ಏ. 16ಕ್ಕೆ ತ್ರಿವಳಿ ಕೊಲೆ ಪ್ರಕರಣದ ತೀರ್ಪು

0
46

ಕನ್ನಡಮ್ಮ ಸುದ್ದಿ-ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ತ್ರಿವಳಿ ಕೊಲೆ ಪ್ರಕರಣದ ಅಂತಿಮ ತೀರ್ಪು ಏ.16 ಕ್ಕೆ ಹೊರ ಬಿಳಲಿದೆ. ಸೋಮವಾರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣ ವಾದ, ಪ್ರತಿವಾದ ಮುಕ್ತವಾಗೊಂಡಿದ್ದು ಅಂತಿಮ ತೀರ್ಪನ್ನು ಏ. 16 ಕ್ಕೆ ಕಾಯ್ದಿರಿಸಿ ನ್ಯಾಯಾಧೀಶ ಅಣ್ಣಯನವರ ಆದೇಶಿಸಿದ್ದಾರೆ.
ಕುವೆಂಪು ನಗರದಲ್ಲಿ ನೆಲೆಸಿದ್ದ ಜವಳಿ ಉದ್ಯಮಿ ಪತ್ನಿ ರೀನಾ ಮಾಲಗತ್ತಿ ಹಾಗೂ ಇವರ ಪಕ್ಕದ ಮನೆಯ ಸಿಎ ವಿದ್ಯಾರ್ಥಿ ಪ್ರವೀಣ ಭಟ್ ನಡುವೆ ದೀರ್ಘಕಾಲದವರೆಗೆ ಅನೈತಿಕ ಸಂಬಂಧ ಇತ್ತು. ಈ ಸಂಬಂಧ ಹೊರಬರಬಾರದು ಎಂಬ ಕಾರಣಕ್ಕೆ ರೀನಾ ಮಾಲಗತ್ತಿ ಅವರನ್ನು 16 ಆಗಸ್ಟ್ 2015ರಂದು ರೀನಾ ಮಾಲಗತ್ತಿ , ಆದಿತ್ಯ ಮಾಲಗತ್ತಿ ಹಾಗೂ ಸಾಹಿತ್ಯ ಮಾಲಗತ್ತಿಯನ್ನು ಪ್ರವೀಣ ಭಟ್ ಬರ್ಬರವಾಗಿ ಹತ್ಯೆಗೈದಿದ್ದನು. ಈ ಘಟನೆ ಕುರಿತು ಆರೋಪಿ ಪ್ರವೀಣ ಭಟ್ ಬಂಧನನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪೆÇಲೀಸರ ಎದುರು ತಪೆÇ್ಪಪ್ಪಿಗೆ ಹೇಳಿಕೆ ನೀಡಿದ್ದನು. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

loading...