ಉಪ ತಹಶೀಲ್ದಾರ್ ನೇಮಕಕ್ಕೆ ಆಗ್ರಹ

0
20

ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದ ನಾಡಕಚೇರಿಗೆ ಉಪತಹಶೀಲ್ದಾರ್ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣಕುಮಾರ ಶೆಟ್ಟ ಬಳಗ) ಕಾರ್ಯಕರ್ತರು ಮನವಿಪತ್ರ ಸಲ್ಲಿಸಿದರು.
ಸಾಕಷ್ಟು ಗ್ರಾಮಗಳ ಮುಖ್ಯಕೇಂದ್ರವಾದ ಬಮ್ಮನಹಳ್ಳಿ ಹೊಬಳಿಗೆ ಹಲವಾರು ತಿಂಗಳಿನಿಂದ ಉಪತಹಶೀಲ್ದಾರ್ ಹುದ್ದೆ ಖಾಲಿ ಇದೆ. ಇದರಿಂದ ಈ ಭಾಗದ ಗ್ರಾಮಸ್ಥರಿಗೆ ಅನಾನುಕೂಲತೆ ಏರ್ಪಡುತ್ತಿದೆ. ಕಂದಾಯ ಇಲಾಖೆ ಕೆಲಸಗಳು ನೆನೆಗುದಿಗೆ ಬಿದ್ದಿವೆ. ವಿವಿಧ ಯೋಜನೆಗಳ ಫಲಾನುಭವಿಗಳು ಅರ್ಜಿ ಸಲ್ಲಿಸಲು, ಜಾತಿ, ಆಧಾಯ ಮತ್ತಿತರ ಪ್ರಮಾಣಪತ್ರ ಪಡೆದುಕೊಳ್ಳಲು ಹಾನಗಲ್ಲಗೆ ಬರಬೇಕು. ಇದರಿಂದ ಕೆಲಸದಲ್ಲಿ ವಿಳಂಬವಾಗುತ್ತಿದೆ ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಕರವೆ ತಾಲೂಕು ಅಧ್ಯಕ್ಷ ನಾಗರಾಜ ಮಲ್ಲಮ್ಮನವರ ಮಾತನಾಡಿ, ಉಪತಹಶೀಲ್ದಾರ್ ಹುದ್ದೆ ಖಾಲಿ ಆಗಿದ್ದರಿಂದ ಇಲ್ಲಿನ ನಾಡ ಕಚೇರಿ ಹಾಳು ಬಿದ್ದಿದೆ. ಕಂದಾಯ ನಿರೀಕ್ಷಕರಿಂದ ಕೆಲಸವಾಗುತ್ತಿಲ್ಲ. ಎಲ್ಲ ವ್ಯವಸ್ಥೆ ಇರುವ ಈ ಕಚೇರಿಗೆ ಉಪ ತಹಶೀಲ್ದಾರ್ ಹುದ್ದೆ ಭರ್ತಿ ಮಾಡುವ ಮೂಲಕ ಗ್ರಾಮಸ್ಥರ ಅನಾವಶ್ಯಕ ಅಲೆದಾಟವನ್ನು ತಪ್ಪಿಸಬೇಕಾಗಿದೆ ಎಂದರು.
ಕರವೆ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೇಕಾರ, ಪದಾಧಿಕಾರಿಗಳಾದ ಪರಶುರಾಮ ತಳವಾರ, ಪರಶುರಾಮ ತೋಟದ, ಆಶೀಫ್ ಸಂಗೂರ, ಅಪ್ಪಣ್ಣ ಧಾರವಾಡ, ರವಿ ಪಾಟೀಲ, ಹರೀಶ ಹುಕ್ಕೆÃರಿ, ಕುಮಾರ ಧಾರವಾಡ, ನಾಗರಾಜ ಬೈಲವಾಳ, ಮುತ್ತು ಜಾಲಗಾರ, ರುದ್ರೆÃಶ ಬನ್ನಿಕೊಪ್ಪ, ಕುಮಾರ ಸವಣೂರ, ಚನ್ನಬಸಪ್ಪ ಧಾರವಾಡ, ವಿಜಯ ಬೈಲವಾಳ, ಬಸವರಾಜ ಧಾರವಾಡ, ನಾಗರಾಜ ಹುಕ್ಕೆÃರಿ, ಶಶಿ ವಡ್ಡರ, ಪರಶುರಾಮ ಅಗಸರ, ಈಶ್ವರ ಹುಲಗೂರ, ಜಾಫರ್ ವಾಲಿಕಾರ, ಸಂತೋಷ ಹಿತ್ತಲಮನಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

loading...