ಎನ್‌ಸಿಸಿ ರಾಷ್ಟçಕ್ಕಾಗಿ ದುಡಿಯುವ ಮನೋಭಾವ ಬೆಳೆಸುತ್ತದೆ: ಕರ್ನಲ್ ಅಭಿಜಿತ್

0
6

ವಿಜಯಪುರ : ಎನ್‌ಸಿಸಿ ರಾಷ್ಟçಭಕ್ತಿ ಹಾಗೂ ರಾಷ್ಟçಕ್ಕಾಗಿ ದುಡಿಯುವ ಮನೋಭಾವವನ್ನು ಬೆಳೆಸುತ್ತದೆ ಎಂದು ಕರ್ನಾಟಕ-ಗೋವಾ ೩೬ ಬಟಾಲಿಯನ್ ಘಟಕದ ಕರ್ನಲ್ ಅಭಿಜಿತ್ ಮೇಲಂಕರ ಹೇಳಿದರು.
ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುವ ವಿಶ್ವಭಾರತಿ ಮಾದರಿ ಪ್ರೌಢಶಾಲೆಯಲ್ಲಿ ಎನ್.ಸಿ.ಸಿ. ಘಟಕದ ಪ್ರಾರಂಭೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ವಾಭಿಮಾನ, ದೇಶಾಭಿಮಾನವನ್ನು ಮೂಡಿಸುತ್ತದೆ. ಎನ್‌ಸಿಸಿ ಪಥಸಂಚಲನ ಮೊದಲಾದ ಕಾರ್ಯಚಟುವಟಿಕೆಗಳು ಶಿಸ್ತು ಕಲಿಸುವ ಜೊತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸಲು ಪ್ರೆÃರಣೆ ನೀಡುತ್ತವೆ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವ ಅಪೂರ್ವವಾದ ಅವಕಾಶವನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟçಕ್ಕಾಗಿ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿ ಎನ್‌ಸಿಸಿ ಚಟುವಟಿಕೆಗಳಲ್ಲಿ ಸಕ್ರಿÃಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಎನ್‌ಸಿಸಿ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಮೌಲ್ಯ, ಉತ್ತಮ ಸಂಸ್ಕಾರಗಳನ್ನು ಬಿತ್ತಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸುತ್ತದೆ ಎಂದರು. ಎನ್.ಸಿ.ಸಿಯಲ್ಲಿ ಪಥಸಂಚಲನ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಳ್ಳೆಯ ತರಬೇತಿ ನೀಡಲಾಗುತ್ತಿದೆ, ಈ ತರಬೇತಿಯಲ್ಲಿ ಪರಿಣಿತಿಯಾದರೆ ಕರ್ನಾಟಕ ಮತ್ತು ಗೋವಾ ರಾಜ್ಯಗಳಿಂದ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೊÃತ್ಸವ ಸಮಾರಂಭದ ಪರೇಡ್‌ನಲ್ಲಿ ಭಾಗವಹಿಸುವ ಅಪೂರ್ವ ಅವಕಾಶವೂ ದೊರಕುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪ್ರೊ.ಶೀಲಾ ಬಿರಾದಾರ ಮಾತನಾಡಿ, ಎನ್‌ಸಿಸಿ ಶಿಸು,್ತ ಒಳ್ಳೆಯ ವ್ಯಕ್ತಿತ್ವ, ನಾಯಕತ್ವದ ಗುಣ ಬೆಳೆಸುತ್ತದೆ. ಶಾರೀರಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ.
ಇದೇ ಸಂದರ್ಭದಲ್ಲಿ ಕರ್ನಲ್ ಅಭಿಜಿತ ಮೇಲಂಕರ ಹಾಗೂ ಸುಬೇದಾರ ಮೇಜರ ಪಾಂಡುರಂಗ ಗವಾಸ ಅವರನ್ನು ಸನ್ಮಾನಿಸಲಾಯಿತು.

ಎಸ್.ಎ. ಹುಗ್ಗಿ, ಎ.ಎಚ್ ಸಗರ, ಪ್ರವೀಣ ಗೆಣ್ಣೂರ, ವಿವೇಕ ವೈಶಂಪಾಯನ, ಭಾರತಿ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಮೊಹಸಿನಾ ಇನಾಮದಾರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮಹಮ್ಮದ ಇಲಿಯಾಸ ವಂದಿಸಿದರು.

loading...