್ಥೆಯು ಶಿಕ್ಷಣ ಕ್ಷೆÃತ್ರ, ವೈದ್ಯಕೀಯ ಕ್ಷೆÃತ್ರ ಹಾಗೂ ಸಾರ್ವಜನಿಕ ಉದ್ದಿಮೆ ಹೀಗೆ ಹಲವಾರು ಕ್ಷೆÃತ್ರಗಳಲ್ಲಿ ಭಾರತವಷ್ಟೆÃ ಅಲ್ಲದೇ ದೇಶ ವಿದೇಶಗಳಲ್ಲಿಯೂ ಹೆಸರುವಾಸಿಯಾಗುವಂತಹ ಕಾರ್ಯವನ್ನು ನಿರ್ವಹಿಸುವಂತೆ ಮಾಡಿದ ಡಾ. ಪ್ರಭಾಕರ ಕೊರೆ ಅವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.
ಇನ್ನೊಬ್ಬ ಮುಖ್ಯ ಅತಿಥಿ ಸಂಜಯ ಶಿರಕೋಲಿ ಮಾತನಾಡಿ, ರಕ್ತವೂ ಶರೀರ ಮುಖ್ಯ ಅಂಗವಾಗಿದೆ ಅದನ್ನು ಬೇರಾವ ಮಾರ್ಗಗಳಿಂದಲೂ ಉತ್ಪಾದಿ¸ಲು ಸಾಧ್ಯವಿಲ್ಲ. ಅಂತಹ ಅಮೂಲ್ಯವಾದ ಭಾಗವನ್ನು ಇಂದು ಡಾ. ಪ್ರಭಾಕರ ಕೋರೆ ಜನ್ಮ ದಿನದ ನಿಮಿತ್ತವಾಗಿ ದಾನಮಾಡುತ್ತಿರುವದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ೪೧ ಜನರು ರಕ್ತದಾನzಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮುನ್ಸಿಪಲ ಕಾರ್ಪೊರೇಟ್‌ನ ಸದಸ್ಯ ಸುನಿಲ ಪರ್ವತರಾವ್, ಬಸವರಾಜ ಬಿ, ಅಭಿಜಿತ ಕುರನಕರ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತಭಂಡಾರ ಅಧಿಕಾರಿ ಡಾ. ವಸಂತ ಶಿಂಧೆ, ಸಾರ್ವಜನಿಕ ಸಂಪರ್ಕಾಧಿಕಾರಿ ಅರುಣ ನಾಗಣ್ನವg ಇತರೆ ವೈದ್ಯಕೀಯ ಸಿಬ್ಬಂದಿ ಹಾಗೂ ಸಂಕೇಶ್ವರ ಪಟ್ಟಣವಾಸಿಗಳು ಭಾಗವಹಿಸಿದ್ದರು.

loading...