ಎಂ.ಕೆ.ಹುಬ್ಬಳ್ಳಿ : ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

0
65
ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಚನ್ನವ್ವಾ ಕಡಕೋಳ ಭಾವ ಚಿತ್ರ.

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.
ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸ್ಥಾನಕ್ಕೆ ಶುಕ್ರವಾರ ಬೈಲಹೊಂಗಲ ಉಪ ಭಾಗಾಕಾರಿಗಳಿಗೆ ರಾಜೀನಾಮೆ ಸಲ್ಲಿಸಿದರು.
ಕಳೆದ ಸಾಲಿನ ಅಗಷ್ಟ 2ರಂದು ಪಟ್ಟಣ ಪಂಚಾಯತ ಉಪಾಧ್ಯಕ್ಷರಾಗಿ ಚನ್ನವ್ವಾ ಚಂದ್ರಪ್ಪ ಕಡಕೊಳ ಅಧಿಕಾರ ಸ್ವೀಕರಿದರು. ಇವರು ಶುಕ್ರವಾರದಂದು ಬೈಲಹೊಂಗಲ ಉಪವಿಭಾಗಾಕಾರಿಗಳಿಗೆ ಲಿಖಿತವಾಗಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ ಪತ್ರದಲ್ಲಿ ಅವರು ನನ್ನ ವೈಯಕ್ತಿಕ ಕಾರಣಗಳಿಂದ ಉಪಾಧ್ಯಕ್ಷ್ಷೆ ಸ್ಥಾನದಲ್ಲಿ ಆಡಳಿತ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಕಾರಣ ನನ್ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಕಾರಣ ನನ್ನ ಉಪಾಧ್ಯಕ್ಷ ಸ್ಥಾನದ ರಾಜೀನಾಮೆಯನ್ನು ಸ್ವೀಕರಿಸಲು ವಿನಂತಿಸಿದ್ದಾರೆ.

 

 

 

loading...