ಐತಿಹಾಸಿಕ ಪರಂಪರೆಯ ಬಂಡಿಹಾಳದ ಕೆರಿಬಸವೇಶ್ವರ ದೇಗುಲದ ಜಾತ್ರಾ ಮಹೋತ್ಸವ

0
23

ಎಸ್.ವೀರಯ್ಯ
ಯಲಬುರ್ಗಾ: ಯಲಬುರ್ಗಾ ತಾಲೂಕಿನÀ ಬಂಡಿಹಾಳ ಗ್ರಾಮದ ಕೆರಿಬಸವೇಶ್ವರ ಜಾತ್ರೆಯು ಮೇ ೭ ರಂದು ನಡೆಯಲಿದೆ. ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ರೈತರ ಕೃಷಿ ಚಟುವಟಿಕೆಗಳು ಭರ್ಜರಿಯಾಗಿ ನಡೆಯುವ ಸಮಯದಲ್ಲಿ ಅದ್ಧೂರಿಯಾಗಿ ಜರುಗುವ ಜಾತ್ರೆ ಇದಾಗಿದೆ.

ಕೆರಿಬಸವೇಶ್ವರನಿಗೆ ಸುಮಾರು ಸಾವಿರ ವರ್ಷಗಳ ಕಾಲದ ಇತಿಹಾಸವಿದೆ. ಈ ಗ್ರಾಮದಲ್ಲಿ ಒಂದು ಬೃಹತ್ ಕೆರೆ ಇದೆ. ಸುತ್ತ-ಮುತ್ತಲಿನ ಹತ್ತಾರು ಹಳ್ಳಿಗಳಿಗೆ ಜೀವ-ಜಲವಾಗಿರುವ ಈ ಕೆರೆ ನಿರ್ಮಾಣದ ಸಂದರ್ಭದಲ್ಲಿ ಅಪರೂಪವಾಗಿ ಪ್ರತ್ಯಕ್ಷವಾದ ಬಸವಣ್ಣನ ಮೂರ್ತಿಯನ್ನು ಕಂಡು ಗಾಬರಿಯಾದ ಗ್ರಾಮಸ್ಥರು ಮೂರ್ತಿಗೆ ಕೆರೆಬಸವೇಶ್ವರ ಎಂದು ನಾಮಕರಣ ಮಾಡಿ ಅಂದಿನಿಂದ ಪೂಜಿಸುತ್ತಾ ಬರುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಚಾರ ಹೆಚ್ಚಿದಂತೆ ಇಲ್ಲಿಗೆ ಹಂಪಿ ಅರಸರು ಕೆರೆ ವೀಕ್ಷಣೆಗೆಂದು ಆಗಮಿಸುತ್ತಾರೆ. ಇಲ್ಲಿನ ವಿಶಾಲವಾದ ಬೃಹತ್ ಕೆರೆಯನ್ನು ಕಂಡು ಸಂತೋಷಭರಿತರಾದ ನಿಜಾಮರು ಇಲ್ಲಿನ ದೇವಸ್ಥಾನಕ್ಕೆ ರಥೋತ್ಸವ ನಿರ್ಮಾಣ ಮಾಡುವಂತೆ ಗ್ರಾಮದ ಕುಲಕರ್ಣಿಗೆ ಸೂಚಿಸುತ್ತಾರೆ. ನಿಜಾಮರ ಸೂಚನೆಯಂತೆ ಕುಲಕರ್ಣಿಯವರು ಕುಷ್ಠಗಿ ತಾಲೂಕಿನ ಚಳಗೇರಿ ಗ್ರಾಮದಿಂದ ಸಿದ್ದನಗೌಡ ಪಾಟೀಲ ಎಂಬ ಶಿಲ್ಪಿಯನ್ನು ಕರೆಯಿಸಿ ರಥೋತ್ಸವ ನಿರ್ಮಾಣ ಮಾಡಿಸುತ್ತಾರೆ. ೧೦೧ ವರ್ಷಗಳಿಂದ ಸತತವಾಗಿ ಕೆರಿಬಸವೇಶ್ವರನ ರಥೋತ್ಸವ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿರುವದು ಭಕ್ತರ ಶ್ರಮಕ್ಕೆ ಸಿಕ್ಕ ಫಲವಾಗಿದೆ. ಈ ಗ್ರಾಮಕ್ಕೆ ಬೇಟಿ ನೀಡುವ ಪ್ರತಿಯೊಬ್ಬರೂ ಕೆರಿಬಸವೇಶ್ವರನ ಆಶೀರ್ವಾದ ಪಡೆದುಕೊಂಡೇ ಮುಂದೆ ಸಾಗುತ್ತಾರೆ ಇದರಿಂದ ಪ್ರತಿಯೊಬ್ಬರಿಗೂ ಒಳಿತಾಗುತ್ತದೆ ಎಂಬುದು ಜನರ ವಾಡಿಕೆ.
ವಿಶೇಷ: ಈ ದೇವಸ್ಥಾನದ ವಿಶೇಷವೆಂದರೆ ದೇವಸ್ಥಾನ ಮೇಲ್ಛಾವಣಿ ನಿರ್ಮಾಣ ಮಾಡಿದರೆ ಫಲಕಾರಿಯಾಗುವದಿಲ್ಲ ತನ್ನಿಂದಾನೆ ಕುಸಿದು ಬೀಳುತ್ತದೆ. ದೇವಸ್ಥಾನದ ಸುತ್ತಲೂ ಸುಂದರವಾದ ಗಿಡ-ಮರಗಳು ಇದ್ದರೂ ಮರಗಳ ನೆರಳು ಗರ್ಭಗುಡಿ ಮೇಲೆ ಬೀಳುವ ಮೊದಲೇ ಗಿಡದ ಆ ಕೊಂಪೆಗಳು ತುಂಡಾಗಿ ಬೀಳುತ್ತವೆ. ದೇವಸ್ಥಾನ ಇತಿಹಾಸದ ಮೂಲಗಳ ಪ್ರಕಾರ ಮರಳು, ನೀರು, ಕಲ್ಲು ಮತ್ತು ಕಟ್ಟಡ ಕಾರ್ಮಿಕರನ್ನು ವಿವಿಧ ಏಳು ಗ್ರಾಮಗಳಿಂದ ಕರೆಯಿಸಿ ಒಂದೇ ದಿನದಲ್ಲಿ ನಿರ್ಮಾಣ ಮಾಡಿದಾಗ ಮಾತ್ರ ಮೇಲ್ಚಾವಣಿ ನಿಲ್ಲುತ್ತದೆ ಎಂಬುದು ಇಲ್ಲಿನ ಪೂಜಾರಿಗಳ ವಾದವಾಗಿದೆ. ಇದು ದೈವಿ ಶಕ್ತಿ ಎನ್ನುತ್ತಾರೆ ಇಲ್ಲಿನ ಅಪಾರ ಭಕ್ತ ಬಳಗದವರು.

ಈ ಭಾಗದ ಜನರು ತಿಂಗಳ ಮುಂಚೆ ಸಭೆ ನಡೆಸಿ ತಮ್ಮದೇ ಆದ ಸಮಿತಿಯೊಂದನ್ನು ರಚಿಸಿಕೊಳ್ಳುತ್ತಾರೆ. ಅದರಿಂದ ಜಾತ್ರೆಯ ಖರ್ಚಿಗೆ ಅಗತ್ಯವಾದ ಹಣವನ್ನು ಸಂಗ್ರಹಿಸಿ ಬಸವಣ್ಣನಿಗೆ ಅಭಿಷೇಕ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಅನ್ನದಾಸೋಹ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ೨೦೧ ಮುತ್ತೆöÊದಿಯರಿಗೆ ಹುಡಿ ತುಂಬುವ ಕಾರ್ಯಕ್ರಮ, ೫೦೧ ಜೋಡಿ ಎತ್ತಿನ ಮೆರವಣಿಗೆ, ಜಾತ್ರೆಗೆ ತೊಂಡಿಹಾಳ, ಹಾಲಕೆರೆ, ನರೇಗಲ್, ಯಲಬುರ್ಗಾ, ಬಿನ್ನಾಳ, ಯರೇಹಂಚಿನಾಳ, ಕರಮುಡಿ, ಹಿರೇಮ್ಯಾಗೇರಿ, ಮುಧೋಳ, ಗದಗ, ಕೊಪ್ಪಳ ಸೇರಿದಂತೆ ಸುತ್ತ-ಮುತ್ತಲಿನ ಹಲವಾರು ಗ್ರಾಮಗಳಿಂದ ಭಕ್ತರು ಆಗಮಿಸಿ ಕೆರಿಬಸವೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.

loading...