ಐಸ್ ಹಾಕಿ: ಇಟಲಿಗೆ ಸತತ ನಾಲ್ಕನೇ ಸೋಲು; ದಾಖಲೆ ಜಯ ಸಾಧಿಸಿದ ರಷ್ಯಾ

0
3

ಬ್ರಾಟಿಸ್ಲಾವಾ:-ಸ್ಲೋವಾಕಿಯಾದಲ್ಲಿ ನಡೆಯುತ್ತಿರುವ ಐಸ್ ಹಾಕಿ ವಿಶ್ವ ಚಾಂಪಿಯನಶಿಪ್ ನಲ್ಲಿ ರಷ್ಯಾ ತನ್ನ ಗೆಲುವಿನ ಅಭಿಯಾನ ಮುಂದುವರಿಸಿದ್ದು, ಪ್ರಾಥಮಿಕ ಹಂತದ ಪಂದ್ಯದಲ್ಲಿ ಇಟಲಿ ವಿರುದ್ಧದ ಪಂದ್ಯದಲ್ಲಿ 10-0ರಿಂದ ಗೆಲುವು ಸಾಧಿಸಿದೆ.ಸತತ ನಾಲ್ಕನೇ ಸೋಲು ಕಂಡು ಯಾವುದೇ ಗೋಲು ಗಳಿಸದ ಇಟಲಿ ತಂಡ “ಬಿ” ಗುಂಪಿನ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಇಟಲಿ ದಾಳಿಯನ್ನು ಸಮಪರ್ಮಕವಾಗಿ ಎದುರಿಸಿದ ರಷ್ಯಾದ ಗೋಲ್ ಟೆಂಡರ್ ಆಂಡ್ರೇ ವಾಸಿಲಿವ್ಸ್ಕಿ, 15 ಗೋಲಿಗಳನ್ನು ಹೊಡೆಯುವ ಅವಕಾಶಗಳನ್ನು ತಡೆದು ತಂಡಕ್ಕೆ ನೆರವಾದರು. ಇದೇ ವೇಳೆ ರಷ್ಯಾ ಆಟಗಾರರ ದಾಳಿಯನ್ನು ಎದುರಿಸಲು ವಿಫರರಾದ ಇಟಲಿಯ ಗೋಲ್ ಟೆಂಡರ್ ಗಳಾದ ಆಂಡ್ರಿಯಾಸ್ ಬರ್ನಾರ್ಡ್ ಹಾಗೂ ಮಾರ್ಕೊ ಡೆ ಫಿಲಿಪ್ಪೊ ರೋಯಾ 10 ಗೋಲುಗಳನ್ನು ಬಿಟ್ಟುಕೊಟ್ಟರು.
ಇಟಲಿಯನ್ನು 10-0ರಿಂದ ಸದೆ ಬಡಿದ ರಷ್ಯಾ ತಂಡದ, ಉನ್ನತ ಮಟ್ಟದ ಟೂರ್ನಾಮೆಂಟ್ ಗಳಲ್ಲಿನ ಅತ್ಯುತ್ತಮ ಹಾಗೂ ಸ್ಲೋವಾಕಿಯಾದಲ್ಲಿ ನಡೆಯುತ್ತಿರುವ ಐಸ್ ಹಾಕಿ ವಿಶ್ವ ಚಾಂಪಿಯನಶಿಪ್ ನ ದಾಖಲೆ ಜಯವಾಗಿದೆ.
ಬ್ರಾಟಿಸ್ಲಾವಾದಲ್ಲಿ ಗೋಲುಗಳ ತೀವ್ರ ಬರ ಎದುರಿಸುತ್ತಿದ್ದ ಸ್ಟಾರ್ ಆಟಗಾರ ಅಲೆಕ್ಸಾಂಡರ್ ಒವೆಚ್ಕಿನ್ಸ್, ಮೊದಲ ಕಾಲಾವಧಿಯಲ್ಲಿ ರಷ್ಯಾಕ್ಕೆ ಮೊದಲ ಗೋಲು ಗಳಿಸಿಕೊಡುವ ಮೂಲಕ ತಮ್ಮ ದಾಹವನ್ನು ನೀಗಿಸಿಕೊಂಡರು. ಇವರ ನಂತರ ಯೆವ್ಜೆನಿಸ್, ದಾಡೋನೊವ್ ಮತ್ತು ಕುಜ್ನೆಟ್ಸೊವ್ ತಲಾ ಎರಡು ಗೋಲುಗಳನ್ನು ಹೊಡೆದು ತಂಡವನ್ನು 7-0ರಿಂದ ಮುನ್ನಡೆ ನೀಡಿದರು. ಪಂದ್ಯದ ಕೊನೆಯಾರ್ಧದಲ್ಲಿ ಅಲೆಕ್ಸಾಂಡರ್ ಒವೆಚ್ಕಿನ್ಸ್ ಸತತ ಎರಡು ಗೋಲುಗಳನ್ನು ಬಾರಿಸಿ ತಂಡಕ್ಕೆ ದಾಖಲೆ ಜಯ ತಂದುಕೊಟ್ಟರು.
ಚಾಂಪಿಯನಶಿಪ್ ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿರುವ ರಷ್ಯಾ “ಬಿ” ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಶನಿವಾರ ಲಾಟ್ವಿಯಾವನ್ನು ಎದುರಿಸಲಿದೆ. ಸತತ ನಾಲ್ಕು ಸೋಲು ಕಂಡಿರುವ ಇಟಲಿ ಶುಕ್ರವಾರ ಝೆಕ್ ಗಣರಾಜ್ಯದ ವಿರುದ್ಧ ಮೊದಲ ಜಯಕ್ಕಾಗಿ ಸೆಣಿಸಲಿದೆ.

loading...