ಎಬಿವಿಪಿಯಿಂದ ಶುಲ್ಕ ನೀತಿ ಹಿಂದೆ ಪಡೆಯಲು ಮನವಿ

0
14

ಹುಬ್ಬಳ್ಳಿ, ಅ 13. ರಾಜ್ಯ ಸರ್ಕಾರ ಹೊರಡಿಸಿದ ವಿದ್ಯಾರ್ಥಿಗಳ ಆದಾಯ ವಿನಾಯತಿ ರದ್ದುಗೊಳಿಸಿ ಪೂರ್ಣ ಪ್ರಮಾಣದ ಶುಲ್ಕ ತುಂಬುವಂತೆ ಆದೇಶವನ್ನು ತಕ್ಷಣವಾಗಿ ಹಿಂದೆ ಪಡೆಯಬೇಕು ಎಂದು ಅಖಿಲ್ ಭಾರತೀಯ  ವಿದ್ಯಾರ್ಥಿ ಪರಿಷತ್ ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದರು.

ಪ್ರಸಕ್ತ ಸಾಲಿನ ಸರಕಾರವು ಬಿಸಿಎಂ  ಇಲಾಖೆಯಿಂದ ಕಾಲೇಜುಗಳಿಗೆ ಹಣ ನೀಡುವುದಿಲ್ಲ, ನೇರವಾಗಿ ವಿದ್ಯಾರ್ಥಿಗಳಿಂದ ತುಮಬಿಸಿಕೊಳ್ಳಲು ಆದೇಶವನ್ನು ಕಾಲೇಜುಗಳಿಗೆ ಹೊರಡಿಸಿದ್ದು ಈ ತುಂಬಿದ ಹಣ ಆಯಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಕಳೆದ ವರ್ಷ 150 ರೂ ಮಾತ್ರ ತುಂಬಿಕೊಂಡಿದ್ದಾರೆ. ಈ ವರ್ಷ 1497 ರೂ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ಮೆರಿಟ್ ಮೂಲಕ ನೀಡಲಾಗುವುದು. ಒಂದು ವೇಳೆ ಅನುದಾನದ ಕೊರತೆ ಇದ್ದರೆ ಉಳಿದ ಅರ್ಜಿಗಳನ್ನು ಲ್ಯಾಪ್ಸ್ ಎಂದು ಪರಿಗಣಿಸಿ ಹಣವನ್ನು ನೀಡುವುದಿಲ್ಲ ಎಂದು ಹೇಳುತ್ತಿದೆ.

ಕರ್ನಾಡಕದಲ್ಲಿ ಬರಗಾಲವಿರಿವುದರಿಂದ ವಿದ್ಯಾರ್ಥಿಗಳು  ಸರಕಾರವು ಕೂಡಲೇ ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ಹಿಂದುರುಗಿಸಬೇಕು ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಎಬಿವಿಪಿ ರಾಷ್ಟ್ತ್ರೀಯ ಉಪಾಧ್ಯಕ್ಷ ರಘು ಅಕ್ಮುಂಜಿ, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ನಗರ ಸಂಘಟನಾ ಕಾರ್ಯದರ್ಶಿ ಪ್ರಥ್ವಿಕುಮಾರ, , ಶ್ರೀನಿಧಿ ನಾಡಜೋಶಿ, ಪ್ರಸನ್ನ ಬಂಗಾಳೆ, ಬಸವರಾಜ ಜಾಬಿನ್, ತೇಜಸ್ ಗೋಕುಲ್ ಯೋಗೀಶ ಮುಂತಾದವರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here