ಎಸ್ಸಿ, ಎಸ್ಟಿ, ಒಬಿಸಿ ವರ್ಗಳಿಗೆ ಅನುದಾನ ಬಿಡುಗಡೆ

0
52

ಕನ್ನಡಮ್ಮ ಸುದ್ದಿ-ಗೋಕಾಕ: ತಾಲೂಕಿನ ನಾಗನೂರ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ದಿ.13ರಂದು ಸನ್‌ 2017-18ನೇ ಸಾಲಿನ ಆಯವ್ಯಯ ಸಭೆಯು ಶುಕ್ರವಾರದಂದು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ನಾಗನೂರ ಪಟ್ಟಣ ಪಂಚಾಯತ ಅಧ್ಯಕ್ಷತೆ ಶೋಭಾ ಪರಸಪ್ಪ ಬಬಲಿ ವಹಿಸಿದ್ದರು.
ನಾಗನೂರು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಂ. ಎಚ್‌. ಅತ್ತಾರ ಅವರು ಸಭೆಯಲ್ಲಿ 2017-18 ನೇ ಸಾಲಿನ ರೂ. 6,393=00 ಗಳ ಉಳಿತಾಯದ ಕರಡು ಆಯವ್ಯಯವನ್ನು ಮಂಡಿಸಿದರು.
ಪಟ್ಟಣ ಪಂಚಾಯತಿಯ ಲೇಕಪಾಲಕ ವಿನಯ ಕೊಳ್ಳಿ ಇವರು ರೂ.7,42,38,348=00 ಗಳ ಆಯ ಮತ್ತು ರೂ. 7,42,31,955=00 ಗಳ ವ್ಯಯವುಳ್ಳ ಒಟ್ಟು ರೂ.6,393=00 ಗಳ ಉಳಿತಾಯದ ಅಂದಾಜು ಪಟ್ಟಿಯನ್ನು ಸಭೆಗೆ ಓದಿ ವಿವರಿಸಿದರು.
ಕೌನ್ಸಿಲ್‌ ಸಭೆಯು ಸರ್ವಾನುಮತದಿಂದ ಅನುಮೋದಿಸಿ 2017-18 ನೇ ಸಾಲಿನ ಕರಡು ಆಯವ್ಯಯವನ್ನು ಅಂಗೀಕರಿಸಿದರು. 2017-18 ನೇ ಸಾಲಿನ ಆಯವ್ಯಯದಲ್ಲಿ ನಗರಸಭೆ ನಿಧಿಯಡಿ ಶೇ 24.10 ರಡಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ರೂ.41.71 ಲಕ್ಷ ಕಾಯ್ದಿರಿಸಿದ್ದು, ಶೇ. 7.25 ರಡಿ ಇತರೆ ಹಿಂದೂಳಿದ ವರ್ಗಗಳ ಬಡತನ ನಿರ್ಮೂಲನೆ ಕಾರ್ಯಕ್ರಮಕ್ಕಾಗಿ ರೂ. 12.55 ಲಕ್ಷ ಹಾಗೂ ಶೇ.3ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ.5.20 ಲಕ್ಷ ಕಾಯ್ದಿರಿಸಿದ್ದು ಎಲ್ಲ ವಾರ್ಡಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ನಾಗನೂರ ಪ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಒತ್ತು ನೀಡಿದರು. ಈ ಸಭೆಯಲ್ಲಿ ಹಿರಿಯ ಸದಸ್ಯರು ಅನೇಕ ಸಲಹೆಗಳನ್ನು ಸಲ್ಲಿಸಿದರು. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಟ್ಟಣ ಪಂಚಾಯತಿಯ ರಾಜು ಹಡಿಗಿನಾಳ. ಸ್ವಾಗತಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here