ಎನ್ ಸಿ ಪಿ ಗೆ ಭಾಸ್ಕರ್ ಜಾಧವ್ ರಾಜೀನಾಮೆ

0
4

ಔರಂಗಾಬಾದ್, ಮಹಾರಾಷ್ಟ್ರ-ಮಹಾರಾಷ್ಟ್ರದ ಮಾಜಿ ಸಚಿವ, ಕೊಂಕಣ ವಲಯದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಾಯಕ ಭಾಸ್ಕರ್ ಜಾಧವ್ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಶಿವಸೇನೆ ಹಿರಿಯ ನಾಯಕರಾದ ಅನಿಲ್ ಪರಬ್ ಮತ್ತು ಮಿಲಿಂದ್ ನರ್ವೇಕರ್ ಅವರೊಂದಿಗೆ ರತ್ನಗಿರಿಯಿಂದ ಚಿಕ್ತಾಥಾನಾ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಭಾಸ್ಕರ್ ಜಾಧವ್ ಅವರಿಗೆ ಮಾಜಿ ಸಂಸದ ಚಂದ್ರಕಾಂತ್ ಖೈರೆ ಮತ್ತಿತರರು ಸ್ವಾಗತ ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾಧವ್, “ರಾಜ್ಯ ವಿಧಾನಸಭಾಧ್ಯಕ್ಷ ಹರಿಭೌ ಬಗಾಡೆ ಅವರಿಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು. ಮುಂದೆ ಶಿವಸೇನೆ ಸೇರಿ ಪಕ್ಷದ ನಾಯಕರು ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ” ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಹಾಘರ್ ವಿಧಾನಸಭಾ ಕ್ಷೇತ್ರದಿಂದ ಶಿವಸೇನೆ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.
ವಿರೋಧ ಪಕ್ಷ ಎನ್‌ ಸಿ ಪಿ ಮತ್ತು ಕಾಂಗ್ರೆಸ್ ನ ಅನೇಕ ನಾಯಕರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಇತ್ತೀಚೆಗೆ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ ಸೇರ್ಪಡೆಯಾಗುತ್ತಿದ್ದಾರೆ.
ಶಿವಸೇನೆಯಿಂದಲೇ ರಾಜಕೀಯ ವೃತ್ತಿ ಆರಂಭಿಸಿದ್ದ ಜಾಧವ್ ನಂತರ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ್ದರು. 20096 ರಲ್ಲಿ ಕಾಂಗ್ರೆಸ್ – ಎನ್ ಸಿ ಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದು.
ಅಕ್ಟೋಬರ್ ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

loading...