ಉತ್ತರ ಕರ್ನಾಟದ ರೈಲ್ವೆÃ ವಲಯಕ್ಕೆ ಉದಾಸಿಯವರ ಕೊಡುಗೆ ದೊಡ್ಡದು : ಬಸವಣ್ಣೆಯ್ಯ ಹಿರೇಮಠ

0
12

ಗದಗ: ಕೇಂದ್ರ ಸರಕಾರದ ಮೂಲಕ ಉತ್ತರ ಕರ್ನಾಟಕದ ರೇಲ್ವೆÃ ವಲಯಕ್ಕೆ ಸಂಸದ ಶಿವಕುಮಾರ ಉದಾಸಿ ಅವರು ನೀಡಿದ ಕೊಡುಗೆ ಅನುಪಮವಾಗಿದೆ ಎಂದು ಕರ್ನಾಟಕ ರಾಜ್ಯ ರೇಲ್ವೆÃ ಅಭಿವೃದ್ಧಿ ಹೋರಾಟ ಸಮಿತಿಯ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣೆಯ್ಯ ಹಿರೇಮಠ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗದಗ ಯಲವಿಗಿ ೫೮ ಕಿ.ಮೀ ಹೊಸ ರೇಲ್ವೆÃ ಮಾರ್ಗ ರಚನೆಗೆ ೬೪೦ಕೋಟಿ ರೂ.ಗಳ ಯೋಜನೆ ರಾಜ್ಯ ಸರಕಾರದ ಜಂಟಿ ಸಹಯೋಗದೊಂದಿಗೆ ಹಾಗೂ ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರ ೯೮ ಕಿ.ಮೀ ೧೭೦೦ ಕೋಟಿ ರೂ.ಗಳ ಯೋಜನೆ ರಾಜ್ಯ ಸರಕಾರದ ಜಂಟಿ ಸಹಯೋಗದೊಂದಿಗೆ ಕೈಗೊಳ್ಳಲು ಮಂಜೂರಾತಿ ದೊರೆತಿದ್ದು ರಾಜ್ಯ ಸರಕಾರದಿಂದ ಭೂಸ್ವಾಧೀನ ಪ್ರಕ್ರಿಯೆಗೆ ಈ ಭಾಗದ ಕಾಂಗ್ರೆÃಸ್ ಧುರೀಣ ಎಚ್.ಕೆ.ಪಾಟೀಲ ಹಾಗೂ ಡಿ.ಆರ್.ಪಾಟೀಲರು ವಿಫಲತೆಯಿಂದಾಗಿ ಯೋಜನೆಗೆ ಹಿನ್ನಡೆಯಾಗಿದೆ ಇದನ್ನು ಮರೆಮಾಚಲು ಸಾಮಾಜಿಕ ಕಾರ್ಯಕರ್ತ ಗಣೇಶಸಿಂಗ್ ಬ್ಯಾಳಿ ಅವರು ಕಾಂಗ್ರೆÃಸ್ ಧುರೀಣರನ್ನು ಓಲೈಸಿಕೊಳ್ಳಲು ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ಪ್ರಜ್ಞಾವಂತ ಮತದಾರರಿಗೆ ಮನವರಿಕೆಯಾಗಿದೆ ಎಂದಿದ್ದಾರೆ.
ಗದಗ-ವಾಡಿ ರೇಲ್ವೆÃ ಮಾರ್ಗಕ್ಕೆ ಸಂಸದ ಉದಾಸಿ ಅವರು ಕೇಂದ್ರ ಸರಕಾರದಿಂದ ಮಂಜುರಾತಿ ಪಡೆದರೂ ಕಾಂಗ್ರೆÃಸ್ ಧುರೀಣರಾದ ಬಸವರಾಜ ರಾಯರೆಡ್ಡಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಂದಾಗಿ ಹಿನ್ನಡೆಯಾಗಿರುವದನ್ನು ಬುದ್ಧಿ ಜೀವಿಗಳು ಮರೆತಿಲ್ಲ.
ಕಾಂಗ್ರೆÃಸ್ ನಾಯಕರಿಂದಾಗ ಈ ನೂನ್ಯತೆಯನ್ನು ಸರಿಪಡಿಸಲು ಹಾಗೂ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಲು ಬದಾಮಿ-ಗಜೇಂದ್ರಗಡ-ಯಲಬುರ್ಗಾ ೫೩ ಕಿ.ಮೀ ಉದ್ದ ಹಾಗೂ ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಗದಗ ಕೋಟುಮಚಗಿ-ನರೇಗಲ್-ಗಜೇಂದ್ರಗಡ, ಹನಮಸಾಗರ, ಇಳಕಲ್ ಮಾರ್ಗವಾಗಿ ಲಿಂಗಸ್ಗೂರ ಮುಖಾಂತರ ವಾಡಿ ಮಾರ್ಗ ಸಂಪರ್ಕಿಸುವ ರೈಲು ಮಾರ್ಗ ನಿರ್ಮಾಣಕ್ಕಾಗಿ ಸರ್ವೆ ಕಾರ್ಯಕ್ಕೆ ಸಂಸದ ಉದಾಸಿ ಅವರು ಈಗಾಗಲೇ ಅಗತ್ಯ ಕ್ರಮ ಜರುಗಿಸಿದ್ದಾರೆ.
ಗದಗ-ಹೂಟಗಿ ೨೮೪ ಕಿ.,ಮೀ ೧೬೧೫ ಕೋಟಿ ರೂ. ವೆಚ್ಚದ ರೇಲ್ವೆ ಜೋಡಿ ಮಾರ್ಗದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಮುಂದಿನ ವರ್ಷ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ವಾಸ್ಕೊÃ ೩೦೦ ಕಿ.ಮೀ ಜೋಡಿ ಮಾರ್ಗದ ಕಾಮಗಾರಿ ೨೧೨೭ ಕೋಟಿ ರೂ.ಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ೨೦೨೨ ರೊಳಗೆ ಪೂರ್ಣಗೊಳ್ಳಲಿದೆ.
ಅಲ್ಲದೆ ಪ್ರಯಾಣಿಕರಿಗೆ ಅನುಕೂಲವಾಗಿಸಲು ಗದುಗಿನಲ್ಲಿ ಸ್ವಯಂ ಚಾಲಿತ ಯಂತ್ರ, ಬೆಟಗೇರಿ ಭಾಗದ ರೇಲ್ವೆÃ ಪ್ರಯಾಣಿಕರಿಗೆ ವಿಶೇಷ ಪ್ರತ್ಯೆÃಕ ಟಿಕೇಟ್ ಕೌಂಟರ್, ಗದಗ ರೇಲ್ವೆÃ ನಿಲ್ದಾಣ ಅತ್ಯಾಧುನಿಕ ಹಾಗೂ ವಿಸ್ತಾರಗೊಳಿಸಿದ್ದು ಮುಂತಾದ ಪ್ರಗತಿ ಕಾರ್ಯಗಳಾಗಿವೆ.
ಗದಗ-ಹೊಂಬಳ ರಸ್ತೆ ಎಲ್‌ಸಿ.ನಂ ೩೨ ೨೩ ಕೋಟಿ ರೂ.ಗಳ ಯೋಜನೆಯ ರೈಲು ಮೇಲಸೇತುವೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿವೆ ಎಂದಿದ್ದಾರೆ.
ಸಂಸದ ಶಿವಕುಮಾರ ಉದಾಸಿ ಅವರು ಗದಗ-ಹಾವೇರಿ ಸೇರಿದಂತೆ ಉತ್ತರ ಕರ್ನಾಟಕಕ್ಕೆ ರೇಲ್ವೆÃ ವಲಯಕ್ಕೆ ತಂದಿರುವ ಹೊಸ ಹೊಸ ಯೋಜನೆಗಳು, ಬಿಡುಗಡೆಯಾದ ಹಣ, ಕಾಮಗಾರಿಯ ವಿವರಣೆಯ ಪಟ್ಟಿಯನ್ನೆÃ ಹಾವೇರಿ ಮತಕ್ಷೆÃತ್ರದ ಸಮಸ್ತ ಮತದಾರರ ಮನೆ-ಮನಕ್ಕೆ ತಲುಪಿಸಲಾಗಿದ್ದು ಇದನ್ನು ಮತದಾರರೂ ಮನಗಂಡಿದ್ದು ಆದ್ದರಿಂದ ರೇಲ್ವೆÃಯೋಜನೆ ಅನುಷ್ಠಾನಕ್ಕೆ ಉದಾಸಿ ನಿರಾಸಕ್ತಿ ಎಂದು ಹೇಳಿಕೆ ನೀಡಿರುವ ಗಣೇಶಸಿಂಗ್ ಬ್ಯಾಳಿ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಹೇಳಿಕೆಯಲ್ಲಿ ಹುರಳಿಲ್ಲ ಎಂದು ಬಸವಣ್ಣೆಯ್ಯ ಹಿರೇಮಠ ಸ್ಪಷ್ಠಪಡಿಸಿದ್ದಾರೆ.

loading...