ಐಡಿ ಕಾಡ್೯ ತೋರಿಸಿದರೂ ಆರೋಗ್ಯಾಧಿಕಾರಿಗೆ ಲಾಠಿ ಏಟು ಕೊಟ್ಟ ಪೊಲೀಸ್ ಪೇದೆ

0
108

ಬೆಳಗಾವಿ

ಆರೋಗ್ಯ ಇಲಾಖೆ ಅಧಿಕಾರಿ ಮೇಲೆ ಪೊಲೀಸ್ ಪೇದೆ ದರ್ಪ ತೋರಿ ಪ್ರಜ್ಞಾಹೀನ ಸ್ಥಿತಿ ತಲುಪುವವರೆಗೂ ಹಲ್ಲೆಗೈದ ಪೊಲೀಸ್ ಪೇದೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಬೆಳಗಾವಿಯ ಗಾಂಧಿನಗರ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ವಿನಾಕಾರಣ ಆರೋಗ್ಯ ಇಲಾಖೆಯ ಅಧಿಕಾರಿ ಮೇಲೆ ಲಾಠಿ ಬೀಸಿದ ಪೇದೆ ದರ್ಪ‌ ಮೆರೆದಿದ್ದಾರೆ.
ಪೊಲೀಸರ ಏಟಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾದ ಆರೋಗ್ಯ ಇಲಾಖೆ ಅಧಿಕಾರಿ. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಸವರಾಜ ಡೊಳ್ಳಿನ ಗಾಯಾಳು ಅಧಿಕಾರಿ‌ ಮಹಾಂತೇಶ ನಗರ ಮನೆಯಿಂದ ಕಚೇರಿಗೆ ತೆರಳುತ್ತಿದ್ದ ಬಸವರಾಜ ಡೊಳ್ಳಿನ ಮೇಲೆ ಅಮಾನುಷವಾಗಿ ಪೊಲೀಸ್ ಪೇದೆ ಹಲ್ಲೆ ಮಾಡಿದ್ದಾರೆ‌.

ಆರೋಗ್ಯ ಇಲಾಖೆ ಅಧಿಕಾರಿ ಎಂದು ಐಡಿ ಕಾರ್ಡ್ ತೋರಿಸಿದರು ಕೇಳದೇ ಲಾಠಿ ಏಟು ನೀಡಿ ದರ್ಪ ಬಳಿಕ ಪೊಲೀಸರಿಂದಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

loading...