ಬೆಂಗಳೂರು, ಅ.18- ಬಡತನ ರೇಖೆಗಿಂತ ಕೆಳಗಿರುವ
ಕುಟುಂಬಗಳಿಗೆ ನೀಡಲಾಗುತ್ತಿರುವ ಆರೋಗ್ಯ ವಿಮಾ
ಸೌಲಭ್ಯವನ್ನು ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲು
ಚಿಂತನೆ ನಡೆಸಿರುವುದಾಗಿ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
ಭಾರತೀಯ ಹೃದ್ರೌಗ ತಜ್ಞ ವೈದ್ಯರ ಸಂಸ್ಥೆ
ವತಿಯಂದ ಏರ್ಪಡಿಸಿದ್ದ ನಾಲ್ಕನೇ ವಂಷಂಜದಂ ಹೃದ್ರೌಗ
ವೈದ್ಯರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವರ್ಗದವರಿಗೆ ಆರೋಗ್ಯ ವಿಮೆ ನೀಡಲಾಗುತ್ತಿದೆ.
ಬಡತನ ರೇಖೆಗಿಂತ ಮೇಲ್ಪಟ್ಟವರಿಗೂ ಈ ಸೌಲಭ್ಯ
ಒದಗಿಸುವ ಅಗತ್ಯವಿದೆ ಎಂದರು.
ಆರೋಗ್ಯ ಚಿಕಿತ್ಸೆ ದುಬಾರಿಯಾಗಿದ್ದು, ಖಾಸಗಿ
ಆಸ್ಪತ್ರೆಯಲ್ಲಿ ಒಮ್ಮೆ ಚಿಕಿತ್ಸೆ ಪಡೆದರೆ ಅದರ ವೆಚ್ಚ ಭರಿಸಲು
ಬಡ ಕುಟುಂಬಗಳು ಆರು ತಿಂಗಳು ದುಡಿದರೂ ಸಾಲ
ತಿರಿಸಲಾಗುವುದಿಲ್ಲ. ಖಾಸಗಿ ಆಸ್ಪತ್ರಗಳಿಗಿಂತ ಸರ್ಕಾರಿ
ಆಸ್ಪತ್ರೆಗಳೆನು ಕಡಿಮೆ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ
ಪ್ರಯೋಗಾಲಯ, ತಜ್ಞ ವೈದ್ಯರಿದ್ದಾರೆ. ಸಾರ್ವಜನಿಕರು
ವೈದ್ಯರೊಂದಿಗೆ ಚರ್ಚಿಸಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳುವ
ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ
ನೀಡಿದರು.