ಐಪಿಎಲ್ ಟ್ರೋಫಿ ನೀಡಿದ ವಿವಾದ ಸಿಒಎನಲ್ಲಿ ಚರ್ಚೆ

0
3

ನವದೆಹಲಿ:- 12ನೇ ಆವೃತ್ತಿಯ ಐಪಿಎಲ್ ರೋಚಕತೆಯಿಂದ ಕೂಡಿತ್ತು, ಆದರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ನೀಡುವಾಗ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಮೇ 21ರಂದು ಮುಂಬೈ ನಲ್ಲಿ ನಡೆಯಲಿರುವ ಬಿಸಿಸಿಐ ಸಿಒಎ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಆಡಳಿತ ಮಂಡಳಿ ಸದಸ್ಯೆ ಡಯನಾ ಎಡುಲ್ಜಿ ಹಾಗೂ ಸಿಒಎ ಅಧ್ಯಕ್ಷ ಸಿಕೆ ಖನ್ನಾ ಅವರು ವಿಜೇತ ತಂಡಕ್ಕೆ ಟ್ರೋಫಿ ನೀಡಬೇಕಿತ್ತು. ಆದರೆ ಎಡುಲ್ಜಿ ಅವರು ಜೈಪುರ್ ನಲ್ಲಿ ಮಹಿಳಾ ಟಿ-20 ಚಾಂಪಿಯನ್ ಶಿಪ್ ವಿಜೇತ ತಂಡಕ್ಕೆ ಟ್ರೋಫಿ ನೀಡಿದ್ದರು.
ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೊಂದು ಪ್ರಸ್ತಾವನೆ ಸಹ ಇತ್ತು. ಅದರಂತೆ ಎಡುಲ್ಬಿ ಹಾಗೂ ಖನ್ನಾ ಅವರು ಇಬ್ಬರೂ ಸೇರಿ ಟ್ರೋಫಿ ನೀಡುವುದಾಗಿಯೂ ಮಾತುಕತೆ ನಡೆದಿತ್ತು. ಆದರೆ ಮೇ 8 ರಂದು ನಡೆದ ಸಭೆಯಲ್ಲಿ ಸಿಕೆ ಖನ್ನಾ ಅವರೇ ಪ್ರಶಸ್ತಿ ನೀಡುವ ಬಗ್ಗೆ ಅಂತಿಮಗೊಳಿಸಲಾಗಿತ್ತು. ಇನ್ನು ಸಿಒಎ ಇನ್ನೋರ್ವ ಸದಸ್ಯರಿಗೆ ಎಡುಲ್ಜಿ ಪ್ರಶಸ್ತಿ ನೀಡುವುದು ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ.
ಹೈದರಾಬಾದ್ ನಲ್ಲಿ ನಡೆದ ಫೈನಲ್ ನಲ್ಲಿ ವಿಜೇತ ತಂಡಕ್ಕೆ ಸಿಕೆ ಖನ್ನಾ ಪ್ರಶಸ್ತಿ ನೀಡಿದ್ದರು.

loading...