ಉತ್ಸಾಹಿ ಶಿಕ್ಷಕ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ನೀಡಬಲ್ಲ: ಬಸವರಾಜಪ್ಪ

0
8

 

ಕನ್ನಡಮ್ಮ ಸುದ್ದಿ-ಮುಂಡಗೋಡ: ಉಲ್ಲಾಸಿತ ಹಾಗೂ ಉತ್ಸಾಹಿ ಶಿಕ್ಷಕ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ನೀಡಬಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಮ್.ಬಸವರಾಜಪ್ಪ ಹೇಳಿದರು.
ತಾಲೂಕಿನ ಪಾಳಾ ಗ್ರಾಮದ ಮಾಹಾತ್ಮಾಜಿ ಪ್ರೌಢಶಾಲೆಯಲ್ಲಿ ತಾಲೂಕಾ ಹಿಂದಿ ವಿಷಯ ಶಿಕ್ಷಕರÀ ದ್ವಿತೀಯ ವಿಷಯ ಕಾರ್ಯಾಗಾರ ಹಾಗೂ “ರಾಷ್ಟ್ರಭಾಷಾ ಹಿಂದಿ ದಿವಸ್” ಆಚರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂಥಹ ಕಾರ್ಯಕ್ರಮಗಳು ಶಿಕ್ಷಕ ವೃಂದದಲ್ಲಿ ಉತ್ತಮ ಭಾಂದವ್ಯ, ಸ್ನೇಹ, ಸಾರಲು ಮಾದರಿಯಾಗುತ್ತವೆ. ಇದರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ, ಇಂತಹ ಕಾರ್ಯಾಗಾರಗಳಿಂದ ಕಲಿಕಾ ಕೌಶಲ್ಯಗಳೊಂದಿಗೆ ಕಲಿಸುವ ವಿಧಾನ, ವಿದ್ಯಾರ್ಥಿಗಳಿಗೆ ಅಗತ್ಯವಾದ ವಿಷಯಗಳನ್ನು ಶಿಕ್ಷಕರು ಪಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲ ವಿಷಯ ಶಿಕ್ಷಕರು ಕಾರ್ಯಾಗಾರ, ತರಬೇತಿಗಳ ಮೂಲಕ ತಮ್ಮ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಹಿಂದಿ ಭಾಷಾ ವಿಷಯ ಶಿಕ್ಷಕರ ಸಂಘದ ಅಧ್ಯಕ್ಷೆ ಗಾಯತ್ರಿ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಿತಾಶವನ್ನು ನೀಡುವಲ್ಲಿ ನಾವೆಲ್ಲರೂ ಶ್ರಮ ವಹಿಸಬೇಕಿದೆ ಎಂದು ಹೇಳಿದರು. ಡಾ. ರಮೇಶ ಅಂಬಿಗೇರ ಹಿಂದಿ ಭಾಷೆಯ ಸಮಗ್ರ ಇತಿಹಾಸ ಕುರಿತು ಉಪನ್ಯಾಸ ನೀಡಿದರು. ಶಿರಸಿ ಉಪನಿರ್ದೇಕರ ಕಾರ್ಯಾಲಯ ಶಿಕ್ಷಣಾಧಿಕಾರಿ ಹಜರೇಸಾಬ ನದಾಫ ಪ್ರೌಢಶಾಲೆಗಳ ಹಿಂದಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಹಿಂದಿ ವಿಷಯದ ಕಲಿಕೆಯಲ್ಲಾಗುವ ಕುಂದು ಕೊರತೆ, ಸಮಸ್ಯೆಗಳ ಕುರಿತು ವಿಚಾರ ವಿನಿಮಯದೊಂದಿಗೆ ಉತ್ತಮವಾದ ಕಲಿಕಾ ಅಂಶಗಳನ್ನು ಶಿಕ್ಷಕರಿಗೆ ತಿಳಿಸಿದರು. ತಮ್ಮ ಜೀವನದ ಅಮೂಲ್ಯ ಉದಾಹರಣೆ, ಸೇವಾ ಅವಧಿಯಲ್ಲಿನ ಅನುಭವಗಳನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳುತ್ತ ಎಲ್ಲ ಶಿಕ್ಷಕರು ತಮ್ಮ ಕಾರ್ಯವನ್ನು ಶ್ರದ್ಧೆ, ಭಕ್ತಿ, ಉಲ್ಲಾಸದಿಂದ ನಿರ್ವಹಿಸಿದರೆ ಯಾವ ವಿಷಯದಲ್ಲಿಯೂ ಕಡಿಮೆ ಫಲಿತಾಂಶ ಬರಲು ಸಾಧ್ಯವಿಲ್ಲ ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಈ ವೇಳೆಯಲ್ಲಿ ಮುಂಡಗೋಡ ತಾಲೂಕಿನ ವಿವಿಧ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇಂದೂರ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಎಸ್.ಎಸ್.ಸುಂಕದ ಹಾಗೂ ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕ ಪಿ.ಜಿ.ಕಲ್ಯಾಣಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕರಾದ ಶಿವಯೋಗಿ ಸವದತ್ತಿ, ಶಂಕರ ನಾಯಕ, ವಿನಾಯಕ ಶೇಟ ಮಾತನಾಡಿದರು. ಸತೀಶ ಮಡಿವಾಳ ಸ್ವಾಗತಿಸಿದರು. ಎಸ್.ಎ.ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಲತಾ ಕಡಕೋಳ ನಿರೂಪಿಸಿದರು ಮಾಲತೇಶ ವಂದಿಸಿದರು.

loading...