ಉಪಚುನಾವಣೆ, ಪಾದಯಾತ್ರೆ ಬಂದಿದ್ದು ಕೋ ಇನ್ಸಿಡೆಂಟ್‌: ಸಂಸದ‌ ಜೊಲ್ಲೆ

0
78

ಬೆಳಗಾವಿ

ಬೆಳಗಾವಿಯಲ್ಲಿನ ಮೂರು ಉಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸುವುದು ನಿಶ್ಚಿತ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಶನಿವಾರ ಹುದಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹದಿನೈದು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಈಗಾಗಲೇ ಗೋಕಾಕನ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಗೋಕಾಕ ಸೇರಿದಂತೆ ಅಥಣಿ , ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು‌ ಸಾಧಿಸುವುದು ಶತಸಿದ್ದ ಎಂದರು.

ಉಪಚುನಾವಣೆ ಘೋಷಣೆಯಾಗುವ ಮುನ್ನವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ಸಂಸದರು ಪಾದಯಾತ್ರೆ ಮಾಡಬೇಕೆಂದು ಆದೇಶ ಹೊರಡಿಸಿದ್ದಾರೆ‌. ಉಪಚುನಾವಣೆ ಹಾಗೂ ಪಾದಯಾತ್ರೆ ಏಕಕಾಲಕ್ಕೆ ಬಂದಿದ್ದು ಕೋ ಇನ್ಸಿಡೆಂಟ್‌ ಎಂದರು.

ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು ಕೋ ಇನ್ಸಿಡೆಂಟ್‌. ಬಿಜೆಪಿ ಪಕ್ಷ ನನಗೆ ಯಾವ ಜವಾಬ್ದಾರಿ ಕೊಟ್ಟರು ನಾನು ಅದನ್ನು ಸ್ವೀಕರಿಸಲು ಸಿದ್ದನಿದ್ದೇನೆ ಎಂದರು.

loading...