ಏಕಾಗ್ರತೆಯಿಂದ ಓದಿದರೆ ಮಾತ್ರ ಯಶಸ್ಸು: ಕಾಶೀನಾಥ ಶ್ರಿÃ

0
16

 

ಗುಳೇದಗುಡ್ಡ: ವಿದ್ಯಾರ್ಥಿಳು ಏಕಾಗ್ರತೆಯಿಂದ ಓದಿದಾಗ ಮಾತ್ರ ಜೀವದಲ್ಲಿ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಹಳು ಏಕಾಗ್ರತೆ. ಶ್ರದ್ಧೆಯಿಂದ ಅಭ್ಯಾಸಮಾಡಬೇಕು ಎಂದು ಸ್ಥಳೀಯ ಮುರುಘಾಮಠದ ಶ್ರಿÃ ಕಾಶೀನಾಥ ಸ್ವಾಮೀಗಳು ಹೇಳಿದರು.
ಅವರು ಶನಿವಾರ ಇಲ್ಲಿನ ಬಾಲಕರ ಸರಕಾರಿ ಪೂಪೂ ಕಾಲೇಜಿನಲ್ಲಿ ಸ್ಥಳೀಯ ಭಾರತ್ ಮಾರ್ಕೆಟ್ ವರ್ತಕರ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸರ್ಕಾರ ಹಾಗೂ ದಾನಿಗಳು, ಶಿಕ್ಷಣ ಪ್ರೆÃಮಿಗಳು ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು, ಉತ್ತಮ ಸಮಾಜ ನಿರ್ಮಿಸಬೇಕು ಎಂದರು. ಭಂಡಾರಿ ಪಿಯು ಕಾಲೇಜಿನ ಪ್ರಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ನಗರದ ಭಾರತ ಮಾರ್ಕೆಟ್ ವರ್ತಕರ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿದ ಕಾರ್ಯ ಶ್ಲಾಘನೀಯ. ಶಾಲೆ ಜ್ಞಾನದೇಗುಲ. ಕತ್ತಲೆಯನ್ನು ಹೊಡೆದೋಡಿಸುವುದೇ ಜ್ಞಾನ. ವಿದ್ಯಾರ್ಥಿಗಳು ಜ್ಞಾನವನ್ನು ಸಂಪಾದಿಸಿ, ಸಮಾಜದ ಅಜ್ಞಾನದ ಕತ್ತಲೆ ಓಡಿಸಬೇಕು ಎಂದರು.

ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ವಿಭಾಗದ ಸುಮಾರು ೯೦೦ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನೋಟ್ ಪುಸ್ತಕ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ರಾಮಣ್ಣ ಬಿಜಾಪೂರ, ವಿರೂಪಾಕ್ಷಪ್ಪ ಹೆಗಡೆ, ನಿಂಗಪ್ಪ ಕೆಲೂರ, ಮಹೇಶ ಬಿಜಾಪೂರ, ನಿಂಗಪ್ಪ ಪರ್ವತಿ, ಆನಂದ ಹೆಗಡೆ, ಶಿವು ಬಳಿಗೇರ, ವಿರೂಪಾಕ್ಷಪ್ಪ ಮ್ಯಾಗೇರಿ, ಹನಮಂತ ಬಿಜಾಪುರ, ಚಂದ್ರು ಪಟ್ಟಣಶೆಟ್ಟಿ. ಸಚಿನ್ ಗಾಣಿಗೇರ, ಶಿವು ಮುರನಾಳ, ಸುದರ್ಶನ ಮುರುಡಿ, ಸಂಗಪ್ಪ ಹುನಗುಂದ, ಯೂನುಸ್ ಯಾಳಗಿ, ಭರಮಪ್ಪ ತಳವಾರ, ಶಂಕ್ರಪ್ಪ ಮುರನಾಳ, ಶೇಖಪ್ಪ ಮುರುಡಿ, ಪ್ರೌಢಶಾಲೆ ಪ್ರಚಾರ್ಯ ರಾಜಶೇಖರ ಪಾಗಿ, ನಾಗೇಶ ಪಾಗಿ, ಕೇಮಣ್ಣ ಮೇಡಿ, ಎಮ್.ಎಚ್. ಕಲಾದಗಿ, ಈರಣ್ಣ ದೊಡಮನಿ, ಪಿ.ಎಸ್. ಪಾಟೀಲ, ಎಚ್.ಜಿ. ಬಿಲೋರ, ಪಿ.ಬಿ.ಸವದತ್ತಿ ಮತ್ತಿತರರು ಇದ್ದರು.

loading...