ಎಲ್ಲ ಸಮಾಜಗಳು ಅಭಿವೃದ್ಧಿಯಾಗಬೇಕು: ಗದ್ದಿಗೌಡರ

0
3

ಗುಳೇದಗುಡ್ಡ: ವ್ಯಾಪಾರದ ಉದ್ದೆÃಶದಿಂದ ದೇಶದ ಮೂಲೆ ಮೂಲೆಯಲ್ಲಿ ನೆಲಸಿಸುವ ಮಾರವಾಡಿ ಸಮಾಜ ವ್ಯಾಪಾರದೊಂದಿಗೆ ಬಡವರ ಏಳಿಗೆಗಾಗಿ ಸಮಾಜ ಸೇವೆಯನ್ನು ಮಾಡುತ್ತ ಬಂದಿದೆ. ಮಾರವಾಡಿ ಸಮಾಜ ವ್ಯಾಪಾರದೊಂದಿಗೆ ಮಕ್ಕಳ ಶಿಕ್ಷಣಕ್ಕೂ ಅಷ್ಟೆÃ ಮಹತ್ವ ನೀಡುತ್ತಿರುವ ಶ್ಲಾಘನೀಯ. ದೇಶದ ಯಾವುದೇ ಸಮಾಜ ಆರ್ಥಿಕವಾಗಿ ಅಭಿವೃದ್ಧಿಯಾದಾಗ ಅದರಿಂದ ದೇಶಕ್ಕೂ ಲಾಭವಾಗುತ್ತದೆ. ಎಲ್ಲ ಸಮಾಜಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಅವರು ಇಲ್ಲಿನ ಬಾಲಾಜಿ ಪಂಚಾಯತ ವಾಡಾದಲ್ಲಿ ಮಂಗಳವಾರ ಮಾಹೇಶ್ವರಿ ಮಹಿಳಾ ಮಂಡಳ ಹಾಗೂ ಮಾಹೇಶ್ವರಿ ಯುವ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಮಹೇಶ ನವಮಿ ಉತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿÃಕರಿಸಿ ಮಾತನಾಡಿ, ನಿಮ್ಮೆಲ್ಲರ ಬೆಂಬಲದಿಂದಾಗಿ ನಾನು ನಾಲ್ಕನೇ ಬಾರಿಗೆ ಬಾಗಲಕೋಟ ಕ್ಷೆÃತ್ರದ ಸಂಸದನಾಗಿ ಆಯ್ಕೆಯಾಗಿದ್ದು, ನಿಮ್ಮ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತೆÃನೆ ಎಂದರು.
ಅನ್ನಪೂರ್ಣ ಕಾಬ್ರಾ ಕಾರ್ಯಕ್ರಮ ಉದ್ಘಾಟಿಸಿದರು.
ಜಗದೀಶ ಸೋನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಘನಶ್ಯಾಮಜಿ ರಾಠಿ, ಕಮಲಕಿಶೋರ ಮಾಲಪಾಣಿ, ಜುಗಲಕಿಶೋರ ಭಟ್ಟಡ, ಉಮಾಬಾಯಿ ಮರ್ದಾ, ಪುಷ್ಪಾದೇವಿ ಧೂತ, ಅನೂಪ ತಾಪಡಿಯಾ, ಡಾ. ಶ್ರಿÃಕಾಂತ ಸೋನಿ, ಶ್ರಿÃಕಾಂತ ಧರಕ, ಮಧುಸೂದನ ರಾಂದಡ, ಗೋಪಾಲ ಭಟ್ಟಡ, ಸುನಿತಾ ರಾಠಿ, ವಂದನಾ ಭಟ್ಟಡ, ಸುಮನಬಾಯಿ ಧೂತ, ವಿಠ್ಠಲ ಭಟ್ಟಡ, ಶೀತಲ ಭಟ್ಟಡ, ಪ್ರಮಿಳಾಬಾಯಿ ಮನಿಯಾರ, ಗೋವಿಂದ ಬೂತಡಾ, ನಾರಾಯಣ ಮಾಲಪಾಣಿ, ಗೋಪಾಲ ಸೋನಿ ಮತ್ತಿತರರು ಉಪಸ್ಥಿತರಿದ್ದರು.

 

loading...