ಉದ್ಯೋಗ ಕಲ್ಪಿಸುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ: ಸಂಗಮೇಶ ಕಲಬುರಗಿ

0
61

17 ನೇ ಗೂಗಲ್ ಕಂಪ್ಯೂಟರ್ ಅಕಾಡೆಮಿ, ಎಸ್‍ಜಿ ಸೈನಿಕ ವಾರ್ಷಿಕ ಕಾರ್ಯಕ್ರಮ
ಉದ್ಯೋಗ ಕಲ್ಪಿಸುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ: ಸಂಗಮೇಶ ಕಲಬುರಗಿ
ಬೆಳಗಾವಿ: ಮಹಾನ್ ವೀರರು ಹೋರಾಡಿದ ಪುಣ್ಯಭೂಮಿಯಲ್ಲಿ ಜನಸಿ, ತಾಯಿ, ತಾಯಿನಾಡಿನ ಸೇವೆಗಾಗಿ ಅದೆಷ್ಟೂ ಸೈನಿಕರು ಬೆಳಗಾವಿಯಿಂದ ಆಯ್ಕೆಯಾಗಿದ್ದಾರೆ, ಇಂತಹ ಯುವಕ, ಯುವತಿಯರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉದೋಗ್ಯದ ಭರವಸೆಯ ನೆರಳಾಗಿರುವ ಗೂಗಲ್ ಅಕಾಡೆಮಿ ಹಾಗೂ ಎಸ್‍ಜಿ ಸೈನಿಕ ಕಾರ್ಯ ಶ್ಲಾಘನೀಯ ಎಂದು ರೈಲ್ವೇ ರಕ್ಷಣಾ ದಳದ ಸಹಾಯಕ ಉಪನಿರೀಕ್ಷಕರು ಸಂಗಮೇಶ ಕಲಬುರಗಿ ಹೇಳಿದರು.
ಇಲ್ಲಿನ ಚಾವಟಗಲ್ಲಿ ಮಾರುತಿ ಮಂದಿರ ಸಭಾಂಗಣದಲ್ಲಿ ಶನಿವಾರ ಗೂಗಲ್ ಕಂಪ್ಯೂಟರ್ ಅಕಾಡೆಮಿ ಹಾಗೂ ಎಸ್‍ಜಿ ಸೈನಿಕ ತರಬೇತಿ ಕೇಂದ್ರದಿಂದ ಆಯೋಜಿಸಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,
ಬಡತನದಿಂದ ಶಿಕ್ಷಣವನ್ನು ಮೊಟಕುಗೊಳಿಸಿದರೇ ಅಧಿಕ. ಕೃಷಿಯಲ್ಲೂ ಲಾಭವಿಲ್ಲದೆ, ಉದ್ಯೋಗಕ್ಕೆ ಸೇರಲು ಶಿಕ್ಷಣವನ್ನೂ ಪೂರ್ತಿಗೊಳಿಸದೆ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತಿರುವ ಇಂತಹ ಸಂಸ್ಥೆಗಳು ಹೆಚಚ್ಚು ಪಾದಾರ್ಪಣೆಯಾಗಬೇಕು.
ಬೆಳಗಾವಿ ಮಣ್ಣಿನಲ್ಲಿ ಗಟ್ಟಿತ್ತನವಿದೆ ಇಲ್ಲಿನ ಗುಣಮಟ್ಟದ ಪರಿಸರವೇ ಸದೃಢ ಯುವಕರನ್ನು ಬೆಳಸುತ್ತಿದೆ. ಇಂತಹ ಬಡಮಕ್ಕಳನ್ನು ಗುರುತಿಸಿ ಭವ್ಯ ಭಾರತದ ನಿರ್ಮಾಣ, ರಾಷ್ಟ್ರ ರಕ್ಷಣೆಗಾಗಿ ಈ ಎರಡು ತರಬೇತಿ ಕೇಂದ್ರಗಳು ಉಚಿತ ತರಬೇತಿ ನೀಡುತ್ತಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
ದೇಶ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಅದಕ್ಕಾಗಿ ಯುವಕರ ಜತೆ ಯುವತಿಯರು ಹೆಜ್ಜೆ ಹಾಕಬೇಕಿದೆ. ಇಲ್ಲಿನ ಮಾರ್ಗದರ್ಶನ, ಸೂಕ್ತ ಸೌಲಭ್ಯ ಯುವತಿಯರ ಜೀವನ ಘಟವನ್ನು ಬದಲಾಯಿಸಬಹುದು. ಇಲ್ಲಿಂದ ಪ್ರತಿ ವರ್ಷ 35-45 ವಿದ್ಯಾರ್ಥಿಗಳು ಸೈನ್ಯ ಮತ್ತು ಇತರ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾಗಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈಚೇಗೆ ಸೈನಿಕ ಹಾಗೂ ಸರಕಾರಿ ವೃತ್ತಿಗೆ ಆಯ್ಕೆಯಾದ 70 ಯುವಕ, ಯುವತಿಯರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಶಾಹಾಪುರಕರ್, ಸಂಸ್ಥೆಯ ನಿರ್ದೇಕ ಸುದೀರ ಶಹಾಪುರಕರ್, ಗೀತಾ ಅಮ್ಮಗೋಳ, ಪ್ರಾಂಜನ ಶಹಾಪುರಕರ, ಸುನಿತಾ ಬಾತಕಂಡೆ, ಪ್ರಮೋದ ಘೂಗ್ರೆಟಕರ್, ಸೌಮ್ಯಾ ಘೋಸಳ್ಳಿ, ರೇಖಾ ವಡ್ಡಿನ ಸುನೀಲ್ ಹಾಗೂ ಸರಕಾರ ತರಬೇರಿ ಪಡೆದುಕೊಳ್ಳುವ ವಿದ್ಯಾರ್ಥಿಗಳು, ಪಾಲಕರು, ಗಣ್ಯರು ಇತರರು ಇದ್ದರು.

loading...